ಕೋರ್ಟ್‌ನಲ್ಲಿ ಸರ್ಕಾರ ದೊಡ್ಡ ಕಕ್ಷಿದಾರ

7

ಕೋರ್ಟ್‌ನಲ್ಲಿ ಸರ್ಕಾರ ದೊಡ್ಡ ಕಕ್ಷಿದಾರ

Published:
Updated:

ಗುಲ್ಬರ್ಗ: ಕೋರ್ಟ್‌ನಲ್ಲಿ ನ್ಯಾಯಾದಾನ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಪ್ರಸ್ತುತ, ರಾಜ್ಯದಲ್ಲಿ ಸರ್ಕಾರವೇ ದೊಡ್ಡ ಕಕ್ಷಿದಾರವಾಗಿರುವುದು ವಿಷಾದದ ಸಂಗತಿ ಎಂದು ರಾಜ್ಯ ಕಾನೂನು ಸಚಿವ ಸುರೇಶ್‌ಕುಮಾರ್ ಶುಕ್ರವಾರ ಇಲ್ಲಿ ವಿಷಾದಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ `ಕಾನೂನು ಹಾಗೂ ಕಂದಾಯ ಅಧಿಕಾರಿಗಳ ವಿಭಾಗೀಯ ಸಮ್ಮೇಳನ~ವನ್ನು ಉದ್ಘಾಟಿಸಿ ಮಾತನಾಡಿದರು.ಕೋರ್ಟ್‌ನಲ್ಲಿ ಒಟ್ಟು 43,300 ಸರ್ಕಾರಿ ಸಿವಿಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹೈ.ಕ. ಪ್ರದೇಶದ ಆರು ಜಿಲ್ಲೆಗಳದ್ದು ಶೇ 20ಕ್ಕಿಂತ ಹೆಚ್ಚು ಅಂದರೆ 8,095 ಪ್ರಕರಣಗಳಿವೆ. ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವ ಕುರಿತು ಅಧಿಕಾರಿಗಳು ಪರಸ್ಪರ ಚರ್ಚೆ ಆರಂಭಗೊಳಿಸಲಿ ಎನ್ನುವ ಉದ್ದೇಶಕ್ಕಾಗಿ ವಿಭಾಗೀಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಗುಲ್ಬರ್ಗದಲ್ಲಿ ಮೊದಲ ಸಮ್ಮೇಳನ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಧಾರವಾಡ, ತುಮಕೂರು ಹಾಗೂ ಮಡಿಕೇರಿಯಲ್ಲಿ ಸಮ್ಮೇಳನ ನಡೆಸಲು ಯೋಜಿಸಲಾಗಿದೆ ಎಂದರು.ಸರ್ಕಾರಿ ವಕೀಲರು ಹಾಗೂ ವಿವಿಧ ಇಲಾಖೆಗಳ ನಡುವೆ ಸಂಪರ್ಕ ಕೊರತೆ ಬಹಳಷ್ಟಿರುವುದರ ಫಲವಾಗಿಯೆ ವಿಚಾರಣೆಗಳು ಬಾಕಿ ಉಳಿದುಕೊಳ್ಳುತ್ತಿವೆ. ಹೀಗಾಗಿ ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಸೇರಿ ಸರ್ಕಾರವನ್ನು ಒಂದು ಮಾದರಿ ಕಕ್ಷಿದಾರ ಎಂದು ಗುರುತಿಸುವ ರೀತಿಯಲ್ಲಿ ತೀವ್ರಗತಿ ನ್ಯಾಯದಾನ ಮಾಡುವುದು ಎಲ್ಲ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಸಂಪರ್ಕ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಪ್ರತಿಯೊಂದು ಇಲಾಖೆಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಧಿಕಾರಿಗಳು, ಸರ್ಕಾರಿ ವಕೀಲರು ಒಂದೇ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಅಂಶವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry