ಗರ್ಭಿಣಿ ಉದರದಲ್ಲಿದ್ದ 8 ಕಿಲೋ ಗಡ್ಡೆ!

7
ಬಸವೇಶ್ವರ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಗರ್ಭಿಣಿ ಉದರದಲ್ಲಿದ್ದ 8 ಕಿಲೋ ಗಡ್ಡೆ!

Published:
Updated:

ಗುಲ್ಬರ್ಗ: ಉದರವು ಅಸಹಜ ಗಾತ್ರದಲ್ಲಿ ಉದಿಕೊಂಡಿದ್ದಕ್ಕೆ ಅವಳಿ ಮಕ್ಕಳಿರಬಹುದು ಎಂದು ಭಾವಿಸಿದ್ದ ಗರ್ಭಿಣಿ ಏಳು ತಿಂಗಳಿನ ನಂತರ ಯಮಯಾತನೆ ಅನುಭವಿಸಿದ್ದಾರೆ. ಬಸವೇಶ್ವರ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿದಾಗ ಜೀವಕ್ಕೆ ಅಪಾಯಕಾರಿ ಗೆಡ್ಡೆಯೊಂದು ಬೆಳೆದಿರುವುದು ಕಂಡುಬಂದಿದೆ. ಕೂಡಲೇ ಚಿಕಿತ್ಸೆ ಆರಂಭಿಸಿದ ಬಸವೇಶ್ವರ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ತಜ್ಞರು ಗರ್ರ್ಭೀಣಿಗೆ ಒಂಭತ್ತು ತಿಂಗಳಾದ ನಂತರ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಎಂಟು ಕಿಲೋ ತೂಕದಷ್ಟಿದ್ದ ಗಡ್ಡೆ ಹೊರತೆಗೆದು ಮಗು ಹಾಗೂ ಮಹಿಳೆಯನ್ನು ಸಾವಿನ ದವಡೆಯಿಂದ ಪಾರುಮಾಡಿದ್ದಾರೆ.ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಾಚಗುಂಡಾಳ ಗ್ರಾಮದ ಲಕ್ಷ್ಮೀ ಮಾನಪ್ಪ (30) ಇದೀಗ ಗಂಡು ಮಗುವಿನೊಂದಿಗೆ ಆರೋಗ್ಯವಾಗ್ದ್ದಿದಾರೆ ಎಂದು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಗಂಗಾಂಬಿಕಾ ಎಂ. ನಿಷ್ಠಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.`ಉದರ ಕೊಯ್ಯುವ (ಲಾಪ್ರೊಟಮಿ) ಶಸ್ತ್ರಕ್ರಿಯೆ ಕೈಗೊಂಡು ಗಂಡು ಕೂಸಿನ ಸುರಕ್ಷಿತ ಜನನಕ್ಕೆ ಅನುವು ಕೊಡಲಾಯಿತು. ಮಗು 2 ಕೆ.ಜಿ. ತೂಕವಿತ್ತು. ಅನಂತರ ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ `ಸಿಜೇರಿಯನ್ ಹಿಸ್ಟ್ರೇಕ್ಟಾಮಿ ಹಾಗೂ ಫ್ರೈಬ್ರಾಯ್ಡ ಮೈಯೋಮೆಕ್ಟಮಿ' ಮೂಲಕ ಎಂಟು ಕಿಲೋ ತೂಕದ 25 ್ಡ25 ಸೆಂ.ಮೀ. ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಯಿತು' ಎಂದರು.ಶಸ್ತ್ರಚಿಕಿತ್ಸೆಯಾದ ಕೂಡಲೇ ತೀವ್ರ ರಕ್ತಹೀನತೆಯಿಂದ ಬಳಲಿದ್ದ ತಾಯಿಗೆ ನಾಲ್ಕು ಯೂನಿಟ್ ರಕ್ತ ನೀಡಲಾಯಿತು. ಈಗ ತಾಯಿ, ಮಗು ಅಪಾಯದಿಂದ ಪಾರಾಗಿದ್ದಾರೆ. ಇದು ಲಕ್ಷ್ಮಿಯ ಎರಡನೇ ಹೆರಿಗೆಯಾಗಿದ್ದು; 3 ವರ್ಷಗಳ ಹಿಂದೆ ಮೊದಲ ಹೆರಿಗೆ ಗುಲ್ಬರ್ಗ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮುಖಾಂತರ ನಡೆದಿದೆ ಎಂದು ತಿಳಿಸಿದರು.ಗರ್ಭದಲ್ಲಿ ಶಿಶು ಏಳು ತಿಂಗಳಾಗುವವರೆಗೂ ಯಾವುದೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳದ ಕಾರಣ, ಆರಂಭದಲ್ಲಿ ಗಡ್ಡೆ ಬೆಳೆದಿರುವುದು ಅವರಿಗೆ ತಿಳಿದಿಲ್ಲ. ಗರ್ಭಿಣಿಯರು ಆರಂಭದಲ್ಲೆ ಒಮ್ಮೆಯಾದರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಅನಂತರ ಉಂಟಾಗುವ ಅಪಾಯದಿಂದ ಪಾರಾಗಬಹುದು. ಗ್ರಾಮೀಣ ಮಹಿಳೆಯರು ಸಾಮಾನ್ಯವಾಗಿ ಹೆರಿಗೆ ಸಮಯದವರೆಗೆ ಆಸ್ಪತ್ರೆಗೆ ಬರುವುದೆ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.ಶಸ್ತ್ರಚಿಕಿತ್ಸೆ ನಡೆಸಿದ ತಂಡ:       ಡಾ. ಗಂಗಾಂಬಿಕಾ ಎಂ. ನಿಷ್ಠಿ ಅವರ ಮಾರ್ಗದರ್ಶನದಲ್ಲಿ ಡಾ. ಉಮಾ ಎಸ್. ಆಂದೋಲಾ,ಡಾ. ಮಹಾನಂದಾ ಮೇಳಕುಂದಿ,   ಡಾ. ಸಂಜನಾ ತಲ್ಲೂರ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಗಮನ ಸೆಳೆದಿದ್ದಾರೆ.ಅಭಿನಂದನೆ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ  ಬಾಬುರಾವ್ ಎಸ್. ಮಂಗಾಣಿ, ಕಾರ್ಯದರ್ಶಿ ಶರದ್ ಎಂ. ರಾಂಪುರೆ, ಜಂಟಿ ಕಾರ್ಯದರ್ಶಿ ಡಾ. ಸಂಪತ್‌ಕುಮಾರ ಲೋಯಾ ಹಾಗೂ ಬಸವೇಶ್ವರ ಆಸ್ಪತ್ರೆ ಸಮಿತಿ ಸಂಚಾಲಕ ಡಾ. ಭೀಮಾಶಂಕರ ಬಿಲಗುಂದಿ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry