`ಸಂಸ್ಕೃತಿ ಉಳಿಯುವಲ್ಲಿ ಜಾನಪದ ಪಾತ್ರ ಹಿರಿದು'

7

`ಸಂಸ್ಕೃತಿ ಉಳಿಯುವಲ್ಲಿ ಜಾನಪದ ಪಾತ್ರ ಹಿರಿದು'

Published:
Updated:

ಸೇಡಂ: `ಜನಪದರಿಂದಲೇ ದೇಶದ ಶ್ರೀಮಂತ ಸಂಸ್ಕೃತಿ ಇಂದಿಗೂ ಉಳಿಯಲು ಸಾಧ್ಯವಾಗಿದೆ' ಎಂದು ಮಹಾರಾಷ್ಟ್ರದ ಕೊಲ್ಹಾಪೂರ ಕನ್ನೇರಿ ಆಶ್ರಮದ ಪೂಜ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಈಚೆಗೆ ಗುಲ್ಬರ್ಗ ಆಕಾಶವಾಣಿ ಕೇಂದ್ರವು ಸೇಡಂ ಪಟ್ಟಣದ ಮಾತೃಛಾಯಾ ಪದವಿ ಪೂರ್ವ ಕಾಲೇಜಿನಲ್ಲಿ  ಏರ್ಪಡಿಸಿದ್ದ `ಜಾನಪದ ಜೇನು' ಹೆಸರಿನ ಜಾನಪದ ಕಲಾ ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು.  `ದೇಶದ ಸಂಸ್ಕೃತಿಯ ಮೂಲ ಜಾನಪದ. ಇದು ಶಾಶ್ವತವಾಗಿ ಉಳಿಯುವಲ್ಲಿ ಎಲ್ಲರ ಪ್ರೋತ್ಸಾಹ ಅಗತ್ಯ' ಎಂದು ಪ್ರತಿಪಾದಿಸಿದ ಅವರು, `ಗೊಂದಲಿಗರ ಹಾಡು, ಮೋಹರಂ ಪದಗಳು, ಲಂಬಾಣಿ ಕುಣಿತ, ದೊಡ್ಡಾಟ ಹೀಗೆ ಹತ್ತು ಬಗೆಯ ಜಾನಪದ ಇಂದಿಗೂ ಗ್ರಾಮಗಳಲ್ಲಿ ಉಳಿದಿದೆ' ಎಂದರು.`ಜಾನಪದ ಜೇನು' ಹೆಸರಿನ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಡಾ. ಬಸವರಾಜ ಪಾಟೀಲ ಸೇಡಂ ಅವರು, `ಜಾನಪದ ಮಣ್ಣಿನಿಂದಲೇ ಹುಟ್ಟಿ ಬಂದಿದೆ. ಶಿಕ್ಷಣ, ಜ್ಞಾನ, ಆರೋಗ್ಯ, ಯೋಗ, ಶಿಷ್ಟಾಚಾರ, ಯೋಗ, ವೈಜ್ಞಾನಿಕತೆ, ಸಂಸ್ಕೃತಿ, ಸಂಸ್ಕಾರ ಸೇರಿರುವ ಒಂದು ಬೃಹತ್ ಕಲೆ ಇದು' ಎಂದರು.ಆಕಾಶವಾಣಿ ಮುಖ್ಯಸ್ಥೆ ಅಂಜನಾ ಯಾತನೂರ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಾಹಕ ರಾಜೇಂದ್ರ ಕುಲಕರ್ಣಿ   ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ 130 ಕಲೆಗಳಲ್ಲಿ 55 ಕಲೆಗಳು ಉಳಿದಿವೆ ಎಂದರು.ಅಂಜಲಿ ಕುಲಕರ್ಣಿ, ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸೋಮಶೇಖರ ರೂಳಿ ಮತ್ತು ಶೋಭಾ ಪಾಟೀಲ ನಿರೂಪಿಸಿದರು. ಕೇಂದ್ರದ ಸಹಾಯಕ ಎಂಜನಿಯರ್ ಜಿ. ಶಿವಶಂಕರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಉದಯಕುಮಾರ ಶಹಾ, ಕಾರ್ಯದರ್ಶಿ ಡಾ. ನಾಗರೆಡ್ಡಿ ಪಾಟೀಲ, ಉದ್ಯಮಿ ಮತ್ತು ದಾನಿ ಹನುಮಾನಭಗಸ್ ಗಿಲ್ಡಾ, ಸತ್ಯನಾರಾಯಣ ತಾಪಡಿಯಾ, ರಾಜಕುಮಾರ ಪಾಟೀಲ ತೆಲಕೂರ ಇದ್ದರು. ಶಿವಯ್ಯ ಮಠಪತಿ ವಂದಿಸಿದರು.ಸನ್ಮಾನ: ಗುಲ್ಬರ್ಗ ಆಕಾಶವಾಣಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಲು ಕಾರಣರಾದ ರಾಜೇಂದ್ರ ಕುಲಕರ್ಣಿ, ಸೋಮಶೇಖರ ರೂಳಿ, ಅಂಜನಾ ಯಾತನೂರ,ಶೋಭಾ ಪಾಟೀಲ ಅವರನ್ನು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸನ್ಮಾನಸಿದರು ಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry