ಆಧಾರ್ ಕಾರ್ಡ್ 2ನೇ ಹಂತ ಆರಂಭ

7

ಆಧಾರ್ ಕಾರ್ಡ್ 2ನೇ ಹಂತ ಆರಂಭ

Published:
Updated:

ಗುಲ್ಬರ್ಗ: ತಾಲ್ಲೂಕಿನ ಅವರಾದ (ಬಿ) ಗ್ರಾಮದ ಉಪ ತಹಸೀಲ್ದಾರರ ನಾಡ ಕಾರ್ಯಾಲಯದಲ್ಲಿ ಎರಡನೇ ಹಂತದ ಆಧಾರ್ ಕಾರ್ಡ್ ಭಾವಚಿತ್ರ ತೆಗೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ ಚಾಲನೆ ನೀಡಿದರು.ಗುಲ್ಬರ್ಗ ತಾಲ್ಲೂಕಿನಲ್ಲಿ 2, ಆಳಂದ 1, ಜೇವರ್ಗಿ 2 ಸೇರಿದಂತೆ ಜಿಲ್ಲೆಯ 5 ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ವಿತರಣೆ ಕಾರ್ಯ ಆರಂಭಿಸಲಾಗಿದೆ. ಜಿಲ್ಲೆಗೆ 130 ಕಿಟ್ ನೀಡಲಾಗಿದೆ. ತಾಲ್ಲೂಕಿಗೆ ಒಬ್ಬ ಕ್ಷೇತ್ರ ಅಧಿಕಾರಿ ಇರುತ್ತಾರೆ. ಒಂದು ತಿಂಗಳು 5 ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ವಿತರಿಸಿ ಜನರಿಂದ ಬರುವ ಪ್ರತಿಕ್ರಿಯೆ ಗಮನಿಸಿ ಯಾವುದೇ ರೀತಿ ಸಮಸ್ಯೆಯಾಗದಂತೆ ವಿತರಣೆ ಮಾಡಲಾಗುವುದು ಎಂದು ವಲಯ ವ್ಯವಸ್ಥಾಪಕ ವೆಂಕಟೇಶ್ವರರಾವ ಹೇಳಿದರು.ಮಾರ್ಸ್ ಟೆಲಿಕಾಂ ಸಿಸ್ಟಂ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. ಎರಡನೇ ಹಂತದ ಆಧಾರ್ ಕಾರ್ಡ್ ಚಾಲನೆಗೆ 4.25 ಲಕ್ಷ ಹಣ ಮಂಜೂರಾಗಿದೆ. ಸರ್ಕಾರದ ಸೌಲಭ್ಯಗಳನ್ನು ಶ್ರೀಸಾಮಾನ್ಯರಿಗೆ ನೀಡುವ ಸಲುವಾಗಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಆಧಾರ್ ಕಾರ್ಡ್ ವಿತರಿಸುತ್ತಿದೆ.  ಒಂದನೇ ಹಂತದಲ್ಲಿ 6.75 ಲಕ್ಷ ಆಧಾರ್ ಕಾರ್ಡ್‌ಗಳನ್ನು ಜನಸಾಮಾನ್ಯರಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ವಿಶಿಷ್ಟ ಗುರುತಿನ ಪತ್ರ ಪಡೆಯುವರು ಯಾವುದೇ ಸಣ್ಣ ತಪ್ಪುಗಳಾಗದಂತೆ ಅವರ ಹೆಸರು, ವಿಳಾಸ, ಜನ್ಮ ದಿನಾಂಕ, ಇ-ಮೇಲ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಅರ್ಜಿಯಲ್ಲಿ ಇರುವಂತಹ ಎಲ್ಲ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅಂಥವರಿಗೆ ಆಧಾರ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.ತಹಸೀಲ್ದಾರ ಮಹಾದೇವಪ್ಪ ಸಾಸನೂರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಚಣ್ಣಗೌಡ, ಅಧ್ಯಕ್ಷ ವೀರೇಶ ಬಿರಾದಾರ, ಚಿದಂಬರಾವ ಪೂಜಾರಿ ಮತ್ತಿತರರು ಇದ್ದರು.  ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇದ್ದಲ್ಲಿ ಫಲಾನುಭವಿಗಳು ಮಾಹಿತಿಗಾಗಿ 180018 01947ಗೆ,  ಠಿಠಿ:/್ಠಜಿಜಿ.ಜಟ.ಜ್ಞಿ ವೆಬ್‌ಸೈಟ್‌ಗೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry