ಸಿದ್ರಾಮಪ್ಪ ತಳ್ಳಳ್ಳಿ 17ನೇ ಪುಣ್ಯಸ್ಮರಣೆ ಇಂದು

7
ಎಲ್ಲರ ಲೇಸು ಬಯಸಿದ ಹಿರಿಯ ಜೀವಿ

ಸಿದ್ರಾಮಪ್ಪ ತಳ್ಳಳ್ಳಿ 17ನೇ ಪುಣ್ಯಸ್ಮರಣೆ ಇಂದು

Published:
Updated:
ಸಿದ್ರಾಮಪ್ಪ ತಳ್ಳಳ್ಳಿ 17ನೇ ಪುಣ್ಯಸ್ಮರಣೆ ಇಂದು

ಸೇಡಂ: ಶರಣರ ಚಿಂತನೆ, ಆಲೋಚನೆ ಮತ್ತು ತತ್ವನಿಷ್ಠೆಗಳನ್ನು ನಂಬಿ ಅದರಂತೆ  ಜೀವನದಲ್ಲಿ ಕಹಿ-ಸಿಹಿ ದಿನಗಳನ್ನು ಕಳೆದು ಕುಟುಂಬದ ಸದಸ್ಯರಿಗೆ ಉತ್ತಮ ಮಾರ್ಗದರ್ಶನ ನೀಡಿದ ಲಿಂಗೈಕ್ಯ ಸಿದ್ರಾಮಪ್ಪ ತಳ್ಳಳ್ಳಿ ಅವರ ಬದುಕು ಇಂದಿಗೂ ಪ್ರಸ್ತುತ.ಸಿದ್ರಾಮಪ್ಪ ತಳ್ಳಳ್ಳಿ ಶಿವಾಚಾರ್ಯಗಳವರಿಂದ ಶಿಷ್ಯತ್ವ ಪಡೆದುಕೊಂಡವರಲ್ಲ.  ಆದರೆ ಅವರು, ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರ ಲೇಸನ್ನೇ ಬಯಸುತ್ತಾ ಬಂದ ಹಿರಿಯ ಜೀವಿಯಾರಾಗಿದ್ದರು.

ಗುಲ್ಬರ್ಗ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ `ತಳ್ಳಳ್ಳಿ' ಗ್ರಾಮದ ವೀರಶೈವ ಸಮುದಾಯದ ಅವಿಭಕ್ತ ಕುಟುಂಬವೊಂದರ ಕುಡಿಯಾಗಿದ್ದ ಅವರು, `ಸೇಡಂ' ಪಟ್ಟಣ ಸೇರಿ ತಳ್ಳಳ್ಳಿ ಪರಿವಾರವನ್ನು ಬೆಳೆಸುತ್ತಾ ಅದು ಆಲದ ಗಿಡದಂತೆ ಹೆಮ್ಮರವಾಗಿ ಬೆಳೆಯಲು ಕಾರಣರಾದರು.ಜೀವನಮುಖಿಯಾಗಿದ್ದ ಸಿದ್ದರಾಮಪ್ಪ ಅವರು ಕೃಷಿ ಕಾಯಕದಲ್ಲಿ ತೊಡಗಿದ್ದರೂ   ಸಾಮಾಜಿಕ, ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡಂತಹ ಸುಸಂಸ್ಕೃತ ಸಂಪನ್ನರಾದ್ದರು.

ಆರು ಮಕ್ಕಳನ್ನು ಹೆತ್ತ ಲಿಂಗೈಕ್ಯ ಸಿದ್ರಾಮಪ್ಪ ತಳ್ಳಳ್ಳಿ ಅವರ ಪ್ರಥಮ ಪುಣ್ಯಸ್ಮರಣೆ ಗುಲ್ಬರ್ಗದಲ್ಲಿ ಆಯೋಜಿಸಿದ್ದಾಗ ಅಮರ ಪ್ರಿಯ ಮತ್ತು ಸಂಗಡಿಗರಿಂದ `ಭಕ್ತಿ ಸಂಗೀತ' ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದ್ವಿತೀಯ ವರ್ಷದ ಪುಣ್ಯತಿಥಿಯಲ್ಲಿ ಫಕೀರೇಶ್ವರ ಕಣವಿ ಮತ್ತು ಸಂಗಡಿಗರಿಂದ `ವಚನ ಸಂಗೀತೋತ್ಸವ' ನಡೆದಿತ್ತು.ತೃತೀಯ ವರ್ಷದಲ್ಲಿ ಎಲ್.ಬಿ.ಕೆ. ಅಲ್ದಾಳ ಮತ್ತು ಗವೀಶ ಹಿರೇಮಠ ಅವರ ಸಮ್ಮುಖದಲ್ಲಿ ಜರುಗಿದ ವಚನ ಸಂಗೀತೋತ್ಸವದಲ್ಲಿ ರೇವಣಪ್ಪ ಕುಂಕುಮಗಾರ ಮತ್ತು ಸಂಗಡಿಗರು ಭಾಗವಹಿಸಿದ್ದರು. ಹೀಗೆ ವರ್ಷವರ್ಷವೂ ಈ ಸ್ಮರೋಣೋತ್ಸವ ಕಾರ್ಯಕ್ರಮ, ಪದ್ಮಾ ಸವಾಯಿ, ಶ್ರೀನಿವಾಸ ಸವಾಯಿ, ಮಾಧೂರಿ ಘಾಣೇಕರ, ಕಲ್ಲಿನಾಥ ಹಿರೇಮಠ, ಅಲ್ಲದೇ ಅನೇಕ ಸಂಗೀತ ಕಲಾಕಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ಅವರ 17ನೇ ಪುಣ್ಯಸ್ಮರಣೆ ಬುಧವಾರ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಲಿದ್ದು. ಹಿರಿಯ ಹೊನ್ನಾಳಿ (ಉಳವಿ) ಶ್ರೀ ಚನ್ನಬಸವ ಮಹಾಸ್ವಾಮೀಜಿ ಸಂಜೆ 6.30ಕ್ಕೆ ಅನುಭಾವ ಪ್ರಸಾದ ನೀಡಲಿದ್ದಾರೆ.  ಸಾರಿಗೆ ಉದ್ಯಮಿ ಪಾಶುಮಿಯಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ನಿವೃತ್ತ ಶಿಕ್ಷಕ ವೀರಭದ್ರಪ್ಪ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಕಾಶವಾಣಿ ಕಲಾವಿ ಎಂ.ವೈ. ಸುರಪುರ ವಚನ ಸಂಗೀತ ನೀಡಲಿದ್ದಾರೆ.                                                                                                                       

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry