ಗುಲ್ಬರ್ಗ ವಿದ್ಯಾರ್ಥಿಗಳ ಮೇಲುಗೈ

7
8ನೇ ಅಂತರರಾಷ್ಟ್ರೀಯ `ಅಬಾಕಸ್' ಸ್ಪರ್ಧೆ

ಗುಲ್ಬರ್ಗ ವಿದ್ಯಾರ್ಥಿಗಳ ಮೇಲುಗೈ

Published:
Updated:

ಗುಲ್ಬರ್ಗ: ಏಕರೂಪ ಪಠ್ಯಕ್ರಮ ಶಿಕ್ಷಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಪದ್ಧತಿ (ಸಿಬಿಎಸ್‌ಇ) ಪಠ್ಯಕ್ರಮವು ಈ ಭಾಗದ ಬಹುತೇಕ ವಿದ್ಯಾರ್ಥಿಗಳಿಗೆ `ಕಬ್ಬಿಣದ ಕಡಲೆ'ಯಾಗಿ ಪರಿಣಮಿಸಿದೆ.ಈ ಪಠ್ಯಕ್ರಮದ ಅಗತ್ಯ ಸಿದ್ಧತೆಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಜ್ಞಾನ ವೃದ್ಧಿಸುವ ಕಲಿಕೆಯನ್ನು ಆರಂಭಿಸಿದ್ದಾರೆ. ಅಂತಹ ಕಲಿಕೆಯಲ್ಲಿ `ಅಬಾಕಸ್' ಕಲಿಕೆಯೂ ಒಂದು. ಜ್ಞಾಪಕಶಕ್ತಿ, ಕಲ್ಪನಾಶಕ್ತಿ ಹಾಗೂ ಏಕಾಗ್ರತೆಯಿಂದ ಕೂಡಿದ ಕಲಿಕಾ ನಿಯಮ ಹೊಂದಿರುವ ಅಬಾಕಸ್ ಕಲಿಕೆಗೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.ಅಂತೆಯೇ ಗುಲ್ಬರ್ಗದಲ್ಲಿ ಅಬಾಕಸ್ ಕಲಿಕೆ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಇಲ್ಲಿನ ಮೆಹತಾಸ್ ಅಬಾಕಸ್ ಸಂಸ್ಥೆಯ ವಿದ್ಯಾರ್ಥಿಗಳು ಈಚೆಗೆ ಮಲೇಶಿಯಾದಲ್ಲಿ ಜರುಗಿದ 18ನೇ ಅಂತರರಾಷ್ಟ್ರೀಯ `ಅಬಾಕಸ್' ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 11 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಕರ್ನಾಟಕದಿಂದ ಒಟ್ಟು 13 ಜನ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇಬ್ಬರು ಬೆಂಗಳೂರಿನ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಉಳಿದ 11 ಜನರು ಗುಲ್ಬರ್ಗದ ವಿದ್ಯಾರ್ಥಿಗಳೇ ಎಂಬುದು ಹೆಮ್ಮೆಯ ಸಂಗತಿ ಎಂದು ಮೆಹತಾ ಅಬಾಕಸ್‌ನ ನಿರ್ದೇಶಕಿ ರಚನಾ ಮೆಹತಾ ವಿವರಿಸುತ್ತಾರೆ.ಅಲ್ಲಿ ನಡೆದ 8ನೇ ಮಟ್ಟದ ಸ್ಪರ್ಧೆಯಲ್ಲಿ ಶರಣಬಸವೇಶ್ವರ ಪಬ್ಲಿಕ್ ವಸತಿ ಶಾಲೆಯ ವಿಶ್ವಾರಾಧ್ಯ ಬಸನಗೌಡ ಪಾಟೀಲ 200 ಅಂಕಗಳ ಅಂಕಗಣಿತದ ಸೂತ್ರಗಳಲ್ಲಿ 191 ಸೂತ್ರಗಳನ್ನು (ಕೇವಲ 8 ನಿಮಿಷದಲ್ಲಿ )ಬಿಡಿಸಿ  ಅಂತರರಾಷ್ಟ್ರೀಯ ಮಟ್ಟದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾನೆ.2ನೇ ಮಟ್ಟದ ಸ್ಪರ್ಧೆಯಲ್ಲಿ ಕನಿಷ್ಕ್ ರವಿ ದೇಸಾಯಿ, ಆದಿತ್ಯ ಟಿ.ಎಚ್., ಪೂರ್ವಿಕಾ, ಮೂರನೇ ಮಟ್ಟದ ಸ್ಪರ್ಧೆಯಲ್ಲಿ ಅಹರಂ ಸೇಠಿಯಾ, ಆಶಿಷ್, ಅಪರಂಜಿ, ಆರನೇ ಮಟ್ಟದ ಸ್ಪರ್ಧೆಯಲ್ಲಿ ಪ್ರಜ್ವಲ್ ಕೋಲಿ ರನ್ನರ್ ಅಪ್ ಸ್ಥಾನ ಪಡೆದಿದ್ದು, ಶ್ರೇಯಾ ಜಾಜು ಸಮಾಧಾನಕರ ಬಹುಮಾನ ಪಡೆದಿದ್ದಾರೆ.“52 ದೇಶಗಳ 1,500 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕೇವಲ ಮೂರ‌್ನಾಲ್ಕು ಅಂಕಗಳಿಂದ ರನ್ನರ್ ಅಪ್ ಆಗಿರುವುದು ಬೇಸರದ ಸಂಗತಿ. ಆದರೂ ಈ ದಿಶೆಯಲ್ಲಿ ದಾರಿ ತೋರಿದ ಪಾಲಕ, ಶಿಕ್ಷಕ ಹಾಗೂ ತರಬೇತುದಾರರಿಗೆ ನಾನು ಋಣಿಯಾಗಿದ್ದೇನೆ. ಅಬಾಕಸ್ ಕಲಿಕೆಯಿಂದ ಭವಿಷ್ಯ ನಿಚ್ಚಳವಾಗಿದೆ” ಎಂದು ವಿಶ್ವಾರಾಧ್ಯ ಬಿ. ಪಾಟೀಲ ತಿಳಿಸುತ್ತಾರೆ.ಏನಿದು ಅಬಾಕಸ್?

ಭಾರತದ ಪಾರಂಪರಿಕ ಲೆಕ್ಕದ ಮಣಿ ಚೌಕಟ್ಟನ್ನು ಹೋಲುವ ಚೀನಾ ಮೂಲದ ಈ ಲೆಕ್ಕದ ಉಪಕರಣವನ್ನು ಮಲೇಶಿಯಾದ ಯುನಿವರ್ಸ್‌ಲ್ ಕಾನ್ಸೆಪ್ಟ್ ಮೆಂಟಲ್ ಅರ್ಥೋಮೆಟಿಕ್ ಸಿಸ್ಟಮ್ (ಯುಸಿಮಾಸ್) `ಅಬಾಕಸ್' ಅನ್ನುವ ಆಧುನಿಕ ಉಪಕರಣ ಸೃಷ್ಟಿಸಿತು. ಈ ಉಪಕರಣದ ಸಹಾಯದಿಂದ ಎಲ್ಲ ಬಗೆಯ ಲೆಕ್ಕವನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬಹುದು.“ನಮ್ಮ ಸಂಸ್ಥೆಯಲ್ಲಿ 400 ವಿದ್ಯಾರ್ಥಿಗಳು ವಿವಿಧ ಹಂತದಲ್ಲಿ ಅಬಾಕಸ್ ಶಿಕ್ಷಣ ಪದ್ಧತಿಯನ್ನು ಕಲಿಯುತ್ತಿದ್ದು, ಪಾಲಕರ ಸಹಕಾರದಿಂದ ಮಾತ್ರ ಮಕ್ಕಳ ಈ ಸಾಧನೆ ಸಾಧ್ಯವಾಗಿದೆ' ಎಂಬುದು ರಚನಾ ಮೆಹತಾ ಅವರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry