ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆ

7

ಮತದಾರರ ಪಟ್ಟಿ ಪರಿಷ್ಕರಣೆ: ಅವಧಿ ವಿಸ್ತರಣೆ

Published:
Updated:

ಗುಲ್ಬರ್ಗ: ಚುನಾವಣಾ ಆಯೋಗವು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಾದ  44-ಗುಲ್ಬರ್ಗ ದಕ್ಷಿಣ ಹಾಗೂ 45-ಗುಲ್ಬರ್ಗ ಉತ್ತರ ಕ್ಷೇತ್ರಗಳಲ್ಲಿ ಜನವರಿ 1, 2013ಕ್ಕೆ ಅನುಗುಣವಾಗಿ ಮತದಾರರ ಪಟ್ಟಿ ಪರಿಷ್ಕರಿಸಲು ದಿನಾಂಕ ನಿಗದಿಗೊಳಿಸಿ ವೇಳಾಪಟ್ಟಿಗೆ ಆದೇಶಿಸಿದೆ.ಇದರ ಅನುಸಾರ ಕರಡು ಮತದಾರರ ಪಟ್ಟಿಗಳನ್ನು ಅ.30ರಂದು ಪ್ರಕಟಿಸಿ, ಹೆಸರು ಸೇರ್ಪಡೆ ಮತ್ತು ಆಕ್ಷೇಪಣೆ ಸಲ್ಲಿಸಲು ಅ.30ರಿಂದ ನ. 29ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಈ ಪಟ್ಟಿಗಳಲ್ಲಿ ದೋಷ ಇರುವುದನ್ನು ಗಮನಿಸಿ ಎಲ್ಲ ನಿಗದಿತ ಸ್ಥಳಗಳಲ್ಲಿ ಮತದಾರರ ಹೆಸರು ಸೇರ್ಪಡೆ, ತೆಗೆದುಹಾಕುವುದು ಹಾಗೂ ತಿದ್ದುಪಡಿಗೆ ಡಿ.31, 2012ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.18 ವರ್ಷ ತುಂಬಿದ ಹಾಗೂ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳೂ ತಮ್ಮ ಹೆಸರು ಸೇರಿಸಲು ಅರ್ಹರು. ಶಾಲಾ ಕಾಲೇಜುಗಳ ಮುಖ್ಯಸ್ಥರು ಇದನ್ನು ಗಮನಿಸುವಂತೆ ಕೋರಲಾಗಿದೆ.

ಮತದಾರರ ಪಟ್ಟಿಯ ವಿಷಯವಾಗಿ ಯಾವುದೇ ಸ್ಪಷ್ಟೀಕರಣ ನೀಡಲು ನೋಡಲ್ ಅಧಿಕಾರಿಹಾಗಿ ಮಹಾನಗರ ಪಾಲಿಕೆ ಸಹಾಯಕ ಎಕ್ಸಿಕ್ಯುಟಿವ್ ಎಂಜಿನಿಯರ್ ಶಮಸುದ್ದೀನ್ ಅವರನ್ನು ನೇಮಿಸಲಾಗಿದ್ದು, (ಮೊಬೈಲ್ ಸಂ: 9448077865) ಅವರನ್ನು ಸಂಪರ್ಕಿಸಬಹುದು.ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ವಲಯ ಕಚೇರಿಗಳಿದ್ದು, ಮತದಾರರ ಸಹಾಯಕ್ಕಾಗಿ ಸಹಾಯಕ ಕೇಂದ್ರ ಸ್ಥಾಪಿಸಲಾಗಿದೆ. ಈ ಸೌಲಭ್ಯಕ್ಕಾಗಿ ಎಲ್ಲ ಕಚೇರಿಗಳಲ್ಲಿ ನಾಗರಿಕರು ತಮ್ಮ ಹೆಸರುಗಳ ಸೇರ್ಪಡೆಗೆ  ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ವೆಬ್ ಸೈಟ್ ಮುಖಾಂತರ ಮಾಹಿತಿಯನ್ನು ಪಡೆಯಬಹುದು.ಕೇಂದ್ರ ಚುನಾವಣಾ ಆಯೋಗವು ಆನ್‌ಲೈನ್ (ಅಂತರ್ಜಾಲ) ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದೆ. www.voterreg.kar.ni.in ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಸಿದ ಏಳು ದಿನದೊಳಗೆ ಅದರ ಒಂದು ಪ್ರತಿಯನ್ನು ಸದರಿ ಕಾರ್ಯಾಲಯಕ್ಕೆ ಸಲ್ಲಿಸಬೇಕು.ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷದ ಮುಖಂಡರು, ಪಾಲಿಕೆ ಸದಸ್ಯರು, ಶಾಲಾ ಕಾಲೇಜುಗಳ ಮುಖ್ಯಸ್ಥರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ 18 ವರ್ಷ ತುಂಬಿದ ಎಲ್ಲ ನಾಗರಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯುಕ್ತರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry