22ರಂದು ಜಿಲ್ಲಾ ಮಟ್ಟದ ದಸಂಸ ಸಮಾವೇಶ

7

22ರಂದು ಜಿಲ್ಲಾ ಮಟ್ಟದ ದಸಂಸ ಸಮಾವೇಶ

Published:
Updated:

ಗುಲ್ಬರ್ಗ: `ಪ್ರಸ್ತುತ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯ' ಕುರಿತು ಗುಲ್ಬರ್ಗದ ಜಗತ್ ವೃತ್ತದಲ್ಲಿ ಡಿ. 22ರಂದು ಮಧ್ಯಾಹ್ನ 3. 30ಕ್ಕೆ ಜಿಲ್ಲಾ ಮಟ್ಟದ ಬೃಹತ್ ಸಮಾವೇಶಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಶುಕ್ರವಾರ ಇಲ್ಲಿ ಹೇಳಿದರು.   ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರಿಗೆ ನಿರಂತರ ಅನ್ಯಾಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದ್ದು, ಸಂಗಾನಂದ ಭಂತೇಜಿ ಸಾನ್ನಿಧ್ಯ ವಹಿಸಲಿದ್ದಾರೆ.ಸಂಸದ ಧರ್ಮಸಿಂಗ್ ಸಮಾವೇಶ ಉದ್ಘಾಟಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಮಹಾನಗರ ಪಾಲಿಕೆ ಮೇಯರ್ ಸೋಮಶೇಖರ ಮೇಲಿನಮನಿ, ಶಾಸಕ ಡಾ. ಎಚ್.ಸಿ. ಮಹಾದೇವಪ್ಪ, ಮಾಜಿ ಸಚಿವರಾದ ಎಸ್.ಕೆ. ಕಾಂತಾ, ಜಿ. ರಾಮಕೃಷ್ಣ, ಶಾಸಕ ಅಲ್ಲಮಪ್ರಭು ಪಾಟೀಲ, ಬಿ.ವಿ. ಚಕ್ರವರ್ತಿ, ವಿಠ್ಠಲ್ ದೊಡ್ಮನಿ, ಬಸವರಾಜ ಬೆಣ್ಣೂರ, ಬಾಬು ಪಾಸ್ವಾನ, ಗೊಲ್ಲಹಳ್ಳಿ ಶಿವಪ್ರಸಾದ, ಗುರುಪ್ರಸಾದ ಕೆರೆಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಪುಂಡಲೀಕ ಗಾಯಕವಾಡ, ಧರ್ಮಣ್ಣ ಕೋಣೆಕರ, ಸಂತೋಷ ತೆಗನೂರ, ಭೀಮಾಶಂಕರ ತೇಲ್ಕರ್ ಮತ್ತಿತರರು ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry