ತೊಗರಿ ಮಂಡಳಿ ತುರ್ತು ಸಭೆ

7
ಜಿಲ್ಲಾಧಿಕಾರಿ ಪ್ರಸನ್ನಕುಮಾರ ಭರವಸೆ

ತೊಗರಿ ಮಂಡಳಿ ತುರ್ತು ಸಭೆ

Published:
Updated:

ಗುಲ್ಬರ್ಗ: ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಸ್ಥಿರತೆಗಾಗಿ ಸರ್ಕಾರದ ಆವರ್ತ ನಿಧಿಯಿಂದ ರೂ. 100 ಕೋಟಿ ಬಡ್ಡಿ ರಹಿತ ಸಹಾಯ,  ಕೃಷಿ ವಿಮೆ ಅನುಷ್ಠಾನಕ್ಕಾಗಿ ಪ್ರಾಯೋಗಿಕ ಜಿಲ್ಲೆಯಾಗಿ ಆಯ್ಕೆಯಾದ ಗುಲ್ಬರ್ಗ ಜಿಲ್ಲೆಯ ರೈತರಿಗೆ ತುರ್ತುವಿಮೆ ಪರಿಹಾರ ಕೊಡಬೇಕು, ತೊಗರಿಗೆ ರೂ. 5,000 ಬೆಂಬಲ ಬೆಲೆ ಇನ್ನಿತರ ವಿಷಯ ಕುರಿತು ತೊಗರಿ ಮಂಡಳಿಯ ತುರ್ತು ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಭರವಸೆ ನೀಡಿದರು.ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ನೇತೃತ್ವದಲ್ಲಿ ಶುಕ್ರವಾರ ಈ ಕುರಿತು ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರು ಮನವಿ ಸಲ್ಲಿಸಿದಾಗ, ಅವರೊಂದಿಗೆ ತೊಗರಿ ಬೆಳೆಗಾರರ ಸಂಕಷ್ಟ ಆಲಿಸಿದ ಜಿಲ್ಲಾಧಿಕಾರಿ, `ಈ ಕುರಿತು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು' ಎಂದು ತಿಳಿಸಿದರು.`ತೊಗರಿ ಮಂಡಳಿಗೆ ಖಾಲಿಯಿರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆ ನೇಮಕ ಆಗುವವರೆಗೆ ಎಪಿಎಂಸಿ ಕಾರ್ಯದರ್ಶಿಗೆ ಉಸ್ತುವಾರಿ ವಹಿಸಲಾಗುವುದು. ನೇಮಕ ಕುರಿತು ಸಂಬಂಧಿಸಿದವರ ಮೇಲೆ ಒತ್ತಡ ತರಲಾಗುವುದು' ಎಂದು ತಿಳಿಸಿದರು.ಉಮಾಕಾಂತ ನಿಗ್ಗುಡಗಿ, ಬಿ.ಆರ್. ಪಾಟೀಲ, ಬಸವರಾಜ ಇಂಗಿನ್, ಮಾರುತಿ ಮಾನ್ಪಡೆ, ಸೋಮಶೇಖರ ಗೋನಾಯಕ್, ಕರಿಸಿದ್ದಪ್ಪ ಪಾಟೀಲ, ಅರುಣಕುಮಾರ ಪಾಟೀಲ, ಸುರೇಶ ಬಿಡಿಗೇರ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಉದ್ಯಮಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry