ಕೊರಾಜೆನ್- ತೊಗರಿ ಹೆಚ್ಚಳ

7

ಕೊರಾಜೆನ್- ತೊಗರಿ ಹೆಚ್ಚಳ

Published:
Updated:

ಗುಲ್ಬರ್ಗ: `ಕಷ್ಟಪಟ್ಟು ತೊಗರಿ ಬೆಳೆದರೂ ಇಳುವರಿ ಮಾತ್ರ ಕಡಿಮೆಯಾಗುವುದನ್ನು ನೋಡಿ, ತೊಗರಿ ಬೆಳೆಯುವುದರಿಂದ ಯಾವ ರೈತರು ಉದ್ಧಾರವಾಗುವುದಿಲ್ಲ ಎಂದು ಹೇಳುತ್ತಿದೆ, ತೊಗರಿ ಖರೀದಿಸಿದ ಮಾಲೀಕರ ಸಲಹೆಯಂತೆ ಕಳೆದ ವರ್ಷ ಡುಪಾಂಟ್ ಕಂಪೆನಿಯ ಕೊರಾಜೆನ್ ಕೀಟನಾಶಕವನ್ನು ಸಿಂಪರಣೆ ಮಾಡಿದೆ. ಕೀಟ ಬಾಧೆ, ತೊಗರಿಯಲ್ಲಿ ಹೂವು ಉದುರುವುದು ಸಂಪೂರ್ಣ ನಿಂತಿದೆ. ಅಲ್ಲದೆ ಪ್ರತಿ ಎಕರೆಗೆ ಕಷ್ಟಪಟ್ಟು 4 ಕ್ವಿಂಟಲ್ ಬೆಳೆಯುತ್ತಿದ್ದ ತೊಗರಿ, ಈಗ 6.5 ಕ್ವಿಂಟಲ್ ಬರಲಾರಂಭಿಸಿದೆ~ ಎಂದು ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಶರಣಬಸಪ್ಪಾ ಎಸ್. ವಾಲಿ ಹೇಳಿದರು.ಗುಲ್ಬರ್ಗ ತಾಲ್ಲೂಕಿನ ಸಾವಳಗಿ ಗ್ರಾಮದ ರೈತ ಮಲ್ಲಿಕಾರ್ಜುನ ಎಸ್. ಕಲಬುರ್ಗಿ ಅವರ ಜಮೀನಿನಲ್ಲಿ ಗುರುವಾರ ಆಯೋಜಿಸಿದ್ದ ಭಾರತದ ಆಹಾರ ಭದ್ರತೆಯಲ್ಲಿ ಗುಲ್ಬರ್ಗ ರೈತರ ಕೊಡುಗೆ ಕುರಿತು ಡುಪಾಂಟ್ ಕಂಪೆನಿಯು ತೊಗರಿ ಬೆಳೆ ಕ್ಷೇತ್ರ ವೀಕ್ಷಣೆಯಲ್ಲಿ ಮಾತನಾಡಿದರು. ಈಗಾಗಲೇ ಕೊರಾಜೆನ್ ಬಳಸಿ ಇಳುವರಿ ಹೆಚ್ಚಿಸಿಕೊಂಡು ಅನುಭವ ವ್ಯಕ್ತಪಡಿಸಿದ ರೈತರಾದ ಮಲ್ಲಿಕಾರ್ಜುನ್ ಎಸ್. ಕಲಬುರ್ಗಿ, ಶರಣಬಸಪ್ಪ ಎಸ್. ವಾಲಿ, ಅಮೃತರಾವ ವಿ. ಈಶ್ವರಗುಂಡ ಅವರನ್ನು ಸನ್ಮಾನಿಸಲಾಯಿತು. ಕೊರಾಜೆನ್ ಬಳಕೆ ಮಾಡಿದ್ದನ್ನು ವೀಕ್ಷಿಸಲು ಆಗಮಿಸಿದ್ದ ಜಿಲ್ಲೆಯ ವಿವಿಧ ಗ್ರಾಮಗಳ ರೈತರು ಕಂಪೆನಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.ದಕ್ಷಿಣ ಏಷ್ಯಾ ಸೇಲ್ಸ್ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್. ಗಿರಿಧರನ್ ಮಾತನಾಡಿ, `ಸುಸ್ಥಿರ ಕೃಷಿಗೆ ಅಗತ್ಯವಾಗುವ ಸುರಕ್ಷಿತ ತಂತ್ರಜ್ಞಾನವನ್ನು ಡುಪಾಂಟ್ ಕಂಪೆನಿಯು ಜಾರಿಗೊಳಿಸುತ್ತಿದೆ. ಜಾಗತಿಕವಾಗಿ ಆಹಾರ ಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಕಂಪೆನಿಯು ಅನೇಕ ದೇಶಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ನಡೆಸುವುದರೊಂದಿಗೆ, ಸ್ಥಳೀಯ ಸಂಶೋಧನಾ ಕೇಂದ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ~ ಎಂದರು.ದಕ್ಷಿಣ ಏಷ್ಯಾ ಮಾರುಕಟ್ಟೆ ಅಭಿವೃದ್ಧಿ ವ್ಯವಸ್ಥಾಪಕ ಪ್ರಮೋದ ಕಡಕೋಳ ಮಾತನಾಡಿ, `ಕೊರಾಜೆನ್ ಕೀಟನಾಶಕವನ್ನು ಡುಪಾಂಟ್ ಕಂಪೆನಿಯು ಏಕಕಾಲಕ್ಕೆ ಬಿಡುಗಡೆಗೊಳಿಸುವುದರೊಂದಿಗೆ ಅನೇಕ ರೈತರ ಜೀವನ ಬದಲಾವಣೆಗೆ ಕಾರಣವಾಗಿದೆ. ಮಿತ್ರ ಕೀಟಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ~ ಎಂದು ವಿವರಿಸಿದರು.ಜಿಲ್ಲಾ ಕೃಷಿ ಸಂಶೋಧನಾ ಕೇಂದ್ರದ ಸುಹಾಸ ತೇಲಶೆಟ್ಟಿ ಮಾತನಾಡಿ, `2004ರಲ್ಲಿ ಕೊರಾಜೆನ್‌ನ್ನು ಸಂಶೋಧನಾ ಕೇಂದ್ರಕ್ಕೆ ಪರೀಕ್ಷೆಗಾಗಿ ನೀಡಲಾಯಿತು. ಸತತ ಮೂರು ವರ್ಷ ಅದರ ಕಾರ್ಯವಿಧಾನ ಹಾಗೂ ಅಪಾಯಗಳನ್ನು ಪಟ್ಟಿ ಮಾಡಲಾಯಿತು. ಕೀಟ ನಿರ್ವಹಣೆಯಲ್ಲಿ ಇದನ್ನು ಪ್ರಮುಖವಾಗಿ ಬಳಸಲು ರೈತರಿಗೆ ಶಿಫಾರಸು ಮಾಡಲಾಗುತ್ತಿದೆ~ ಎಂದರು.ಜಿಲ್ಲಾ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಜಿವಣಗಿ ಮಾತನಾಡಿ, `ಪ್ರಸ್ತುತ ಸನ್ನಿವೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸುವುದು ಮುಖ್ಯವಲ್ಲ. ಸುರಕ್ಷಿತ ಆಹಾರಕ್ಕೆ ಹೆಚ್ಚಿನ ಮಹತ್ವ ಬರುತ್ತಿದೆ. ಹೀಗಾಗಿ ಡುಪಾಂಟ್ ಕಂಪೆನಿಯು ಬಡುಗಡೆಗೊಳಿಸಿದ ಕೊರಾಜೆನ್ ಪರಿಸರಕ್ಕೆ ಪೂರಕವಾಗಿರುವುದು ಒಳ್ಳೆಯ ಅಂಶ~ ಎಂದರು.ಕೊರಾಜೆನ್‌ಗೆ `ಹಸಿರು ಸಂಕೇತ~

ಕೃಷಿ ಬೆಳೆಗಳ ಕೀಟಗಳ ಹೊರತಾಗಿ ಇತರೆ ಜೀವಿಗಳಿಗೆ ಯಾವ ಪ್ರಮಾಣದಲ್ಲಿ ಅಪಾಯಕಾರಿ ಎನ್ನುವ ಅಂಶವನ್ನು ಪರಿಗಣಿಸಿ ಕೀಟ ನಾಶಕಗಳಿಗೆ ಹಳದಿ, ನೀಲಿ, ಕೆಂಪು ಹಾಗೂ ಹಸಿರು ಪಟ್ಟಿಗಳನ್ನು ಘೋಷಿಸಲಾಗುತ್ತದೆ. ಅತಿ ವಿರಳವಾಗಿ ದೊರೆಯುವ ಹಸಿರು ಪಟ್ಟಿಯನ್ನು ಕೋರಾಜೆನ್ ಕೀಟನಾಶಕಕ್ಕೆ ಅಮೆರಿಕ ಸರ್ಕಾರ ನೀಡಿದೆ.ಕಾಯಿಕೊರೆ ಹುಳು, ನೊಣಗಳ ಸ್ನಾಯುಗಳ ಮೇಲೆ ದಾಳಿ ಮಾಡುವುದು, ದೀರ್ಘಕಾಲ ಕೀಟಗಳು ಬೆಳೆಗೆ ಬಾರದಂತೆ ಸುರಕ್ಷತೆ ಒದಗಿಸುವ ಕೆಲಸವನ್ನು ಕೊರಾಜೆನ್ ಮಾಡುತ್ತದೆ.ಎರೆಹುಳು, ಮಣ್ಣು, ಜಲಚರಗಳಿಗೆ ಯಾವುದೇ ಹಾನಿಯನ್ನು ಕೊರಾಜೆನ್ ಮಾಡುವುದಿಲ್ಲ. ಈ ಅಂಶವನ್ನು ಪರಿಗಣಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊರಾಜೆನ್ ಉತ್ಪಾದನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಎಂದು ಡುಪಾಂಟ್ ಅಧಿಕಾರಿಗಳು ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry