ವೃತ್ತಿಗೆ ನಿವೃತ್ತಿ; ಪ್ರವೃತ್ತಿಗೆ ಅಲ್ಲ: ನ್ಯಾ. ಪಾಟೀಲ

7
`ನನ್ನ ನಿಲುವು' ವಚನ ಸಂಕಲನ ಲೋಕಾರ್ಪಣೆ

ವೃತ್ತಿಗೆ ನಿವೃತ್ತಿ; ಪ್ರವೃತ್ತಿಗೆ ಅಲ್ಲ: ನ್ಯಾ. ಪಾಟೀಲ

Published:
Updated:

 


ಗುಲ್ಬರ್ಗ: ಆದರ್ಶ ಶಿಕ್ಷಕರಾಗಿ, ಸಮಾಜ ಸೇವಕರಾಗಿ ಸಾರ್ಥಕ ಬದುಕು ನಡೆಸಿದ ಬಸವರಾಜಪ್ಪ ಕಾಮರೆಡ್ಡಿ, ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿದ್ದಾರೆ ಎನ್ನವುದಕ್ಕೆ ಅವರು ಈ ಇಳಿ ವಯಸ್ಸಿನಲ್ಲಿ ರಚಿಸಿದ ಕೃತಿ ಸಾಕ್ಷಿ . ವೃತ್ತಿಗೆ ನಿವೃತ್ತಿ ಹೊರತು ಪ್ರವೃತ್ತಿಗೆ ಅಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ತಿಳಿಸಿದರು.ನಗರದ ಎಸ್.ಎಂ. ಪಂಡಿತ ರಂಗ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಬಸವರಾಜ ಗೌರಮ್ಮ ದಂಪತಿ ಜನ್ಮದಿನ ಸಮಾರಂಭ ಹಾಗೂ `ನನ್ನ ನಿಲುವು' ವಚನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಮಕ್ಕಳಿಗೆ ಆಸ್ತಿ ಮಾಡಿಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ ಕಾಮರೆಡ್ಡಿ, ಸಮಾಜಕ್ಕೆ ಉತ್ತಮ ಮಕ್ಕಳನ್ನು ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ನಾಲವಾರ ಕೋರಿಸಿದ್ಧೇಶ್ವರ ಸಂಸ್ಥಾನ ಮಠದ ತೋಟೇಂದ್ರ ಸ್ವಾಮೀಜಿ ಮಾತನಾಡಿ, `ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎನ್ನುವಂತೆ ಬಸವರಾಜಪ್ಪ ಅವರು 85ನೇ ಹುಟ್ಟು ಹಬ್ಬ, ಅವರ ಪತ್ನಿ ಗೌರಮ್ಮ ಅವರು 66ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದು ತುಂಬಾ ಸಂಭ್ರಮದ ಸಂಗತಿ ಎಂದು ಹೇಳಿದರು.ಶಾಸಕ ಅಲ್ಲಮಪ್ರಭು ಪಾಟೀಲ ಅತಿಥಿಯಾಗಿದ್ದರು. ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾಮರೆಡ್ಡಿ ಕುಟುಂಬ ಸದಸ್ಯರು ಹಾಗೂ ಅವರ ಅಭಿಮಾನಿ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry