ಭಾನುವಾರ, ಏಪ್ರಿಲ್ 11, 2021
28 °C

ಮಹಾತ್ಮರ ಸ್ಮರಣೆ ಮಾಡಿ: ಶ್ರೀಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಎಲ್ಲರು ಮಹಾತ್ಮರ ಸ್ಮರಣೆ ಮಾಡಬೇಕು.ಇದರಿಂದ ಎಂತಹ ಕಷ್ಟಗಳು ಬಂದರೂ ಪರಿಹಾರವಾಗುತ್ತವೆ ಎಂದು ಶಹಾಬಜಾರ ಪರುಷಮಠದ ಚನ್ನಮಲ್ಲೆಶ್ವರ ಶಿವಾಚಾರ್ಯ ನುಡಿದರು.ನಗರದ ಶಿವಾಜಿನಗರ(ಎ) ಬಡಾವಣೆಯ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ  ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವಿಗಳನ್ನು ಸೃಷ್ಟಿಸುವುದು ದೇವರ ಧರ್ಮ. ಜೀವಿಗಳನ್ನು ನಿಜ ವಾದ ಮನುಷ್ಯನನ್ನಾಗಿ ರೂಪಿಸುವವರೇ ಗುರು ಎಂದರು.ರೇಣುಕಾಚಾರ್ಯರ ಮಹಿಮೆ ಅಪಾರವಾಗಿದ್ದು. ಪ್ರತಿಯೊಬ್ಬರು ಅವರ ತತ್ವ, ಆದರ್ಶಗಳನ್ನು ಬದುಕಿ ನಲ್ಲಿ ಅಳವಡಿಸಿಕೊಳ್ಳಿರಿ ಎಂದರು.ದೈವಿಕ ಕಾರ್ಯಕ್ರಮಗಳು ಬಡಾವಣೆಯಲ್ಲಿ ಸದಾ ನಡೆಯುತ್ತಿರಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ  ಸೋಮಶೇಖರ ದೇವಣಿ ಹೇಳಿದರು. ಶಾಸಕಿ ಅರುಣಾ ಪಾಟೀಲ, ಬಿ.ಜೆ.ಪಿ ಮುಖಂಡ ಸುಭಾಷ ಬಿರಾದಾರ ಮಾತನಾಡಿದರು. ಬಸವಲಿಂಗೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ಧ ಶಿವಾಚಾರ್ಯ, ಕರಸಿದ್ಧೇಶ್ವರ ಶಿವಾಚಾರ್ಯ, ಶಿವಾನಂದ ಅಷ್ಟಗಿ,  ಗೋಪಾಲರಾವ ಶಾಸ್ತ್ರಿ  ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.