ಶನಿವಾರ, ಏಪ್ರಿಲ್ 17, 2021
23 °C

ಉದ್ಯೋಗ ಖಾತರಿ ಕೆಲಸ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಗ್ರಾಮಪಂಚಾಯ್ತಿ ಮಟ್ಟದಲ್ಲಿ ಅನುಷ್ಠಾನಗೊಳಿಸುವಾಗ ರಾಜಕಾರಣಿಗಳು, ಅವರ ಅನುಯಾಯಿಗಳು, ಮಧ್ಯ ವರ್ತಿಗಳು ಮತ್ತು ವಿವಿಧ ಸಂಘಟನೆಗಳಿಂದ ತೊಂದರೆಯಾ ಗುತ್ತಿದ್ದು, ತಕ್ಷಣ ಈ ಯೋಜನೆಯಿಂದ ಮುಕ್ತಗೊಳಿಸ ಬೇಕು ಎಂದು ಜಲಾನಯನ ಅಭಿವೃದ್ಧಿ ಇಲಾಖೆಯ ಕೃಷಿ ಸಹಾಯಕರು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲ್ಮಾ ಫಾಹೀಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಜಲಾನ ಯನ ಅಭಿವೃದ್ಧಿ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ಸಹಾಯಕರು ಇಲ್ಲದಿರುವು ದರಿಂದ ಅನುಷ್ಠಾನ ಕಷ್ಟಕರವಾಗಿದೆ. ಪ್ರತಿ ತಾಲ್ಲೂಕಿನಲ್ಲಿ 3ರಿಂದ ಆರು ಮಂದಿ ಮಾತ್ರ ಕೃಷಿ ಸಹಾಯಕರಿದ್ದು, ಪ್ರತಿಯೊಬ್ಬರೂ 25ರಿಂದ 30 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರತಿ ಕಾಮಗಾರಿಗಳಿಗೆ ಅಂದಾಜುಪಟ್ಟಿ ಮತ್ತು ಯೋಜನೆ ತಯಾರಿಸುವುದರಿಂದ ಹಿಡಿದು ಕಾಮಗಾರಿ ಗುಣಮಟ್ಟ ತಪಾಸಣೆ ಮಾಡುವ ಕೆಲಸವೂ ಸೇರಿ ವಿಪರೀತ ಹೊರೆಯಾಗುತ್ತದೆ. ಎಲ್ಲ ಪಂಚಾಯ್ತಿಗಳಲ್ಲೂ ಏಕಕಾಲದಲ್ಲಿ ಕೆಲಸ ಆರಂಭಿಸುವು ದರಿಂದ ಮೇಲ್ವಿಚಾರಣೆ ಸಾಧ್ಯವಾಗುತ್ತಿಲ್ಲ ಎಂದು ಮನವಿಪತ್ರದಲ್ಲಿ ಹೇಳಿದ್ದಾರೆ.ತಾಲ್ಲೂಕು ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್‌ಗಳು ಕೇವಲ ಒಂದು ಅಥವಾ ಎರಡು ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ ಕೆಲಸ ತಪಾಸಣೆ ಮಾಡುವ ಸಿಬ್ಬಂದಿ ಇದ್ದಾರೆ. ಗುಣಮಟ್ಟ ಕಾಪಾಡುವ ಸಲುವಾಗಿ ಒಂದು ಪಂಚಾಯ್ತಿಗೆ ಒಬ್ಬ ಫೀಲ್ಡ್ ಅಸಿಸ್ಟೆಂಟ್‌ನನ್ನು ನೇಮಕ ಮಾಡಬೇಕು ಎಂದಿದ್ದಾರೆ.ಕೇಂದ್ರಸ್ಥಾನದಿಂದ ಪ್ರತಿದಿನ 75ರಿಂದ 100 ಕಿಲೋಮೀಟರ್ ಪ್ರವಾಸ ಮಾಡಬೇಕಾಗುತ್ತದೆ. ಪ್ರವಾಸಕ್ಕೆ ವಾಹನ ಸೌಕರ್ಯವೂ ಇಲ್ಲ. ಪ್ರತಿ ಪಂಚಾಯ್ತಿವಾರು ಅಂದಾಜುಪತ್ರ ತಯಾರಿಸಲೂ ಸ್ವಂತ ವೆಚ್ಚ ಮಾಡಬೇಕಾಗುತ್ತದೆ. ಕ್ಷೇತ್ರ ಸಿಬ್ಬಂದಿಗೆ ಕೆಲಸದ ಒತ್ತಡವೂ ಅಧಿಕವಾಗಿದ್ದು, ಜಲಾನಯನ ಇಲಾಖೆಯಿಂದ ಪ್ರತ್ಯೇಕಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.ಯೋಜನೆ ಅನುಷ್ಠಾನದಲ್ಲಿ ವಿವಿಧ ಹಂತದ ಜನಪ್ರತಿ ನಿಧಿಗಳು, ಅವರ ಅನುಯಾಯಿಗಳು, ರಾಜಕೀಯ ಮುಖಂಡರು, ಸಂಘಟನೆಗಳ ಮುಖಂಡರು ತಾವೇ ಪಂಚಾಯ್ತಿಮಟ್ಟದಲ್ಲಿ ಕಾಮಗಾರಿ ನಿರ್ವಹಿಸಿ ಕೊಂಡು ಒತ್ತಡ ಹೇರಿ ಅಳತೆ ಪುಸ್ತಕ ಮತ್ತು ಎನ್‌ಎಮ್ ಆತ್ ಬರೆದುಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ. ಇದು ಮಾನಸಿಕ ಒತ್ತಡಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾರೆ.ಕಸಾಪ ಪರೀಕ್ಷಾ ಫಲಿತಾಂಶ ಪ್ರಕಟ

ಗುಲ್ಬರ್ಗ:
ಕನ್ನಡ ಸಾಹಿತ್ಯ ಪರಿಷತ್ ನಡೆಸಿದ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶ ರಾಜ್ಯದ ಎಲ್ಲ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು.

ಫಲಿತಾಂಶವನ್ನು ಅಂತರ್ಜಾಲ www.kasapa.in ದಲ್ಲಿ (ವೆಬ್‌ಸೈಟ್)ಪ್ರಕಟಿಸಲಾಗಿದೆ. ಮಾ. 25ರಂದು ಪ್ರಕಟವಾಗುವ ಪರಿಷತ್ತಿನ ಮುಖವಾಣಿ ‘ಕನ್ನಡ ನುಡಿ’ ಪತ್ರಿಕೆಯಲಿಯ್ಲೂ ಪ್ರಕಟಿಸಲಾಗುವುದು. ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಶೀಘ್ರದಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಕಳುಹಿಸಿಕೊಡಲಾಗುವುದು. ಮರು ಎಣಿಕೆಗೆ ಅಂಕಪಟ್ಟಿ ತಲುಪಿದ ತಿಂಗಳೊಳಗಾಗಿ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು. ದೂರವಾಣಿ- 080-26623584 ಅನ್ನು ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.