371ನೇ ವಿಧಿ ತ್ವರಿತ ಜಾರಿಗೆ ಆಗ್ರಹ

7
ಡಿ.27-28ರಂದು ಶ್ರೀರಾಮುಲು ಉಪವಾಸ ಸತ್ಯಾಗ್ರಹ

371ನೇ ವಿಧಿ ತ್ವರಿತ ಜಾರಿಗೆ ಆಗ್ರಹ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ವಿಧಿಗೆ ಶೀಘ್ರವೇ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿ ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ, ಶಾಸಕ ಶ್ರೀರಾಮುಲು ಡಿ.27 ಮತ್ತು 28ರಂದು ಗುಲ್ಬರ್ಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.371ನೇ ವಿಧಿ ತಿದ್ದುಪಡಿ ಪ್ರಕ್ರಿಯೆ ಇನ್ನೂ ಸಂಪೂರ್ಣಗೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾರಣ ನೀಡಿ ಕಾಲಹರಣ ಮಾಡುತ್ತಿವೆ. ಇದನ್ನು ಖಂಡಿಸಿ ಮತ್ತು 371ನೇ ವಿಧಿ ಜಾರಿಯ ಅಧಿಕಾರವನ್ನು ಚುನಾಯಿತ ಸರ್ಕಾರಕ್ಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಭಾಗದ ವಿವಿಧ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯರೂಪಕ್ಕೆ ತರಲೂ ಆಗ್ರಹಿಸಲಾಗುವುದು ಎಂದು ಹೇಳಿದರು.ಅಲ್ಪಸಂಖ್ಯಾತ ಸಮಾವೇಶ:  ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಜ.6ರಂದು ಅಲ್ಪಸಂಖ್ಯಾತರ ಸಮಾವೇಶ ಸಂಘಟಿಸಲಾಗಿದೆ. ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಮ್ಮಿಕೊಳ್ಳುವ ಯೋಜನೆಗಳು, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿ ನೀಡುವ ಕೊಡುಗೆ ಹಾಗೂ ಮಾಡಬೇಕಾದ ಕಾರ್ಯದ ಬಗ್ಗೆ ಪಕ್ಷದ ಸಂಸ್ಥಾಪಕರು ಅಂದು ಸವಿವರವಾಗಿ ಮಾಹಿತಿ ನೀಡಲಿದ್ದಾರೆ ಎಂದು ಅವರು ವಿವರಿಸಿದರು.ಬೀದರ್‌ನಿಂದ ಬೆಂಗಳೂರು ತನಕ ಪಾದಯಾತ್ರೆಯಲ್ಲಿ ಶ್ರಿರಾಮುಲು ಅವರಿಗೆ ಜನರ ಸಮಸ್ಯೆಗಳು ಮನವರಿಕೆ ಆಗಿವೆ. ಜನರ ಪರ ಹೋರಾಟ ನಡೆಸುವ ಭರವಸೆಯನ್ನೂ ನೀಡಿದ್ದರು. ಕೊಟ್ಟ ಭರವಸೆಯನ್ನು ಈಡೇರಿಸುತ್ತಿದ್ದಾರೆ ಎಂದು ಜಿಲ್ಲಾ ಸಂಚಾಲಕ  ಕಲ್ಯಾಣರಾವ ಅಂಬಲಗಿ ಹೇಳಿದರು.ಬಾಬು ಹೊನ್ನಾನಾಯಕ, ಶಂಕ್ರಣ್ಣ ವಣಿಕ್ಯಾಳ, ಅವಾಹುದ್ದೀನ್, ನಂದಕುಮಾರ ಮಾಲಿಪಾಟೀಲ, ಅಶೋಕ ಲಿಂಬಾವಳಿ, ಗುರುರಾಜ ಕುಲಕರ್ಣಿ ರೇವೂರ, ಶಿವಾನಂದ ಗುಗವಾಡ, ಆದಿನಾಥ ಹೀರಾ, ಲಕ್ಷ್ಮೀ ಕುಲಕರ್ಣಿ, ಶರಣಮ್ಮ ಪೂಜಾರಿ, ದಿಗಂಬರ ರಾವ್ ಬೆಳಮಗಿ ಇದ್ದರು. ಅಮಾನತು ಮಾಡಿ: ಬಿಜೆಪಿಗೆ ಸವಾಲು

ಗುಲ್ಬರ್ಗ:
ಸಾಮರ್ಥ್ಯವಿದ್ದರೆ ಬಿಎಸ್‌ಆರ್ ಪಕ್ಷ ಜೊತೆ ಗುರುತಿಸಿಕೊಂಡ ಶಾಸಕರನ್ನು ಬಿಜೆಪಿ ಹೈಕಮಾಂಡ್ ಅಮಾನತು ಮಾಡಲಿ ಎಂದು ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ ಸವಾಲು ಹಾಕಿದರು.ಬಿಜೆಪಿ-ಕೆಜೆಪಿ ಎಂಬ ಗೊಂದಲದ ರಾಜ್ಯ ಸರ್ಕಾರವು ಕೂಡಲೇ ರಾಜೀನಾಮೆ ನೀಡಿ ಚುನಾವಣೆಗೆ ಹೋಗಬೇಕು. ಆಡಳಿತದ ಡೊಂಬರಾಟ ಪ್ರದರ್ಶಿಸಬಾರದು. ಇದು ರಾಜ್ಯದ ಅಭಿವೃದ್ಧಿಗೆ ಮಾರಕ.ರಾಜೀನಾಮೆ ನೀಡಿ ಬದ್ಧತೆ ಮೆರೆಯಬೇಕು. ಇಲ್ಲವೇ ರಾಜ್ಯಪಾಲರೇ ವಿಧಾನಸಭೆ ವಿಸರ್ಜಿಸಲಿ ಎಂದು ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಅಶೋಕ ಲಿಂಬಾವಳಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಪ್ರಶ್ನಿಸಿದ `ಬಿಎಸ್‌ಆರ್ ಪಕ್ಷದಲ್ಲಿ ಗುರುತಿಸಿಕೊಂಡವರೂ  ಇನ್ನೂ ಬಿಜೆಪಿಯಲ್ಲೇ ಇದ್ದಾರೆ. ಅವರ‌್ಯಾಕೆ ರಾಜೀನಾಮೆ ನೀಡದೇ ಗೊಂದಲ ಸೃಷ್ಟಿಸಿದ್ದಾರೆ' ಎಂಬ ಪ್ರಶ್ನೆಗೆ ಶಿವಪುತ್ರಪ್ಪ ದೇಸಾಯಿ ಪ್ರತಿಕ್ರಿಯಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry