ಭಾನುವಾರ, ಏಪ್ರಿಲ್ 11, 2021
20 °C

`ಅಭಿವೃದ್ಧಿ ಮರೆತ ಸಚಿವ'

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಸುನೀಲ ವಲ್ಯ್‌ಪುರ ಅವರು ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಗಾಜರೆ ಆಪಾದಿಸಿದ್ದಾರೆ.ಗುರುವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, ಚಿಂಚೋಳಿ ಕ್ಷೇತ್ರ ಅಭಿವೃದ್ಧಿ ಪಡಿಸುವುದಾಗಿ ಹೇಳಿ ವಿವಿಧ ಕಾಮಗಾರಿಗಳಿಗೆ ಬರೀ “ಅಡಿಗಲ್ಲು' ಹಾಕುತ್ತ ಹಣ ಎತ್ತಿ ಹಾಕುತ್ತಿರುವ ಈ ಕ್ಷೇತ್ರದ ಶಾಸಕ ಹಾಗೂ ಸಚಿವ ಸುನೀಲ ವಲ್ಯ್‌ಪುರ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.ಬಿಜೆಪಿ ಪಕ್ಷಕ್ಕೂ ಒಂದುಬಾರಿ ಅವಕಾಶ ಕೊಡೋಣ ಎಂದು ಮತದಾರರು ಸಚಿವ ವಲ್ಯ್‌ಪುರ ಅವರಿಗೆ ಆರಿಸಿ ತಂದಿದ್ದಾರೆ. ಆದರೆ ಈ ಸಚಿವರು ಮಾತ್ರ ಯಾವುದೇ ಜನಪರ ಕೆಲಸಗಳು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರದೆ ಕೇವಲ “ಶಂಕುಸ್ಥಾಪನೆ' ನೆರವೇರಿಸುತ್ತ ಅದರ ಹಣವೆಲ್ಲ ಕಬಳಿಸುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.ಸಚಿವರ ಕೈಮೇಲೆ ಕ್ಷೇತ್ರದ ಒಂದು ಕಡೆಯಲ್ಲೂ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ ಉದಾಹರಣೆ ಇಲ್ಲಿಯ ತನಕ ಕಂಡುಬಂದಿಲ್ಲ. ಇದರಿಂದಾಗಿ ಕ್ಷೇತ್ರದ ಜನತೆ ಅನೇಕ ಸೌಲಭ್ಯಗಳಿಂದ ತತ್ತರಿಸಿ ಹೋಗಿದ್ದಾರೆ ಎಂದು ಗಾಜರೆ ಆರೋಪಿಸಿದರು.

ಎಲ್ಲಿ ಹೋದಲೆಲ್ಲ ಸುಳ್ಳು ಮಾತಿನ ಸುರಿಮಳೆ ಗೈಯುವ ವಲ್ಯ್‌ಪುರ್‌ಗೆ ಬರಲಿರುವ ಚುನಾವಣೆಯಲ್ಲಿ ಸೋಲಿಸಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗಾಜರೆ ಹೇಳಿದರು.ಮುಂದಿನ ಸಲ ಕುಮಾರಸ್ವಾಮಿ ಸಿಎಂ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನೇಕ ಹಗರಣಗಳಲ್ಲಿ ಸಿಲುಕಿ ತಳವಿಲ್ಲದ ಗಡಿಗೆಯಂತಾಗಿ ಭ್ರಷ್ಟಾಚಾರದ ಹಾದಿ ತುಳಿದಿದೆ. ಹೀಗಾಗಿ ರಾಜ್ಯದ ಜನತೆ ಬೇಸತ್ತು ಮತ್ತೆ ಜೆಡಿಎಸ್‌ನತ್ತ ಒಲವು ತೋರುತ್ತಿದ್ದಾರೆ.ಈ ನಿಟ್ಟಿನಲ್ಲಿ ಬರಲಿರುವ ವಿಧಾನಸಭಾ ಚುನಾವಣೆ

ಯಲ್ಲಿ ಎಲ್ಲೆಡೆ ಜೆಡಿಎಸ್‌ಗೆ ಸ್ಪಷ್ಟ ಬಹುಮತ ದೊರೆತು ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

ಗೊಂದಲವಿಲ್ಲ: ಮುಂಬರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಥಳೀಯರೇ ಸ್ಪರ್ಧಿಸಲಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ.ಈ ದಿಶೆಯಲ್ಲಿ ಟಿಕೆಟ್ ಯಾರಿಗೆ ಸಿಗಲಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಡಾ.ಮಲ್ಲಿಕಾರ್ಜುನ ಗಾಜರೆ ಹೇಳಿದರು.

ಜೆಡಿಎಸ್ ಮುಖಂಡ ಶಿವರಾಯ ಪಾಟೀಲ ಹುಳಗೇರಾ, ಪ್ರಕಾಶರೆಡ್ಡಿ ಪಾಟೀಲ ತಾದಲಾಪುರ, ರಾಜು ಪೂಜಾರಿ ಎಂಪಳ್ಳಿ, ಹಣಮಂತ ಬೋವಿ ಕಲ್ಲೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.