ಚಿತ್ತಾಪುರ: ಗ್ರಾ.ಪಂ ಮೀಸಲಾತಿ ಪ್ರಕಟ

7

ಚಿತ್ತಾಪುರ: ಗ್ರಾ.ಪಂ ಮೀಸಲಾತಿ ಪ್ರಕಟ

Published:
Updated:

ಚಿತ್ತಾಪುರ: ತಾಲೂಕ್ಲಿನ 35 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಅವಧಿಯ ಮೀಸಲಾತಿಯನ್ನು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಬುಧವಾರ ಪ್ರಕಟಿಸಿದರು.ಕಾಳಗಿ:  ಅಧ್ಯಕ್ಷ(ಹಿಂದುಳಿದವರ್ಗ-ಅ), ಉಪಾಧ್ಯಕ್ಷ (ಹಿಂದುಳಿದ ವರ್ಗ-ಬಿ, ಮಹಿಳೆ), ಮಾಡಬೂಳ: ಅಧ್ಯಕ್ಷ (ಹಿಂದುಳಿದ ವರ್ಗ-ಅ), ಉಪಾಧ್ಯಕ್ಷ (ಎಸ್.ಸಿ-ಮಹಿಳೆ), ಭಾಗೋಡಿ: (ಹಿಂದುಳಿದ ವರ್ಗ-ಅ, ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮರತೂರ: ಅಧ್ಯಕ್ಷ (ಹಿಂದುಳಿದ ವರ್ಗ-ಅ ಮಹಿಳೆ), ಉಪಾಧ್ಯಕ್ಷ  (ಸಾಮಾನ್ಯ), ಅಲ್ಲೂರ (ಬಿ): ಅಧ್ಯಕ್ಷ (ಹಿಂದುಳಿದ ವರ್ಗ-ಬಿ ಮಹಿಳೆ), ಉಪಾಧ್ಯಕ್ಷ (ಎಸ್.ಸಿ), ಇಂಗಳಗಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ ಮಹಿಳೆ), ಹೆಬ್ಬಾಳ್: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ ಮಹಿಳೆ) ವರ್ಗಕ್ಕೆ ಮೀಸಲಾತಿ ನಿಗದಿಯಾಗಿದೆ.ನಾಲವಾರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಟಿ ಮಹಿಳೆ), ಯಾಗಾಪುರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ಗೋಟೂರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ ಮಹಿಳೆ), ಸಾತನೂರ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ), ಅರಣಕಲ್: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಲಕಟ್ಟಾ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ದಂಡೋತಿ: ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ ಮಹಿಳೆ), ಗುಂಡಗುರ್ತಿ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ನಿಗದಿಯಾಗಿದೆ.ಕೊಡದೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್.ಸಿ), ರಾಜಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್.ಸಿ), ಹೊನಗುಂಟಾ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್.ಸಿ), ಕೊಲ್ಲೂರ: ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ).ಇಲಿಝಾರೋವ್: ಶಸ್ತ್ರಕ್ರಿಯೆ

ಗುಲ್ಬರ್ಗ: ನಗರದ ಖಾಜಾ ಬಂದಾನವಾಜ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಅಸ್ಥಿ ಮತ್ತು ಕೀಲುಗಳ ವಿಭಾಗದ ವತಿಯಿಂದ ಇಲಿಝಾರೋವ್ ಪದ್ಧತಿಯ ಅಸ್ಥಿ ಜೋಡಣೆಯ ಶಸ್ತ್ರಕ್ರಿಯೆಯ ನೇರ ಪ್ರಸಾರ ಮಾಡಲಾಯಿತು.ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಹರ್ಷದ್ ಶಹಾ ಶಸ್ತ್ರಕ್ರಿಯೆ ನೆರವೇರಿಸಿದರು.  ತೊಡೆಯ ಎಲುಬಿನ ಜೋಡಣೆ ಆಗದ ಎಲುಬನ್ನು ಕತ್ತರಿಸಿ, ತೊಡೆಯ ಹೊರಗಿನಿಂದ ಎಲುಬು ಜೋಡಣೆ ಆಗುವಂತೆ ಅಳವಡಿಸಲಾಯಿತು.ಡಾ. ಸಚಿನ್ ಶಹಾ, ಡಾ. ಮೊಹ್ಮದ್ ಇಬ್ರಾಹಿಂ, ಡಾ. ಸದಾಶಿವ ಜಿಡಗೇಕರ, ಡಾ. ಮೊಹಮ್ಮದ್ ಅಸೀಮುದ್ದಿನ್ ಸಹಕಾರದಲ್ಲಿ ಶಸ್ತ್ರಕ್ರಿಯೆ ನಡೆಸಲಾಯಿತು. ಈ ಶಸ್ತ್ರಕ್ರಿಯೆ ಕಾರ್ಯಾಗಾರದಲ್ಲಿ ಡಾ. ನಜೀರ ಅಹ್ಮದ ಬೆಂಡಿಗೇರಿ, ಡಾ ಶಿವರಾಜ ಆಲರೆಡ್ಡಿ ಮತ್ತಿತರರು ಇದ್ದರು. ಕಾರ್ಯಾಗಾರದಲ್ಲಿ ಆರು ಜಿಲ್ಲೆಗಳ ಅಸ್ಥಿರೋಗ ತಜ್ಞರು, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಿವಿಧ ಸ್ಪರ್ಧೆ- ಸೂಚನೆ

ಗುಲ್ಬರ್ಗ: ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಮಟ್ಟದ 12 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಿದ್ದು, ಅರ್ಜಿ ಆಹ್ವಾನಿಸಿದೆ. ವಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯ ಮಾನವಹಕ್ಕುಗಳ ಕಲ್ಯಾಣ ಮಂಡಳಿ  ಆಶ್ರಯದಲ್ಲಿ ಬಸವ ಸಂಸ್ಕೃತಿ ಉತ್ಸವ ನಿಮಿತ್ತ ನ.20ರಂದು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಾಷಣ, ಹಾಡುಗಾರಿಕೆ, ನೃತ್ಯ, ಜಾನಪದ ಮೊದಲಾದ ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಹಾಶಿಂಪೀರ ವಾಲಿಕಾರ  (94480 35775) ಅವರನ್ನು ಸಂಪರ್ಕಿಸ ಬಹುದು.ಅರ್ಜಿ ಆಹ್ವಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಂದ ರಾಜ್ಯ ಮಟ್ಟದ ಸದ್ಭಾವನಾ ಪ್ರಶಸ್ತಿ ಪುರಸ್ಕಾರಕ್ಕಾಗಿ ಇದೇ ಸಂಸ್ಥೆಯು ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಈರಣ್ಣ ಮಾಮನೆ (ಮೊಬೈಲ್ 97391 98828) ಸಂಪರ್ಕಿಸಲು ಕೋರಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry