`ಆಸ್ಪತ್ರೆ ಹೆರಿಗೆಯಿಂದ ಎಲ್ಲವೂ ಕ್ಷೇಮ'

7

`ಆಸ್ಪತ್ರೆ ಹೆರಿಗೆಯಿಂದ ಎಲ್ಲವೂ ಕ್ಷೇಮ'

Published:
Updated:

ಖಜೂರಿ (ಆಳಂದ ತಾ.): ಹೆರಿಗೆ ಒಂದು ಸಹಜ ಕ್ರಿಯೆಯಾದರೂ ಆ ಸಮಯದಲ್ಲಿ ಯಾವ ತೊಂದರೆಗಳು ಉಂಟಾಗಬಹುದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ತಾಯಿ ಮತ್ತು ಮಗುವಿನ ಕ್ಷೇಮಕ್ಕಾಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗುವುದು ಉತ್ತಮ ಎಂದು ಖಜೂರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಧಾಕರ ಹೇಳಿದರು.ಅವರು ಬುಧವಾರ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಜನನಿ ಸುರಕ್ಷಾ ಯೋಜನೆ ಮತ್ತು ರೋಗ ನಿರೋಧಕ ಲಸಿಕೆಗಳ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಲ್ಬರ್ಗದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಖಜೂರಿ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಪ್ರೌಢಶಾಲೆ, ಗುಲ್ಬರ್ಗದ ಕಿರಣ ರೂರಲ್ ರಿಕನ್ಸ್‌ಟ್ರಕ್ಷನ್ ಸೊಸೈಯಿಟಿ ಹಾಗೂ ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.ಹೆರಿಗೆ ಸಮಯದಲ್ಲಿ ಮಗುವಿನ ತಲೆ ಬರುವ ಬದಲು ಬೇರೆ ಭಾಗ ಬಂದರೆ ಹೆರಿಗೆಗೆ ಅಡ್ಡಿ ಉಂಟಾಗುತ್ತದೆ. ಇದರಿಂದ ಪ್ರಾಣಕ್ಕೆ  ಅಪಾಯವಾಗಬಹುದು ಎಂದರು. ದೀರ್ಘ ಕಾಲದ ಹೆರಿಗೆ ನೋವು, ದೊಡ್ಡ ಗಾತ್ರದ ಮಗು, ಅಡ್ಡಗಟ್ಟಿದ ಹೆರಿಗೆ, ಔಷಧಿಗಳ ವ್ಯತ್ಯಾಸ ತರಬೇತಿ ಇಲ್ಲದ ಸೂಲಗಿತ್ತಿಯರು ಮಾಡುವ ಹೆರಿಗೆ ಮುಂತಾದ ಕಾರಣಗಳಿಂದ ಪ್ರಾಣಾಪಾಯವಾಗಬಹುದು ಎಂದು ವಿವರಿಸಿದರು.ಆಳಂದ ತಾಲ್ಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ ಹೊಲಸಾದ ಜಾಗ, ಸ್ವಚ್ಛವಿಲ್ಲದ ಕೈಗಳು, ಸ್ವಚ್ಛವಿಲ್ಲದ ಸಲಕರಣೆ ಬಳಕೆಯಿಂದ ನಂಜುಂಟಾಗಾಬಹುದು ಎಂದರು.ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರಿ ಅಶೋಕ ಸಾವಳೇಶ್ವರ ವಿಚಾರಸಂಕಿರಣ ಉದ್ಘಾಟಿಸಿದರು.ಖಜೂರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಶಿವಶರಣಪ್ಪ ಸ್ವಾಗತಿಸಿದರು. ಖಜೂರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಮಲ್ಲಿಕಾರ್ಜುನ ಪಡಶೆಟ್ಟಿ ವಂದಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರಭಾವತಿ ಶರಣಪ್ಪ ಢಗೆ, ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ರಾಜನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ.ಎಂ.ಬಿಲಗುಂದಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸದಾನಂದ ಬಂಗರಗಿ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ಶರಣಪ್ಪ.ಜಿ.  ಘಂಟೆ, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಹೆಬ್ಬಾಳ ಉಪಸ್ಥಿತರಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕುರಿತು ಜಾಥಾ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry