ಗುರು ತತ್ವಾದರ್ಶ ಪ್ರಚಾರಕ್ಕೆ ಕರೆ

7

ಗುರು ತತ್ವಾದರ್ಶ ಪ್ರಚಾರಕ್ಕೆ ಕರೆ

Published:
Updated:

ಗುಲ್ಬರ್ಗ: ಎಲ್ಲ ಜಾತಿ, ಧರ್ಮಗಳು ಒಂದೇ ಎಂಬ ತತ್ವವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದ ಪ್ರಚಾರಕ್ಕೆ ಆದ್ಯತೆ ಕೊಡಬೇಕಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ನಗರದ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಭಾನುವಾರ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಾರಾಯಣ ಗುರು ಅವರು ದಕ್ಷಿಣ ಭಾರತದ ಪ್ರಮುಖ ಗುರುಗಳಲ್ಲಿ ಒಬ್ಬರು. ಹಿಂದುಳಿದವರು ಮತ್ತು ದಲಿತರು ದೇವಾಲಯಕ್ಕೆ ಪ್ರವೇಶ ಪಡೆಯುವಂತಾಗಬೇಕು ಎಂಬ ಉದಾತ್ತ ಚಿಂತನೆಯೊಂದಿಗೆ ಅವರು ಶಿವಲಿಂಗ ನಿರ್ಮಿಸಿದ್ದರು ಎಂದು ವಿವರಿಸಿದರು.ಸಚಿವ ರೇವುನಾಯಕ ಬೆಳಮಗಿ, ವಿವಿಧ ಮಠಗಳ ರೇಣುಕಾನಂದ ಮಹಾಸ್ವಾಮಿ, ಸಿದ್ಧಬಸವ ಕಬೀರ ಸ್ವಾಮೀಜಿ, ಮಹಾಂತ ಶಿವಾಚಾರ್ಯ, ಶಾಸಕರಾದ ಸುಭಾಷ್ ಗುತ್ತೇದಾರ, ಖಮರುಲ್ ಇಸ್ಲಾಂ, ಅರುಣಾ ಪಾಟೀಲ, ಮೇಯರ್ ಸೋಮಶೇಖರ ಮೇಲಿನಮನಿ, ಮುಖಂಡರಾದ ಜಗದೇವ ಗುತ್ತೇದಾರ, ಸತೀಶ ಗುತ್ತೇದಾರ, ಹರ್ಷಾನಂದ ಗುತ್ತೇದಾರ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry