ಉಷ್ಣ ಪ್ರದೇಶಗಳಲ್ಲಿ ಡೆಂಗೆ ಪತ್ತೆ

7

ಉಷ್ಣ ಪ್ರದೇಶಗಳಲ್ಲಿ ಡೆಂಗೆ ಪತ್ತೆ

Published:
Updated:

ಗುಲ್ಬರ್ಗ: 26ರಿಂದ 30ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಡೆಂಗೆ ವೈರಾಣು ಹರಡುವ ಸೊಳ್ಳೆ ಕಂಡು ಬರುತ್ತದೆ. ಇದು ರಾಜ್ಯದ ದಕ್ಷಿಣ ಭಾಗ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯದ ಕೆಲ ಪ್ರದೇಶಗಳಲ್ಲಿ ಕಂಡುಬಂದಿದೆ ಎಂದು ಶಹಾಬಾದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ರಾಹುಲ ಮಂಗಳವಾರ ಇಲ್ಲಿ ಹೇಳಿದರು.ನಗರದ ಎಚ್.ಐ.ಟಿ. ಸಭಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಡೆಂಗೆ ಜ್ವರ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.`ಈ ಹಿಂದೆ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಡೆಂಗೆಜ್ವರ ಇದೀಗ ಗ್ರಾಮೀಣ ಪ್ರದೇಶಗಳಲ್ಲಿಯೂ ಕಂಡುಬರುತ್ತಿದೆ. ಇದಕ್ಕೆ ಬದಲಾಗುತ್ತಿರುವ ವಾತಾವರಣವೂ ಕಾರಣವಾಗಿದೆ. ವಿಶ್ವದಲ್ಲಿ 100ಕ್ಕೂ ಹೆಚ್ಚು ದೇಶಗಳಲ್ಲಿ ಕಂಡು ಬರುವ ಈ ಕಾಯಿಲೆ 2.5 ಬಿಲಿಯನ್ ಜನರು ಬಾಧಿತರಾಗುತ್ತಿದ್ದು, ಅವರಲ್ಲಿ 25 ಸಾವಿರ ಜನರು ಸಾವನ್ನಪ್ಪಿತ್ತಿದ್ದಾರೆ.

 

4 ಹಂತಗಳಲ್ಲಿ ಹರಡುವ ಡೆಂಗೆ ಜ್ವರ ಮಕ್ಕಳನ್ನು ಹೆಚ್ಚಾಗಿ ಕಾಡುವ ಕಾಯಿಲೆಯಾಗಿದೆ. ಇದರ ಮುಖ್ಯ ಲಕ್ಷಣಗಳು; ಜ್ವರ ಬರುವುದು, ತಲೆ ಹಾಗೂ ಮೈಕೈನೋವು, ಮೂಳೆ ನೋವು ಹಾಗೂ ಮೈಮೇಲೆ ಕೆಂಪು ಗುಳ್ಳೆಗಳಾಗುವುದಾಗಿದೆ. ಡೆಂಗೆವಿನ ಮೂರನೇ ಮತ್ತು ನಾಲ್ಕನೇ ಹಂತ ಬಹಳ ಗಂಭೀರ ಸ್ವರೂಪದ್ದಾಗಿರುತ್ತದೆ~ ಎಂದರು.ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಡೆಂಗೆ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಪತ್ರಕರ್ತರಿಗೆ ಹೆಚ್ಚಿನ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇಲ್ಲಿ ನಿಮ್ಮ ಸಂಶಯಗಳನ್ನು ದೂರುಮಾಡಿಕೊಳ್ಳಬಹುದು. ಡೆಂಗೆ ನಿಯಂತ್ರಣದ ಬಗ್ಗೆ ವೈದ್ಯರು ಬೆಂಗಳೂರಿಗೆ ತೆರಳಿ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು.`ಪ್ರಯೋಗಾಲಯದಲ್ಲಿ ಡೆಂಗೆ ಪ್ರಕರಣಗಳ ಪತ್ತೆ ವಿಧಾನ~ ಕುರಿತು ಡಾ. ತೇಜಸ್ವಿನಿ ಕೊಳಕೂರ, `ರೋಗವಾಹಕ ಸೊಳ್ಳೆಗಳ ಜೀವನ ಚಕ್ರ ಹಾಗೂ ನಿಯಂತ್ರಣ ಕ್ರಮ~ ಕುರಿತು ಜಿಲ್ಲಾ ಸರ್ವೇಕ್ಷಣಾ ಸಹಾಯಕ ಕೀಟ ಶಾಸ್ತ್ರಜ್ಞ ಚಾಮರಾಜ ದೊಡಮನಿ ಮಾತನಾಡಿದರು. ಉಲ್ಲಾಸ್ ಬಿ. ಗಂಗನಳ್ಳಿ ಮತ್ತು ಡಾ. ಅಮರೇಶ ಮಾತನಾಡಿದರು.   ಜಿಲ್ಲಾ ವಿಟಿಡಿಸಿ ಅಧಿಕಾರಿ ಡಾ. ಬಸವರಾಜ ಜಿ. ಬುಕ್ಕೆಗಾರ್ ಸ್ವಾಗತಿಸಿದರು. ಅಮರಯ್ಯ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry