ಚಿಂಚೋಳಿ ಬಂದ್ ಪೂರ್ಣ

7

ಚಿಂಚೋಳಿ ಬಂದ್ ಪೂರ್ಣ

Published:
Updated:

ಚಿಂಚೋಳಿ:  ಪಟ್ಟಣದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಕಳ್ಳತನ ಪ್ರಕರಣ ತಡೆಯುವಲ್ಲಿ ವಿಫಲವಾಗಿರುವ ಪೊಲೀಸರ ಧೋರಣೆಯನ್ನು ಉಗ್ರವಾಗಿ ಖಂಡಿಸಿದ ನಾಗರಿಕರು, ಟೈರ್‌ಗಳಿಗೆ ಬೆಂಕಿ ಹಚ್ಚಿ ಸಂಚಾರ ತಡೆದು, ಅಂಗಡಿ ಮುಂಗಟ್ಟು ಮುಚ್ಚಿ ಶುಕ್ರವಾರ `ಚಿಂಚೋಳಿ ಬಂದ್~ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ಅವಧಿ(ಒಂದೇ ರಾತ್ರಿ)ಯಲ್ಲಿ ಶಂಕರ ಹೋಟೆಲ್ 10 ಸಾವಿರ, ಪ್ರವೀಣ ಕುಲ್ಕರ್ಣಿ 1 ತೊಲ ಬಂಗಾರ, ನಗದು ರೂ. 25ಸಾವಿರ, ಸಿರಾಜ್ ಪಟೇಲ್ ಒಂದು ತೊಲ ಬಂಗಾರ, ಸುಭಾಷ್ ಘಾಲಿ 5 ಸಾವಿರ , ಸರದಾರ ಪಟೇಲ್ ಒಂದುವರೆ ತೊಲ ಬಂಗಾರ, ನಗದು ಹಣ, ಪ್ರಾಣೇಶ ಜೋಷಿ 25 ಸಾವಿರ ನಗದು, ಒಂದು ತೊಲ ಬಂಗಾರ, ಶ್ರೀನಿವಾಸ ನಾಯನೂರು (ಹಿರೊ ಫ್ಯಾಶನ್) ದ್ವಿಚಕ್ರ ವಾಹನ ಕಳ್ಳತನ ನಡೆಸಿದ ಕಳ್ಳರು, ಒಟ್ಟು 4.5 ತೊಲಾ ಬಂಗಾರ, 67 ಸಾವಿರ ಹಾಗೂ 1 ದ್ವಿಚಕ್ರ ವಾಹನ ದೋಚಿದ್ದಾರೆ. ಜತೆಗೆ ಅಂಬಾದಾಸ ಹಾಗೂ ಪಾಪಡದವರ ಮನೆ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ಐಜಿಪಿಗೆ ಬರೆದ ದೂರಿನಲ್ಲಿ ತಿಳಿಸಿದ್ದಾರೆ.ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ಕೆ.ಎಂ ಬಾರಿ, ಗೋಪಾಲರಾವ್ ಕಟ್ಟೀಮನಿ, ಅಜೀತ ಬಾಬುರಾವ್ ಪಾಟೀಲ, ಶ್ರೀನಿವಾಸ ಬಂಡಿ, ಭೀಮಾಶಂಕರ ಕಳಸ್ಕರ್, ವೆಂಕಟಿ ಮಂತನಗೋಡ್, ಮಲ್ಲಪ್ಪ ಹಳಿಮನಿ, ಗೌತಮ ವೈಜನಾಥ ಪಾಟೀಲ, ಕೆ.ಎಂ ಹಾಷ್ಮೀ, ಕೆ.ಎಂ ಅಮೀರ್, ಸುಭಾಷ್ ಘಾಲಿ, ಶಾಮರಾವ್ ಕೊರವಿ, ಓಮನರಾವ್, ಅಯ್ಯುಬಖಾನ್, ಸಯ್ಯದ್ ನಿಯಾಜ್ ಅಲಿ, ಸಲೀಮ್, ಮಕದ್ದುಮ್ ಮುಂತಾದವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.ಡಿವೈಎಸ್ಪಿ ಪರಶುರಾಮ ಕೋರವಾರ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಇಸ್ಮಾಯಿಲ್ ಶರೀಫ್ ಪ್ರತಿಭಟನಾನಿರತರ ಜತೆ ಸಂಧಾನ ನಡೆಸಿದರೂ ಚಳವಳಿ ಕೈಬಿಡದ ಜನ, ಸಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದು ನಡು ರಸ್ತೆಯಲ್ಲಿ ಧರಣಿ ಕುಳಿತರು.11.30ಕ್ಕೆ ಆಗಮಿಸಿದ ಹೆಚ್ಚುವರಿ ಎಸ್.ಪಿ ಕಾಶಿನಾಥ ತಳಕೇರಿ ಸಮಾಧಾನದಿಂದ ಜನರ ಅಭಿಪ್ರಾಯ ಕೇಳಿ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ನೀಡುತ್ತೇನೆ. 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳ್ಳತನ ಪ್ರಕರಣ ಸಂಭವಿಸದಂತೆ ಮಾಡಲು ಪೊಲೀಸ್ ಗಸ್ತು ಹೆಚ್ಚಿಸುತ್ತೇವೆ ಎಂದು ಅಭಯ ನೀಡಿ ಖಾಲಿ ಇರುವ ಪೊಲೀಸರ ಹುದ್ದೆಗಳನ್ನು ನಿಯೋಜನೆ ಮೇರೆಗೆ ಭರ್ತಿ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಚಳವಳಿ ವಾಪಸ್ ಪಡೆದರು.ಸೆಪ್ಟೆಂಬರ್ 20ರಂದು ಒಂದೇ ರಾತ್ರಿ 3 ಮನೆ ಕಳ್ಳತನ ನಡೆದು ನಗದು 74 ಸಾವಿರ  ಹಾಗೂ 2.39 ಲಕ್ಷ ಮೌಲ್ಯದ ಆಭರಣ ದೋಚಿರುವುದು ಹಚ್ಚ ಹಸಿರಿರುವಾಗಲೇ, ಸೋಮವಾರ (ಅ.8ರಂದು) ಕಳ್ಳತನಕ್ಕೆ ಯತ್ನಿಸಿದ ರವಿ ಕುರಕುಂಟಾ ಎಂಬುವವನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.ಆಗ ತಾವು ನಡೆಸಿದ ಹಲವು ಕಳ್ಳತನ ಪ್ರಕರಣ ಮತ್ತು ತಮ್ಮ ಗುಂಪಿನ ಬಗ್ಗೆ ರವಿ ಕುರಕುಂಟಾ ಪೊಲೀಸರಿಗೆ ವಿವರವಾದ ಮಾಹಿತಿ ತಿಳಿಸಿದರೂ ಕ್ರಮ ಕೈಗೊಳ್ಳದ ಪೊಲೀಸರ ಕ್ರಮವನ್ನು ಜನತೆ ಖಂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry