ರಕ್ತದಿಂದ ಸಹಿ ಸಂಗ್ರಹ: ಉಪವಾಸ ಸತ್ಯಾಗ್ರಹ ಇಂದು

7

ರಕ್ತದಿಂದ ಸಹಿ ಸಂಗ್ರಹ: ಉಪವಾಸ ಸತ್ಯಾಗ್ರಹ ಇಂದು

Published:
Updated:
ರಕ್ತದಿಂದ ಸಹಿ ಸಂಗ್ರಹ: ಉಪವಾಸ ಸತ್ಯಾಗ್ರಹ ಇಂದು

ಗುಲ್ಬರ್ಗ: ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿ 25 ದಿನಗಳಿಂದ ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸುತ್ತಿರುವ ವಸತಿ ಶಾಲೆ ಚಿತ್ರಕಲಾ ಶಿಕ್ಷಕರು ಅ.16 ರಂದು ಬೆಳಿಗ್ಗೆ 11ಕ್ಕೆ ರಕ್ತದಿಂದ ಸಹಿ ಸಂಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.ಆಯ್ಕೆಯಾದ ಶಿಕ್ಷಕರು ಎಐವೈಎಫ್, ಎಐಎಸ್‌ಎಫ್ ಬೆಂಬಲದೊಂದಿಗೆ ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮನೆ ಎದುರು ಪ್ರತಿಭಟನೆ ನಡೆಸಿದರು. 25 ದಿನಗಳಿಂದ ಶಾಂತಿಯುತವಾಗಿ ಸತ್ಯಾಗ್ರಹ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೋರಾಟ ಉಗ್ರರೂಪ ತಾಳುತ್ತಿರುವುದಕ್ಕೆ ಸರ್ಕಾರದ ವಿಳಂಬ ನೀತಿಯೇ ಕಾರಣ ಎಂದು ಆಪಾದಿಸಿದ್ದಾರೆ. ಶಾಸಕ ಶಶೀಲ ಜಿ. ನಮೋಶಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.ಎಐವೈಎಫ್ ಜಿಲ್ಲಾಧ್ಯಕ್ಷ ಹಣಮಂತರಾವ ಅಟ್ಟೂರ, ಎಐಎಸ್‌ಎಫ್ ರಾಜ್ಯ ಸಂಚಾಲಕ ರಾಜೇಂದ್ರ ರಾಜವಾಳ, ಹೋರಾಟ ಸಮಿತಿ ಮುಖಂಡ ಭೋಜರಾಜ ಬಡಿಗೇರ ರಾಕೇಶ ಹಿರೇನೂರ, ಮಹಮ್ಮದ ಮೋಸೀನ, ವಿಕ್ರಮ ಎಂ. ಗೋಕುಳ, ಅನುಸೂಯಾ ಸುತಾರ , ರೇಷ್ಮಾ, ವಿದ್ಯಾವತಿ ಇದ್ದರು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry