ಅಳ್ಳಗಿ(ಕೆ): ಹಾವು ಯಾರಿಗೂ ಕಚ್ಚಿಲ್ಲ

7

ಅಳ್ಳಗಿ(ಕೆ): ಹಾವು ಯಾರಿಗೂ ಕಚ್ಚಿಲ್ಲ

Published:
Updated:

ಅಫಜಲಪುರ: ಎಲ್ಲ ಹಾವುಗಳು ಕಚ್ಚಿದರೆ ಸಾಯುವುದಿಲ್ಲ, ನಾಗರಹಾವು ಕಚ್ಚಿದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಜನರು ಸಾಯುತ್ತಾರೆ. ಅಳ್ಳಗಿ (ಕೆ) ಗ್ರಾಮದಲ್ಲಿ ಸುಮಾರು 4 ಜನರಿಗೆ ಹಲವಾರು ಬಾರಿ ಹಾವು ಕಚ್ಚಿದೆ ಎಂಬುದು ಕೇವಲ ಭ್ರಮೆ. ಅವರಿಗೆ ಹಾವು ಕಚ್ಚಿದ ಬಗ್ಗೆ ಗಾಯಗಳೇ ಇಲ್ಲ. ಇದು ಕೇವಲ ವದಂತಿ ಎಂದು ಜಿಲ್ಲಾ ಭಾರತ ಜ್ಞಾನ-ವಿಜ್ಞಾನ ಸಮಿತಿಯ ಅಧ್ಯಕ್ಷ ಪ್ರೊ.ಶ್ರೀಶೈಲ ಘೂಳಿ ತಿಳಿಸಿದರು.ಹಾವು ಕಡಿತದ ಬಗ್ಗೆ ಭಾನಾಮತಿ ಶಂಕೆಗೆ ಒಳಗಾಗಿರುವ ಅಫಜಲಪುರ ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮಸ್ಥರೊಂದಿಗೆ ಭಾನಾಮತಿಯ ಬಗ್ಗೆ ಮಾತನಾಡಿ, `ನಿಮ್ಮ ಊರಲ್ಲಿ ಯಾರಿಗೂ ಹಾವು ಕಚ್ಚಿಲ್ಲ, ಮುಂದೆಯು ಕಚ್ಚುವುದಿಲ್ಲ. ಇದು ಕೇವಲ ನಿಮ್ಮ ಭ್ರಮೆ. ಯಾವುದೇ ಮಂತ್ರದಿಂದ ಇದು ಆಗುತ್ತಿಲ್ಲ, ಯಾರಾದರು ಮಂತ್ರದಿಂದ ಹಾವು ಕಚ್ಚಿಸುವುದನ್ನು ಮಾಡುತ್ತಿದ್ದರೆ ನನ್ನ ಮುಂದೆ ತೋರಿಸಲಿ; ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ~ ಎಂದು ಸವಾಲು ಹಾಕಿದರು.  ಹೊರಗಿನ ಬಲ ಪ್ರಯೋಗವಾಗದೆ ಯಾವ ವಸ್ತು ಚಲಿಸುವುದಿಲ್ಲ.ರಾಸಾಯನಿಕದಲ್ಲಿ ಮಾತ್ರ ಶಕ್ತಿಯಿದೆ. ಆದರೆ ಭಾನಾಮತಿ ಎಂಬುದೇ ಇಲ್ಲ, ಯಾರದೂ ಪ್ರೇರಣೆಯಿಂದ ಮತ್ತು ತಮ್ಮ ವೈಯಕ್ತಿಕ ಸಮಸ್ಯೆಯಿಂದ ಹಾವು ಕಚ್ಚುವ ವದಂತಿ ಸೃಷ್ಟಿ ಮಾಡಿದ್ದಾರೆ. ಚಲಿಸುವ ಬೆಂಕಿ ಸುಡುವುದಿಲ್ಲ ಅದರಲ್ಲಿ ನಿಂತರೆ ಸುಡುತ್ತದೆ. ಇದು ವೈಜ್ಞಾನಿಕ ಸತ್ಯವಾಗಿದೆ ಎಂದು ತಿಳಸಿದರು.  ಗುಲ್ಬರ್ಗ ವಿಶ್ವವಿದ್ಯಾಲಯದ ಮನೋವಿಜ್ಞಾನದ ಮುಖ್ಯಸ್ಥ ಶಿವುಕುಮಾರ ಚಿಂಟಿ ಹಾಗೂ ಪ್ರಾಧ್ಯಾಪಕ ಡಾ. ಎಸ್.ಪಿ.ಮೇಲಿನಕೇರಿ, ಸಮಿತಿಯ ಉಪಾಧ್ಯಕ್ಷ ಮೇರಾಜ ಪಟೇಲ, ಶಿವಶರಣ ಮುಳೆಗಾಂವ್, ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದ, ಜಂಟಿ ಕಾರ್ಯದರ್ಶಿ ಪ್ರೇಮಾನಂದ ಚಿಂಚೋಳಿಕರ ಮಾತನಾಡಿ, ಗ್ರಾಮಸ್ಥರು ಹಾವು ಬರುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಬೇಕು ಎಂದರು. ತಾಲ್ಲೂಕು ಭಾರತ ಜ್ಞಾನ-ವಿಜ್ಞಾನ ಸಮಿತಿಯ ಅಧ್ಯಕ್ಷ ಶಂಕ್ರೆಪ್ಪ ಮಣೂರ,ಗೌರವ ಅಧ್ಯಕ್ಷ ಶ್ರೀಮಂತ ಬಿರಾದಾರ ಭಾಗವಹಿಸಿದ್ದರು.ಗ್ರಾಮಸ್ಥರ ಪರವಾಗಿ ಅಶೋಕ ಕಲ್ಲೂರ,ಇಮಾಮಸಾಬ ಶೇಖ,ರಂಜಾನ್ ಸುತಾರ,ದತ್ತಾತ್ರೇಯ ನಾದ,ಭೀಮಸೇನ್ ದಳಪತಿ,ಕೃಷ್ಣತರಾವ್ ಪಾಟೀಲ,ಅಶೋಕ ಸಿಂಧೆ. ಯಲ್ಲಪ್ಪ ಹಡಲಗಿ ಮುಂತಾದವರು ಭಾರತ ಜ್ಞಾನ-ವಿಜ್ಞಾನ ಸಮಿತಿ ಅವರೊಂದಿಗೆ ಗ್ರಾಮದಲ್ಲಿ ನಡೆದಿರುವ ಭಾನಾಮತಿ ಶಂಕೆಯ ಕುರಿತು ಚರ್ಚೆ ಮಾಡಿದರು. ಸಮಿತಿ ಸದಸ್ಯ ಸಂಜೀವ ಬಗಲಿ ಸ್ವಾಗತಿಸಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry