ವಿಧೇಯಕಕ್ಕೆ ಅನುಮೋದನೆ: ಕರ್ನಾಟಕಕ್ಕೆ ಸಂದ ಜಯ

7
ನನ್ನ ಜೀವನದ ಅತ್ಯಂತ ಸಂತಸದ ದಿನ- ಹೋರಾಟದ ಹರಿಕಾರ ಮಾಜಿಸಚಿವ ವೈಜನಾಥ ಪಾಟೀಲ

ವಿಧೇಯಕಕ್ಕೆ ಅನುಮೋದನೆ: ಕರ್ನಾಟಕಕ್ಕೆ ಸಂದ ಜಯ

Published:
Updated:

ಚಿಂಚೋಳಿ: ಅಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಪ್ರತಿಯೊಬ್ಬರು ಕರೆ ಮಾಡಿ ಅಭಿನಂದನೆ ಸಲ್ಲಿಸುವುದು ಒಂದೆಡೆಯಾದರೆ, ಬೆಂಬಲಿಗರು ಸಾಲು ಸಾಲಾಗಿ ಬಂದು    ಹೂಮಾಲೆ ಹಾಕಿ ಸಿಹಿ ತಿನ್ನಿಸಿ ಹೋರಾಟದ ಹರಿಕಾರನಿಗೆ ಅಭಿನಂದಿಸುತ್ತಿದ್ದುದು ಮಂಗಳವಾರ ಮಾಜಿ ಸಚಿವ ವೈಜನಾಥ ಪಾಟೀಲರ    ಮನೆಯಲ್ಲಿ ಕಂಡು ಬಂದಿತು.`ನಾನು ವಿಧಾನ ಸಭೆ, ವಿಧಾನ ಪರಿಷತ್   ಸದಸ್ಯನಾಗಿ, ಕ್ಯಾಬಿನೆಟ್ ಸಚಿವರಾಗಿದ್ದಕ್ಕಿಂತ  ನನ್ನ ಜೀವನದ 75 ವರ್ಷಗಳಲ್ಲಿಯೇ                       ಅತ್ಯಂತ ಸಂತಸದ ದಿನ.  ಇನ್ನು ಮುಂದೆ ನಾನು ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವುದಿಲ್ಲ ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಸಚಿವ ವೈಜನಾಥ ಪಾಟೀಲ    ತಿಳಿಸಿದರು.ಮಂಗಳವಾರ ಲೋಕಸಭೆಯಲ್ಲಿ ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 ಕಲಂ ತಿದ್ದುಪಡಿ ವಿಧೇಯಕ ಅವಿರೋಧವಾಗಿ ಲೋಕಸಭೆಯಲ್ಲಿ ಅನುಮೋದನೆ ಗೊಂಡಿದ್ದಕ್ಕೆ ಪ್ರಜಾವಾಣಿ ಜತೆ ಮಾತನಾಡಿದ ಹೋರಾಟದ ರೂವಾರಿ ಮೇಲಿನಂತೆ ಪ್ರತಿಕ್ರಿಯಿಸಿದರು.ಸೊನಿಯಾ ಗಾಂಧಿ ಒಲವು, ಪ್ರಧಾನಿಯ ಸಹಕಾರ ಹಾಗೂ ವಿಶೇಷ ಆಸಕ್ತಿವಹಿಸಿ ಕಲಂ ತ್ದ್ದಿದುಪಡಿಗೆ ಶ್ರಮಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಹಾಗೂ ನಿಯೋಗ ಕೊಂಡೊಯ್ದು ಹೈಕದ ಜನತೆಯ ಬೇಡಿಕೆಯ ಪರವಾಗಿ ನಿಂತ ಮಾಜಿ ಸಿ.ಎಂ. ಎಸ್.ಎಂ ಕೃಷ್ಣ, ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ ಮತ್ತು ಸದಾನಂದಗೌಡ, ಜಗದೀಶ ಶೆಟ್ಟರ್ ಅವರನ್ನು ಅಭಿನಂದಿಸಿದರು.371 ತಿದ್ದುಪಡಿಗೆ ಲೋಕಸಭೆ ಒಪ್ಪಿಗೆ ಸೂಚಿಸಿದ್ದು ಸಮಗ್ರ ಕರ್ನಾಟಕಕ್ಕೆ ಸಂದ ಜಯ. ಕರ್ನಾಟಕ ರಾಜ್ಯಕ್ಕಾಗಿ ಲೋಕಸಭೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿಯಾದ ಮೊದಲ ವಿಧೇಯಕ ಎಂಬ ಹೆಗ್ಗಳಿಕೆ ಇದು ಹೊಂದಿದೆ ಎಂದರು.ನಮ್ಮ ಹೋರಾಟದ ಪರವಾಗಿ ನಿಂತಿರುವ ರಾಜ್ಯದ ಸಮಸ್ತ ಸಂಘಟನೆಗಳಿಗೆ, ಸಂಸದರಿಗೆ, ಶಾಸಕರಿಗೆ ಮತ್ತು ಹೋರಾಟ ಬೆಂಬಲಿಸಿದ ಜನತೆಗೆ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು. 1996ರಿಂದ ತಾವು 371 ಕಲಂ ಸೌಲಭ್ಯಕ್ಕಾಗಿ ಧ್ವನಿ ಎತ್ತಿದ್ದೇನೆ. ಸುಧೀರ್ಘ ಒಂದುವರೆ ದಶಕದ ನಂತರ ಅದು ಜಾರಿಯಾಗುತ್ತಿರುವುದು ಅತೀವ ಸಂತಸ ತಂದಿದೆ ಎಂದು ತಿಳಿಸಿದ ಅವರು, 1998ರ ಮಾರ್ಚ್ 20ರಂದು ರಾಜ್ಯ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ(ರೆಜುಲುಷನ್)ದ ಪ್ರಸ್ತಾಪದ ದಾಖಲೆ ತೋರಿಸಿದರು.ಲೋಹಿಯಾ ಅವರ ಅನುಯಾಯಿಯಾಗಿರುವ ವೈಜನಾಥ ಪಾಟೀಲ, ಗೆದ್ದರೆ ಸದನದಲ್ಲಿ, ಸೋತರೆ ರಸ್ತೆಯಲ್ಲಿ ಹೋರಾಡಿ ಎಂಬ ಲೋಹಿಯಾ ಅವರ ಕರೆಯನ್ನು ಅವರು ಉಲ್ಲೆಕಿಸಿದರು.ವಿಧಾನ ಸಭೆಯ ಒಳಗೆ, ಹೊರಗೆ ಹಾಗೂ ದೆಹಲಿಯವರೆಗೆ ಹಂತ ಹಂತವಾಗಿ ನಡೆಸಿದ ಹೋರಾಟ ಮೆಲುಕು ಹಾಕಿದರು.

ಹಲವು ಬಾರಿ ಕೇಂದ್ರದ ಮೇಲೆ ಒತ್ತಡ ಹೇರಲು ನಿಯೋಗ ತೆರಳಿದ್ದನ್ನು ಸ್ಮರಿಸಿದ  ಅವರು, ಕಳೆದ ವಾರ ತಾವು ದೆಹಲಿಗೆ ಹೋಗಿ ಗೃಹ ಸಚಿವ ಸುಶೀಲಕುಮಾರ ಸಿಂಧೆ, ವೆಂಕಯ್ಯ ನಾಯ್ಡು, ಡಿ.ಬಿ ಚಂದ್ರಗೌಡ, ಅನಂತಕುಮಾರ, ಹಾಗೂ ಸಂಸದರನ್ನು ಖುದ್ದು ಭೇಟಿಯಾಗಿದ್ದು ಫಲ ನೀಡಿತು ಎಂದರು.

          

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry