ಸೋಮವಾರ, ಏಪ್ರಿಲ್ 19, 2021
26 °C

ವಾಗ್ದರಿ:ರಾಚೋಟೇಶ್ವರರ ಅದ್ದೂರಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ಸುಕ್ಷೇತ್ರ ವಾಗ್ದರಿಯ ರಾಚೋಟೇಶ್ವರ ದೇವರ ನೂತನ ರಥೋತ್ಸವವು ಗುರುವಾರ ಸಾಯಂಕಾಲ ಸಾವಿರಾರು ಭಕ್ತರ ಜಯಘೋಷದ ನಡುವೆ ಅದ್ದೂರಿಯಾಗಿ ಜರುಗಿತು.ಇದಕ್ಕೂ ಮೊದಲು ಗ್ರಾಮದ ಅಣ್ಣಾರಾವ ಪಾಟೀಲ್ ಮತ್ತು ಶಿವಪುತ್ರ ಪಾಟೀಲ್                       ಮನೆಯಿಂದ ಕುಂಭ ಕಳಸ, ನಂದಿಕೋಲಗಳ ಮೆರವಣಿಗೆ ನಡೆಯಿತು. ವೀರಭದ್ರ ಅವತಾರಿ   ರಾಚೋಟೇಶ್ವರರ ಉತ್ಸವದಲ್ಲಿ ಪುರವಂತರ  ವೀರಾವೇಶದ ಒಡುಪು, ಕುಣಿತ ಗಮನ               ಸೆಳೆದವು.ನಂತರ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ಅಗ್ನಿ ಕುಂಡವನ್ನು ಹಾರಕೂಡದ ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.ಪಟ್ಟದ ಪುರವಂತ ಪ್ರಭುಲಿಂಗ ಸ್ವಾಮಿ, ಮೊದಲು ಅಗ್ನಿ ಹಾಯುವುದರೊಂದಿಗೆ ಅಗ್ನಿ ಪ್ರವೇಶಕ್ಕೆ ಚಾಲನೆ ನೀಡಿದರು.ಉತ್ಸವದಲ್ಲಿ ಹೆಣ್ಣುಮಕ್ಕಳು, ಯುವಕರು ಕುಟುಂಬ ಸಮೇತ ಅಗ್ನಿ ಹಾಯುವುದು ಸಾಮಾನ್ಯವಾಗಿತ್ತು. 

ರಥೋತ್ಸವದ ಮುನ್ನ ಹೊಸ ರಥಕ್ಕೆ ಹಾರಕೂಡದ ಚನ್ನವೀರ ಶಿವಾಚಾರ್ಯ, ಮುತ್ಯಾನ                     ಬಬಲಾದದ ಗುರುಪಾದಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ಪೂಜೆ ನೆರವೇರಿ                     ಸಲಾಯಿತು. ಸಚಿವ ರೇವೂನಾಯಕ ಬೆಳಮಗಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು                            ಉಪಸ್ಥಿರಿದ್ದರು. ರಥೋತ್ಸವ ಆರಂಭಗೊಂಡಂತೆ ಯುವಕರು ಉತ್ಸಾಹದಿಂದ ಜಯಘೋಷ                  ದೊಂದಿಗೆ ರಥ ಎಳೆದರು.ಭಕ್ತರು ಬಾಳೆ ಹಣ್ಣು, ಉತ್ತತ್ತಿ ಮತ್ತಿತರ ಹರಕೆಯ ಸಾಮಗ್ರಿಗಳನ್ನು ರಥದ ಮೇಲೆ ತೂರಿ ತಮ್ಮ ಭಕ್ತಿಯನ್ನು  ಪ್ರರ್ಶಿಸಿದರು.ಭಜನೆ, ಡೊಳ್ಳು ಕುಣಿತ, ಭಾಜಾ ಬಜಂತ್ರಿಳು ಉತ್ಸವದ ಸಡಗರ ಹೆಚ್ಚಿಸಿದ್ದವು. ಪ್ರಮುಖರಾದ ಸಿದ್ರಾಮಪ್ಪ ಕಂದಗೂಳೆ,   ಅಂಬಾರಾಯ ಪಾಟೀಲ್, ಗುರುಬಸಯ್ಯ ಮಠಪತಿ, ಗುರುಲಿಂಗ ಸ್ವಾಮಿ, ರವೀಂದ್ರ ಪಾಟೀಲ್,  ಶಿವರಾಜ ಗೌನಹಳ್ಳಿ, ಕುಪೇಂದ್ರ ಏರಿ, ಸೂಗೂರೇಶ್ವರ, ಬಾಬು, ರೇವಯ್ಯ ಸ್ವಾಮಿ, ಶಿವಪುತ್ರ ಪಾಟೀಲ್  ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.