`ಬಂಡವಾಳಶಾಹಿ ಕಪಿಮುಷ್ಟಿಯಲ್ಲಿ ಶಿಕ್ಷಣ'

6

`ಬಂಡವಾಳಶಾಹಿ ಕಪಿಮುಷ್ಟಿಯಲ್ಲಿ ಶಿಕ್ಷಣ'

Published:
Updated:

ಗುಲ್ಬರ್ಗ: ಬಂಡವಾಳಶಾಹಿಗಳ ಹಿತಾಸಕ್ತಿಯಲ್ಲಿ ಇಂದಿನ ಶಿಕ್ಷಣ ನೀತಿಗಳು ರೂಪಗೊಳ್ಳುತ್ತಿವೆ ಎಂದು ಆರ್‌ಕೆಎಸ್ ರೈತ ಸಂಘಟನೆಯ ಜಿಲ್ಲಾ ಸಂಘಟಕ ಗೌಸ ಪಟೇಲ ಹೇಳಿದರು.ಇಲ್ಲಿನ ವಿಶ್ವೇಶ್ವರಯ್ಯ ಭವನದಲ್ಲಿ ಶನಿವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದರು.ಗುಲಾಮಗಿರಿ ವ್ಯವಸ್ಥೆಯಿಂದ ಹಿಡಿದು ಇಂದಿನ ಬಂಡವಾಳಶಾಹಿ ವ್ಯವಸ್ಥೆಯವರೆಗೆ ಶಿಕ್ಷಣ ಕ್ಷೇತ್ರದ ಮೇಲೆ ಅವ್ಯಾಹತ ದಾಳಿ ನಡೆಯುತ್ತಲೇ ಇದೆ. ಶಿಕ್ಷಣದ ಮೇಲೆ ನಡೆಯುತ್ತಿರುವ ಪ್ರಭಾವದ ಫಲವಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಮೇಲುನೋಟಕ್ಕೆ ಮಾತ್ರ ಉತ್ತಮ ಎನ್ನುವ ಭಾವನೆ ಬರುತ್ತಿದೆ. ಇಂಥ ಭಾವನೆಗಳನ್ನು ಒಪ್ಪಿಕೊಳ್ಳದಂತೆ ಕರೆ ನೀಡಿದರು.ಖಾಸಗಿ ವಿಶ್ವವಿದ್ಯಾಲಯ ಮಸೂದೆ, ವಿದೇಶಿ ವಿಶ್ವವಿದ್ಯಾಲಯದ ಮಸೂದೆ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಿದೇಶ ನೇರ ಬಂಡವಾಳ ಹೂಡಿಕೆಯನ್ನು ತರುತ್ತಿರವುದರಿಂದ ಬಡವರಿಗೆ ಶಿಕ್ಷಣ ಮರಿಚೀಕೆಯಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿನಾಥ ಎಸ್.ಎಚ್ ವಹಿಸಿದ್ದರು. ಜಿ.ಎಂ. ಮೇಟಿ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಶರ್ಮಾ ಮೊದಲಾದವರು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು. ಅಭಯ ದಿವಾಕರ ಕಾರ್ಯಕ್ರಮ ನಿರೂಪಿಸಿದರು. ಹಣಮಂತರಾವ್ ವಂದಿಸಿದರು.ಸಭೆಯ ನಂತರ ವಿದ್ಯಾರ್ಥಿಗಳ ಮುಂದಿನ ಹೋರಾಟಕ್ಕಾಗಿ ಗುಲ್ಬರ್ಗ ಸ್ಥಳೀಯ ಸಮಿತಿ ರಚನೆ ಮಾಡಲಾಯಿತು.ಪದಾಧಿಕಾರಿ ಪಟ್ಟಿ: ಮಲ್ಲಿನಾಥ ಸಿಂಗೆ (ಅಧ್ಯಕ್ಷ), ರವಿ.ಪಿ, ವಿಶ್ವನಾಥ (ಉಪಾಧ್ಯಕ್ಷ), ಹಣಮಂತ (ಕಾರ್ಯದರ್ಶಿ), ಅಶ್ವನಿ ಚೌಲ್, ಅಭಯ, ಈರಣ್ಣ (ಸಹಕಾರ್ಯದರ್ಶಿಗಳು), ವಿರೇಶ, ನಂದಿನಿ, ಲಿಂಗರಾಜ, ಬಸವಂತರಾಯ, ಶ್ವೇತಾ ರಾಜನಾಳ, ಏಕತಾ ಬಿರಾದಾರ್, ಶಿಲ್ಪಾ ಕುಸನೂರ, ಕಾಶಿರಾಂ, ಸ್ನೇಹಾ, ನಾಗಾರ್ಜುನ, ಅಜಯ್,ಅಂಬಿಕಾ (ಸದಸ್ಯರು), ವಿವೇಕಾನಂದ, ಅಶ್ವಿನಿ, ಮಂಜುನಾಥ, ನವೀನ್, ಭಾಗ್ಯಮುತ್ತಕೊಡ, ಅಂಬಿಕಾ, ರೋಹಿತ್‌ದಾಸ್, ರೇಷ್ಮಾ ಸೇರಿದಂತೆ 26 ಜನರ ಸಮಿತಿ ರಚನೆ ಮಾಡಲಾಗಿದೆ ಎಂದು ಬಸವಂತರಾಯ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry