ಗುಲ್ಬರ್ಗ ನಗರವನ್ನು ಬಿದರ್ಜೆಗೆರಿಸಲು ಆಗ್ರಹ

7

ಗುಲ್ಬರ್ಗ ನಗರವನ್ನು ಬಿದರ್ಜೆಗೆರಿಸಲು ಆಗ್ರಹ

Published:
Updated:

ಗುಲ್ಬರ್ಗ: ಅ.18 ರಂದು ನಗರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ನಗರವನ್ನು `ಬಿ~ ನಗರವನ್ನಾಗಿ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ, ಅರೆಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ದೇಸಾಯಿ ಮಾತನಾಡಿ, ಕೇಂದ್ರ ಸರ್ಕಾರದ ಅನುಗುಣವಾಗಿ ರಾಜ್ಯ ಸರ್ಕಾರ ಹುಬ್ಬಳ್ಳಿ- ಧಾರವಾಡ , ಮಂಗಳೂರು, ಮೈಸೂರು ನಗರಗಳಿಗೆ ಕೊಡುವ ಮನೆ ಬಾಡಿಗೆ, ನಗರ ಪರಿಹಾರ ಭತ್ತೆಗಳನ್ನು  ಗುಲ್ಬರ್ಗ ನಗರಕ್ಕೆ ಮಂಜೂರು ಮಾಡುವಂತೆ ಒತ್ತಾಯಿಸಿದರು.

 

ಕೇಂದ್ರ ಸರ್ಕಾರ ಈಗಾಗಲೆ ಜನಸಂಖ್ಯೆ ಅನುಗುಣವಾಗಿ ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಪುನರ್ ವರ್ಗಿಕರಿಸಿದೆ. 50ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರವನ್ನು `ಎಕ್ಸ್~ ಎಂದು ವರ್ಗಿಕರಿಸಿ 30 ರಷ್ಟು,  5ಲಕ್ಷದಿಂದ 50ಲಕ್ಷ ಜನಸಂಖೆ ಹೊಂದಿರುವುದಕ್ಕೆ `ವೈ~ ಎಂದು ವರ್ಗಿಕರಿಸಿ 20ರಷ್ಟು, 5ಲಕ್ಷಕ್ಕಿಂತ ಕಡಿಮೆ ಜನಂಖ್ಯೆ ಹೊಂದಿರುವುದಕ್ಕೆ `ಝಡ್~ ಎಂದು ವರ್ಗಿಕರಿಸಿ 10ರಷ್ಟು ಭತ್ತೆ ಹೆಚ್ಚುಮಾಡಿದೆ, ಇದೆ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಮನೆ ಬಾಡಿಗೆ ಭತ್ತೆ, ನಗರ ಪರಿಹಾರ ಭತ್ತೆ ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.ಗುಲ್ಬರ್ಗ ನಗರ ಮಾಹಾನಗರ ಪಾಲಿಕೆಯಾಗಿ 30ವರ್ಷ ಕಳೆದಿವೆ. ನಗರ ವಾಣಿಜ್ಯೋದ್ಯಮ ದೃಷ್ಟಿಯಿಂದ ಬೃಹತ್ತಾಗಿ ಬೇಳದಿದೆ. 64 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. 7ಲಕ್ಷ ಜನಸಂಖ್ಯೆ ಹೋಂದಿದೆ. ನಗರ, ಗ್ರಾಮಾಂತರವನ್ನೊಳಗೊಂಡಂತೆ 3ಜನ ಶಾಸಕರು ಪ್ರತಿನಿಧಿಸುತ್ತಾರೆ.  ಶೈಕ್ಷಣಿಕವಾಗಿ ಗಣನೀಯವಾಗಿ ಸಾಧನೆಗೈದಿದೆ ಹೀಗಾಗಿ ನಗರ `ಬಿ~ ದರ್ಜೆಗೇರಿಸಲು ಎಲ್ಲ ಅರ್ಹತೆ ಹೊಂದಿದೆ ಎಂದರು.ಜನಸಂಖ್ಯೆ ಅನುಗುಣವಾಗಿ `ಬಿ~ ನಗರವನ್ನಾಗಿ ಘೋಷಣೆ ಮಾಡಿದರೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರಿ ನೌಕರರಿಗೆ 10% ರಷ್ಟು, ರಾಜ್ಯ ಸರ್ಕಾರಿ ನೌಕರರಿಗೆ ಶೇಕಡಾ 6% ರಷ್ಟು ಮನೆಬಾಡಿಗೆ ಸಿಗುತ್ತದೆ. ಸಿ ಮತ್ತು ಡಿ ದರ್ಜೆ ನೌಕರರಿಗೆ 250, ಎ ಮತ್ತು ಬಿ ದರ್ಜೆ ನೌಕರರಿಗೆ 300ರೂಪಾಯಿ ನಗರ ಪರಿಹಾರ ಭತ್ತೆ ಸಿಗುತ್ತದೆ. ಕೇಂದ್ರದ `ಎನ್‌ಯ್ಯುಆರ್‌ಎಮ್‌ಎಸ್~ ಯೋಜನೆ ಯಿಂದ ಸಿಗುವ ಹೆಚ್ಚಿನ ನೆರವು ನಗರದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಅವರು ವಿವರಿಸಿದರು.   ಸರ್ಕಾರ  21 ಎಪ್ರಿಲ್ 2012ರಂದು ಹೊರಡಿಸಿದ `ಎಫ್.ಡಿ.7ಎಸ್.ಆರ್.ಪಿ  2012~ ರ ಆದೇಶವು ಗುಲ್ಬರ್ಗ ಮಹಾನಗರವನ್ನು `ಬಿ~ ನಗರವೆಂದು ಘೋಷಣೆ ಮಾಡಬಹುದೆಂದು ಇಟ್ಟುಕೊಂಡ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರವ್ಯಕ್ತ ಪಡಿಸಿದರು. ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಈಕುರಿತು ನಿರ್ಣಯ ತೆಗೆದುಕೊಳ್ಳದಿದ್ದರೆ ಹೋರಾಟ ಚುರುಕುಗೊಳಿಸುವುದಾಗಿ ತಿಳಿಸಿದರು.ರಾಜ್ಯ ಪರಿಷತ್ ಸದಸ್ಯ ಚಂದ್ರಕಾಂತ ಅಷ್ಟಗಿ, ಕಾರ್ಯದಶಿ ನಾಗೇಂದ್ರ ಎಸ್. ಪಾನಗಾಂವ, ಖಜಾಂಚಿ ವಿರೂಪಾಕ್ಷ ಚಾಂದಕವಟೆ, ಸಂಗೀತಾ ಕಟ್ಟಿ, ಗೌರವಾಧ್ಯಕ್ಷ ಎಸ್.ಎಂ. ಪಟ್ಟಣಕರ್, ನಗರ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಸುಭಾಷ ಪುಜಾರಿ, ಕೋಠಾಳಿ ಭಮಾಳಪ್ಪ, ಬಿ.ಜಿ.ಮೊರಬದ ಇದ್ದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry