ಉರ್ದುಕವಿ ಸುಲೇಮಾನ್ ಖತೀಬ್ ಸ್ಮರಣೆ ನಾಳೆ

7

ಉರ್ದುಕವಿ ಸುಲೇಮಾನ್ ಖತೀಬ್ ಸ್ಮರಣೆ ನಾಳೆ

Published:
Updated:

 


ಗುಲ್ಬರ್ಗ: ನಗರದ `ಸುಲೇಮಾನ್ ಖತೀಬ್ ಸಾಂಸ್ಕೃತಿಕ, ಶೈಕ್ಷಣಿಕ ಸ್ಮಾರಕ ಹಾಗೂ ಚಾರಿಟೆಬಲ್ ಟ್ರಸ್ಟ್' ಇದೇ 22ರಂದು ಶನಿವಾರ ಖ್ಯಾತ ಉರ್ದು ಕವಿ ಸುಲೇಮಾನ್ ಖತೀಬ್ ಸವಿ ನೆನಪಿಗಾಗಿ ಪ್ರತಿಭಾ ಪುರಸ್ಕಾರ, ಸನ್ಮಾನ, ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿದೆ.

ಸಮಾರಂಭವು ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ. ಶಮೀಮ್ ಸುರಯ್ಯಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಸುಲೇಮಾನ್ ಖತೀಬ್ ರಚಿಸಿದ `ಕೇವಡೆ ಕಾ ಬನ್' ಕವನ ಸಂಕಲನದ ಕನ್ನಡ ಅನುವಾದ `ಕೇದಗೆಯ ಬನ' ಕೃತಿ ಹಾಗೂ ಉರ್ದು ಕವಿತೆಗಳ ಆಡಿಯೋ ಸಿಡಿಯನ್ನು ಲೋಕಾರ್ಪಣೆ ಮಾಡಲಾಗುವುದು. ಹಿರಿಯ ಸಾಹಿತಿ ರೇವಣಸಿದ್ದಯ್ಯ ರುದ್ರಸ್ವಾಮಿಮಠ ಹಾಗೂ ಹೈದರಾಬಾದ್ ಉರ್ದು ಕವಿ ಮೊಹ್ಮದ್ ಹಿಮಾಯತ್ ಉಲ್ಲಾ ಅವರನ್ನು ಸನ್ಮಾನಿಸಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಅತಿಹೆಚ್ಚು ಅಂಕ ಪಡೆದ ಉರ್ದು ಮಾಧ್ಯಮದ ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.ಅಲ್ಲದೆ ಕ್ರಮವಾಗಿ ರೂ. 5 ಸಾವಿರ, ರೂ. 3 ಸಾವಿರ ಹಾಗೂ ರೂ. 2 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. ಉರ್ದು ಮುಷಾಯಿರಾ ಏರ್ಪಡಿಸಿದ್ದು, ಅಮೆರಿಕದ ಕವಿಗಳಾದ ಮ್ಯಾಕ್ಸ್ ಬ್ರೂಸ್, ಫರಾಕ್ ಶೆಹಜಾದ್ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಸಮಾರಂಭ ಉದ್ಘಾಟಿಸುವರು. ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಶರೀಫ್, ಉರ್ದು ಆಕಾಡೆಮಿ ಅಧ್ಯಕ್ಷ ಹಾಫೀಜ್ ಅಹ್ಮದ್ ಹುಸೇನ್, ಶಾಸಕ ಖಮರುಲ್ ಇಸ್ಲಾಂ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್. ಧರ್ಮಸಿಂಗ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ, ಮತೀನ್ ಖತೀಬ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry