ತಬಲಾ ಮಾಂತ್ರಿಕನಿಗೆ ಪ್ರಶಸ್ತಿ

7

ತಬಲಾ ಮಾಂತ್ರಿಕನಿಗೆ ಪ್ರಶಸ್ತಿ

Published:
Updated:

ಗುಲ್ಬರ್ಗ: ಇವರು ನಾ ದೀನ್ ದಿನ್ನಾ, ನಾದೀನ್ ದಿನ್ನಾ... ಎಂದು ತಬಲಾ ನುಡಿಸುತ್ತಿದ್ದರೆ ಎಂಥವರೂ ಮಂತ್ರಮುಗ್ಧರಾಗುತ್ತಾರೆ. ಅಮೀರ್ ಖುಸ್ರೋ ಹೆಸರಿನ ದಿಲ್ಲಿ ಘರಾನಾ ಶೈಲಿಯಲ್ಲಿ ತಬಲಾ ಬಾರಿಸುತ್ತಿದ್ದರೆ, ಸುಮ್ಮನೆ ಕುಳಿತವರಿಗೂ ಕುಣಿಯ   ಬೇಕೆನಿಸುತ್ತದೆ.ಅಂತಹ ಅದ್ಭುತ ತಬಲಾ ವಾದಕ ಶಿವಣ್ಣ ದೇಸಾಯಿ ಕಲ್ಲೂರ ಅವರಿಗೆ ಈ ಬಾರಿ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿ ಒಲಿದು ಬಂದಿದೆ. ಸದ್ಯ ಅವರು ಗುಲ್ಬರ್ಗ ತಾಲ್ಲೂಕಿನ ನಂದಿಕೂರ ಗ್ರಾಮ ಪಂಚಾಯಿತಿ ಸದಸ್ಯರಾಗ್ದ್ದಿದಾರೆ. ಮುಂದೆ ಅಧ್ಯಕ್ಷರಾಗುವ ಗಡಿಬಿಡಿಯಲ್ಲಿದ್ದ ಅವರನ್ನು `ಪ್ರಜಾವಾಣಿ~ ಮಾತನಾಡಿಸಿತು. ಅದರ ಸಾರ ಇಲ್ಲಿದೆ.ಪ್ರ.ವಾ: ಪ್ರಶಸ್ತಿ ಬಂದಿರುವುದಕ್ಕೆ ಏನನ್ನಿಸುತ್ತದೆ?

ಶಿವಣ್ಣ: ಪ್ರಶಸ್ತಿಗಾಗಿ ನಾನು ಬೆನ್ನು ಹತ್ತಿದವನಲ್ಲ. ಅದು ತಾನಾಗಿಯೇ ಒಲಿದು ಬಂದದ್ದು ನನಗೆ ಖುಷಿ ಕೊಟ್ಟಿದೆ. ಸುಮಾರು 30 ವರ್ಷಗಳಿಂದ ಇದೇ ವೃತ್ತಿಯಲ್ಲಿ ತೊಡಗಿರುವ ನನ್ನನ್ನು ಗುರುತಿಸಿರುವ ಅಕಾಡೆಮಿಗೆ ನನ್ನ ಅನಂತ ಧನ್ಯವಾದಗಳು.ಪ್ರ.ವಾ: ತಬಲಾ ನುಡಿಸುವುದಕ್ಕೆ ಪ್ರೇರಣೆ?

ಶಿವಣ್ಣ: ನಮ್ಮದು ಅಫಜಲಪುರ ತಾಲ್ಲೂಕಿನ ದೇಸಾಯಿ ಕಲ್ಲೂರ ಗ್ರಾಮ. ನಮ್ಮ ಅಜ್ಜ ಗುರಪ್ಪ ಹೂಗಾರ, ತಂದೆ ಶಂಕ್ರಪ್ಪ ಹೂಗಾರ ಅವರು ತಬಲಾ, ಹಾರ್ಮೋನಿಯಂ ನುಡಿಸುವಲ್ಲಿ ನಿಷ್ಣಾತರು. ಈ ಹಿಂದೆ ನಾಟಕ, ಬಯಲಾಟಗಳಲ್ಲಿ ತಬಲಾ ನುಡಿಸುವ ಮೂಲಕ ಜನಮನ ಗೆದ್ದಿದ್ದ ಶಂಕ್ರಪ್ಪ ಹೂಗಾರ ಹಾಗೂ ಮನೆತನದ ಪರಿಸರವೇ ನನಗೆ ಪ್ರೇರಣೆ.ಪ್ರ.ವಾ: ಸಂಗೀತ ಕ್ಷೇತ್ರದ ನಿಮ್ಮ ಪಾಂಡಿತ್ಯ?

ಶಿವಣ್ಣ: ಓದಿದ್ದು ಹತ್ತನೆ ತರಗತಿ. ಆದರೆ ಮುಂದೆ ಎಂ.ಎ. ವಿದ್ವತ್ ಹಾಗೂ ಆಕಾಶವಾಣಿ ಬಿ. ಹೈಗ್ರೇಡ್ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ. ಅಫಜಲಪುರ ತಾಲ್ಲೂಕಿನ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸಂಗೀತ ಶಿಕ್ಷಕನಾಗಿ ಸೇವೆ ಸಲ್ಲಿಸುವಾಗ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕದ ಬಹುತೇಕ ಎಲ್ಲ ಊರುಗಳನ್ನು ಸಂಗೀತ ಕಾರ್ಯಕ್ರಮ ನೀಡಿದ್ದೇನೆ.ಪ್ರ.ವಾ: ಯುವ ಕಲಾವಿದರಿಗೆ ಏನು ಹೇಳ      ಬಯಸುತ್ತೀರಿ?

ಶಿವಣ್ಣ: ಪ್ರಚಾರ
ಮತ್ತು ಪ್ರಶಸ್ತಿಯ ತೆವಲು ಹಚ್ಚಿಕೊಳ್ಳದೆ ಅತ್ಯಂತ ಶ್ರದ್ಧೆಯಿಂದ ಸಾಧನೆ ಮಾಡುತ್ತ ಹೋದರೆ ಪ್ರಶಸ್ತಿ ತಾನಾಗಿಯೇ ಒಲಿದು ಬರುತ್ತವೆ. ಸಂಗೀತ ಕ್ಷೇತ್ರದಲ್ಲಿ ಎಷ್ಟು ಕಲಿತರೂ ಕಡಿಮೆಯೇ!ಪ್ರ.ವಾ: ತಬಲಾ ಒಲಿದಂತೆ ನಿಮಗೆ ರಾಜಕೀಯ ಕ್ಷೇತ್ರ ಒಲಿಯಬಹುದೇ?

ಶಿವಣ್ಣ: ತಬಲಾ ನುಡಿಸುವುದು ತಾನಾಗಿಯೇ ಒಲಿದು ಬಂದ ಕ್ಷೇತ್ರ. ಆದರೆ ರಾಜಕೀಯ ಕ್ಷೇತ್ರದಲ್ಲಿ ಹಲವರ ಒತ್ತಾಯದಿಂದ ಬಂದಿದ್ದೇನೆ. ಎಲ್ಲರೂ ನಮಗೆ ನಮಸ್ಕಾರ ಎನ್ನುವಾಗ, ರಾಜಕೀಯ ಮುಖಂಡರ ಹತ್ತಿರ ಹೋಗಿ ನಮಸ್ಕಾರ ಹೇಳಲು ಮನಸ್ಸು ಹಿಂಜರಿಯುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry