ಸ್ನೇಹಕ್ಕೆ ಬೆಂಕಿಯಿಟ್ಟ ಭೂಪ!

7

ಸ್ನೇಹಕ್ಕೆ ಬೆಂಕಿಯಿಟ್ಟ ಭೂಪ!

Published:
Updated:

ಕಾಳಗಿ: ಉದ್ಯೋಗಕ್ಕಾಗಿ ಅಲೆದಾಡುತ್ತ ಬಂದ ಯುವಕನ್ನೊಬ್ಬ ಇಲ್ಲಿರುವ ಮತ್ತೊಬ್ಬನ ಸ್ನೇಹ ಬೆಳೆಸಿ ಕೆಲಕಾಲ ಅವನೊಂದಿಗೆ ಇದ್ದು ಕೊನೆಗೆ ಅವನಿಲ್ಲದ ವೇಳೆ ನೋಡಿ ಬಾಡಿಗೆಯ ಮನೆಗೆ ಬೆಂಕಿಹಚ್ಚಿ ಓಡಿ ಹೋದ ಘಟನೆಯೊಂದು ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಬಸವರಾಜ ಗುಂಡಪ್ಪ ಮಾಕಪ್ಪನೋರ ಎಂಬುವರ ಮನೆಯೇ ಬೆಂಕಿಗೆ ಆಹುತಿಯಾದ ಬಾಡಿಗೆ ಮನೆಯಾಗಿದೆ.ವಿವರ:  ಡಿಟಿಎಚ್ ಕಂಪೆನಿ ಸರ್ವಿಸ್ ಮ್ಯಾನ್ ಆಗಿ ಕಾಳಗಿ ಒಳಗೊಂಡು ಸುತ್ತಲಿನ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದ ಆಳಂದ ತಾಲ್ಲೂಕಿನ ಕರಾರಿ ಗ್ರಾಮದ ದಿಲೀಪ್ ರಾಮು ರಾಠೋಡ  ಒಂಬತ್ತು ತಿಂಗಳಿಂದ ಇಲ್ಲಿನ ಬಸವರಾಜ ಗುಂಡಪ್ಪ ಮಾಕಪ್ಪನೋರ ಎಂಬುವರ ಮನೆಯಲ್ಲಿ ಬಾಡಿಗೆ ಕೋಣೆಯೊಂದು ಹಿಡಿದುಕೊಂಡು ವಾಸವಾಗಿದ್ದನು ಎನ್ನಲಾಗಿದೆ.ತಾನಾಯಿತು, ತನ್ನ ಕರ್ತವ್ಯವಾಯಿತು ಎಂದುಕೊಂಡಿದ್ದ ದಿಲೀಪ್‌ಗೆ ಕಳೆದೊಂದು ತಿಂಗಳ ಹಿಂದೆ ಹುಮನಾಬಾದ ತಾಲ್ಲೂಕಿನ ಕಿಣ್ಣಿ ಗ್ರಾಮದ ರಮೇಶ ಪೂಜಾರಿ ಎಂಬುವನು ಪರಿಚಯ ಮಾಡಿಕೊಂಡಿದ್ದ. ಕೀಟನಾಶಕದ ಪ್ರಚಾರಕನನ್ನಾಗಿ ಕೆಲಸ ಮಾಡುತ್ತಿದ್ದ ಅವನು, ದಿಲೀಪ್‌ನೊಂದಿಗೆ ಸ್ನೇಹ ಬೆಳೆಯಲಾರಂಭಿಸಿ ಅವನಿದ್ದ ಬಾಡಿಗೆ ಮನೆಯಲ್ಲೇ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ.ಈ ಮಧ್ಯೆ ದಿಲೀಪ್ ಇಲ್ಲದಿರುವ ಸಮಯ ಸಾಧಿಸಿದ ರಮೇಶನು ಬುಧವಾರ ರಾತ್ರಿ ಬಾಡಿಗೆ ಮನೆಗೆ ಬೆಂಕಿಹಚ್ಚಿ ಪರಾರಿಯಾಗಿದ್ದಾನೆ.ರಾತ್ರಿ 11.30ರ ಸುಮಾರಿಗೆ ಹೊತ್ತಿ ಉರಿದ ಈ ಬೆಂಕಿಗೆ ದಿಲೀಪ್‌ನ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ಕೋರ್ಸಿನ ಪ್ರಮಾಣ ಪತ್ರಗಳು, ಒಂದು ಟಿವಿ, ಕೇಬಲ್ ವೈಯರ್, ಬಟ್ಟೆಬರೆ ಹಾಗೂ ಮನೆ ಮೇಲ್ಭಾಗದ ಇಟ್ಟಿಗೆಗಳು ಮತ್ತು ವಿದ್ಯುತ್‌ನ ಹೊಸ ಫಿಟಿಂಗ್ ಸುಟ್ಟು ಹಾಳಾಗಿವೆ. ದಿನಬಳಕೆಯ ಇತರೆ ಸಾಮಾನುಗಳು ಸುಟ್ಟು ಕರಕಲಾಗಿದ್ದು ಅಂದಾಜು 70ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ     ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry