ಗುರುವಾರ , ಜೂಲೈ 9, 2020
28 °C

ಉದ್ಘಾಟನೆಗೆ ಕಾಯುತ್ತಿರುವ ಬ್ಯಾರೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಘಾಟನೆಗೆ ಕಾಯುತ್ತಿರುವ ಬ್ಯಾರೇಜ್

ಚಿಂಚೋಳಿ: ತಾಲ್ಲೂಕಿನ ಪ್ರಪ್ರಥಮ ಬ್ಯಾರೇಜ್ ಎಂಬ ಹೆಗ್ಗಳಿಕೆ ಪಡೆದಿರುವ ಇಲ್ಲಿನ ಚಂದಾಪುರದ ಪ್ರಸಿದ್ಧ ಹನುಮಾನ ಮಂದಿರದ ಹಿಂಬಾಗದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.ಸುಮಾರು 1.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ಬ್ಯಾರೇಜ್‌ನಿಂದ 56 ಹೆಕ್ಟೇರ್ ಪ್ರದೇಶಕ್ಕೆ ನಿರುಣಿಸುವ ಸಾಮರ್ಥ್ಯ ಹೊಂದಿದೆ.54 ಮೀಟರ್ ಉದ್ದ, 2 ಮೀಟರ್ ಅಗಲದ ಈ ಬ್ಯಾರೇಜಿನಲ್ಲಿ ನೀರು ಸಂಗ್ರಹಿಸಲು 84 ಗೇಟ್‌ಗಳನ್ನು ಕೂಡಿಸಲಾಗಿದೆ. 2009ರ ಮಾರ್ಚ್ 2ರಿಂದ ಆರಂಭವಾದ ಸಣ್ಣ ನೀರಾವರಿ ಇಲಾಖೆಯ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ ಅದೇ ವರ್ಷದ ಜೂನ್ ಅಂತ್ಯದಲ್ಲಿ ಭೌತಿಕ ಕಾಮಗಾರಿ ಪೂರ್ಣಗೊಳಿಸಿ ಇಲಾಖೆ ಗಮನ ಸೆಳೆದಿತ್ತು.

ಆದರೆ ಗೇಟ್ ಕೂಡಿಸುವ ಕೆಲಸ ಮಾತ್ರ ಬಾಕಿ ಉಳಿದಿತ್ತು.ಅದಾದ ನಂತರ ಸುಮಾರು ಒಂದುವರೆ ವರ್ಷದ ನಂತರ ಅಂದರೆ ಫೆ.18ರಂದು ಬ್ಯಾರೇಜಿಗೆ ಗೇಟ್‌ಗಳನ್ನು ಕೂಡಿಸಿ ನೀರು ಸಂಗ್ರಹಿಸಲಾಗಿದೆ. ವ್ಯರ್ಥವಾಗಿ ಹರಿದು ನದಿಯಲ್ಲಿ ಪೋಲಾಗುತ್ತಿದ್ದ ನೀರನ್ನು ಸಂಗ್ರಹಿಸಿ ನೀರಾವರಿಗೆ ಬಳಸುವ ಉದ್ದೇಶದಿಂದ ನಿರ್ಮಾಣವಾದ ಬ್ಯಾರೇಜ್ ಕಾಮಗಾರಿ ಮುಗಿದಿದ್ದು, ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಸಹಿಸದೇ ತಂಪು ಅರಸುವ ಯುವಕರಿಗೆ ಸ್ವಿಮ್ಮಿಂಗ್ ಪೂಲ್‌ನಂತೆ ಈ ಬ್ಯಾರೇಜ್ ಬಳಕೆಯಾದರು ಅಚ್ಚರಿಯಿಲ್ಲ.ಶಾಸಕ ಸುನೀಲ ವಲ್ಯ್‌ಪುರ ಅವರು ಶಾಸಕರಾಗಿ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಹಲವಾರು ಬ್ಯಾರೇಜ್‌ಗಳನ್ನು ಮಂಜೂರು ಮಾಡಿಸಿದ್ದು, ಈಗಾಗಲೇ ಪೂರ್ಣಪ್ರಮಾಣದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜಾಗಿ ಚಂದಾಪುರ ಬ್ಯಾರೇಜ್ ಮುಹೂರ್ತಕ್ಕಾಗಿ ಕಾಯುತ್ತಿದೆ.ಈಗಾಗಲೇ ಮುಲ್ಲಾಮಾರಿ ನದಿಯ ಇಕ್ಕಲೆಗಳಲ್ಲಿ ಪಂಪಸೆಟ್ ಮೂಲಕ ರೈತರು ನೀರಾವರಿಗೆ ಕೈಗೊಳ್ಳುತ್ತಿದ್ದು ಸದರಿ ಜಲಾಶಯದಿಂದ ನಿರ್ಮಾಣ ಹಂತದಲ್ಲಿರುವ ಚಿಂಚೋಳಿ ಷುಗರ್ ಮಿಲ್‌ಗೆ ಮತ್ತು ನದಿ ಪಾತ್ರದ ಕೆಳಭಾಗದ ರೈತರಿಗೆ, ಜಾನುವಾರುಗಳಿಗೆ ಹಾಗೂ ವನ್ಯಪ್ರಾಣಿಗಳಿಗೆ ಬ್ಯಾರೇಜ್ ನೀರು ಉಪಯೋಗವಾಗಲಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.