ಅಂಜುಮ್‌ಗೆ 4 ಚಿನ್ನ: ಸಾಹೇಬ್ ದಾಖಲೆ `ಸಮ'

7
ಗುಲ್ಬರ್ಗ ವಿಶ್ವ ವಿದ್ಯಾಲಯ 32ನೇ ಕ್ರೀಡಾಕೂಟ 2ನೇ ದಿನ

ಅಂಜುಮ್‌ಗೆ 4 ಚಿನ್ನ: ಸಾಹೇಬ್ ದಾಖಲೆ `ಸಮ'

Published:
Updated:

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ `ವೇಗದ ಓಟಗಾರ' ದಾಖಲೆಯನ್ನು ಆಳಂದ ಮಾದನಹಿಪ್ಪರಗಾ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಾಂದಿಬಾಷಾ ಸಾಹೇಬ್ ಸರಿಸಮ ಮಾಡಿದರು. ಹೊಸಪೇಟೆ ವಿ.ಎನ್. ಕಾಲೇಜು ಶ್ರೀನಿವಾಸ (1992) ಮತ್ತು ಗುಲ್ಬರ್ಗ ಎಂ.ಎಸ್.ಐ ಕಾಲೇಜಿನ ದೇವರಾಜ್ (1998) ಹೆಸರಿನಲ್ಲಿದ್ದ 100 ಮೀಟರ್ ಓಟದ 11.3 ಸೆಕಂಡ್‌ನ ದಾಖಲೆ ಪಟ್ಟಿಗೆ ಸಾಹೇಬ್ ಶುಕ್ರವಾರ ಹೆಜ್ಜೆಯಿಟ್ಟರು. ಆ ಮೂಲಕ ಗುಲ್ಬರ್ಗ ವಿಶ್ವವಿದ್ಯಾಲಯದ 32ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟದ ಎರಡನೇ ದಾಖಲೆ ಬರೆದರು. ರಾಯಚೂರಿನ ಶ್ರೀಧರ್ ಸಾಗರ್ ಗುಂಡೆಸತದಲ್ಲಿ ಗುರುವಾರ ತಮ್ಮದೇ ದಾಖಲೆಯನ್ನು (13.15 ಮೀ.) ಮುರಿದಿದ್ದರು.ಕೂಟದ ವೇಗದ ಓಟಗಾರ್ತಿಯಾಗಿ ಮೂಡಿಬಂದ ಗುಲ್ಬರ್ಗ ವಿಶ್ವವಿದ್ಯಾಲಯದ ಅಂಜುಮ್ ಎಸ್.ಪಟೇಲ್ ಎರಡು ವೈಯಕ್ತಿಕ (100 ಮೀ ಮತ್ತು 400 ಮೀ) ಹಾಗೂ ಎರಡು ತಂಡ ಪ್ರಶಸ್ತಿಯ (100, 400 ರಿಲೇ) ಮೂಲಕ ಒಂದೇ ದಿನ ನಾಲ್ಕು ಚಿನ್ನವನ್ನು ಮಡಿಗೇರಿಸಿಕೊಂಡರು. ಗುಲ್ಬರ್ಗ ವಿವಿ ಕ್ರೀಡಾಂಗಣದಲ್ಲಿ ಕೂಟದ ಎರಡನೇ ದಿನ ನಡೆದ ವಿವಿಧ ಸ್ಪರ್ಧೆಗಳ ವಿವರ ಇಂತಿವೆ.ಮಹಿಳಾ ವಿಭಾಗ: 100 ಮೀ ಓಟ: ಅಂಜುಮ್ ಎಸ್. ಪಟೇಲ್, ಗುಲ್ಬರ್ಗ ವಿ.ವಿ. (ಪ್ರ), ತ್ರಿವೇಣಿ ಜಿ. ಜಾಧವ್, ಔರಾದ್ ಅಮರೇಶ್ವರ ಕಾಲೇಜು (ದ್ವಿ), ನೀತಾಶ್ರೀ ಜಿ. ಗುಲ್ಬರ್ಗ ವಿವಿ (ತೃ)400 ಮೀ ಓಟ: ಅಂಜುಮ್ ಎಸ್. ಪಟೇಲ್, ಗುಲ್ಬರ್ಗ ವಿವಿ (ಪ್ರ), ಸಂಧ್ಯಾರಾಣಿ, ಗುಲ್ಬರ್ಗ ಬಿ.ಎಸ್.ಎಂ. ಬಿಪಿಇಡಿ ಕಾಲೇಜು(ದ್ವಿ), ಶ್ವೇತಾ ಬೀದರ್ ಕರ್ನಾಟಕ ಕಾಲೇಜು(ತೃ)ಎತ್ತರ ಜಿಗಿತ: ಜ್ಯೋತಿ, ಗುಲ್ಬರ್ಗ ಬಿಎಸ್‌ಎಂ ಬಿಪಿಇಡಿ ಕಾಲೇಜು (ಪ್ರ), ಶ್ರೀದೇವಿ ಎಚ್., ಗುಲ್ಬರ್ಗ ವಿವಿ(ದ್ವಿ), ಸುಜಾತ, ಫರಹತಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ತೃ)ಗುಂಡೆಸೆತ: ತ್ರಿವೇಣಿ, ಔರಾದ ಅಮರೇಶ್ವರ ಕಾಲೇಜು (ಪ್ರ), ಸವಿತಾ, ಗುಲ್ಬರ್ಗ ವಿವಿ (ದ್ವಿ), ಮಹೇಶ್ವರಿ, ಗುಲ್ಬರ್ಗ ಸರ್ಕಾರಿ ಕಾಲೇಜು (ತೃ)ಜಾವೆಲಿನ್ ಎಸೆತ: ಪುಷ್ಪಾವತಿ, ರಾಯಚೂರು ಪ್ರಥಮ ದರ್ಜೆ ಕಾಲೇಜು(ಪ್ರ), ರೂಪಾದೇವಿ, ಗುಲ್ಬರ್ಗ ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು (ದ್ವಿ), ಉಮಾಮಹೇಶ್ವರಿ, ಗುಲ್ಬರ್ಗ ವಿವಿ (ತೃ)4್ಡ100 ಮೀ ರಿಲೇ: ಗುಲ್ಬರ್ಗ ವಿಶ್ವವಿದ್ಯಾಲಯ (ಪ್ರ), ಗುಲ್ಬರ್ಗ ಬಿ.ಎಸ್.ಎಂ.ಬಿಪಿಇಡಿ ಕಾಲೇಜು (ದ್ವಿ), ಗುಲ್ಬರ್ಗ ಡಾ.ಅಂಬೇಡ್ಕರ್ ಕಾಲೇಜು (ತೃ)4್ಡ400 ರಿಲೇ: ಗುಲ್ಬರ್ಗ ವಿವಿ (ಪ್ರ), ಗುಲ್ಬರ್ಗ ಬಿಎಸ್‌ಎಂ ಬಿಪಿಇಡಿ ಕಾಲೇಜು (ದ್ವಿ), ಗುಲ್ಬರ್ಗ ಡಾ. ಅಂಬೇಡ್ಕರ್ ಕಾಲೇಜು (ತೃ)ಪುರುಷರ ವಿಭಾಗ: 100 ಮೀ. ಓಟ: ಚಾಂದಿಬಾಷಾ ಸಾಹೇಬ, ಮಾದನಹಿಪ್ಪರಗಾ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಪ್ರ), ಶಿವರಾಜ್, ಹುಮಾನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿ), ರಾಜು, ಎಲ್.ವಿ.ಡಿ. ಕಾಲೇಜು ರಾಯಚೂರು (ತೃ)5000ಮೀ. ಓಟ: ಬಸವರಾಜ, ಲಿಂಗಸಗೂರ ವಿ.ಸಿ.ಬಿ. ಕಾಲೇಜು (ಪ್ರ), ಬಸವರಾಜ ಎನ್. ಗುಲ್ಬರ್ಗ ವಿವಿ (ದ್ವಿ), ಸಿದ್ದಪ್ಪ ತಾಯಪ್ಪ, ಲಿಂಗಸಗೂರ ಎಸ್.ಎಲ್.ಎಂ.ಬಿ. ಕಾಲೇಜು(ತೃ)400ಮೀ. ಓಟ: ಧನಂಜಯ, ಗುಲ್ಬರ್ಗ ವಿ.ವಿ. (ಪ್ರ), ಕೊರವಯ್ಯ, ಮಾನ್ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿ), ವಹೀದ್ ಪಾಶಾ, ಮಾದನಹಿಪ್ಪರಗಾ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ತೃ)ಡಿಸ್ಕಸ್ ಎಸೆತ: ಶ್ರೀಧರ್ ಸಾಗರ್, ರಾಯಚೂರು ಸಿನರ್ಜಿ ಕಾಲೇಜು (ಪ್ರ), ಅಶೋಕ್ ಕುಮಾರ್, ಗುಲ್ಬರ್ಗ ಎನ್.ವಿ. ಪದವಿ ಕಾಲೇಜು (ದ್ವಿ), ಅಮೀರ್‌ಬಹದ್ದೂರ್, ರಾಯಚೂರು ಕಾನಿಷ್ಕ  ಬಿಪಿಎಡ್ ಕಾಲೇಜು(ತೃ)ಉದ್ದ ಜಿಗಿತ: ಹನುಮಂತ, ಗುಲ್ಬರ್ಗ ವಿವಿ (ಪ್ರ), ಗುಲ್ಬರ್ಗ ವಿವಿ ಬಸವಂತರಾಯ (ದ್ವಿ), ರಮೇಶ್, ರಾಯಚೂರು ಡಾ.ಎಂ.ಎಸ್.ಎಂ.ಎನ್. ಕಾಲೇಜು  (ತೃ)ಎತ್ತರ ಜಿಗಿತ: ರಮೇಶ್, ರಾಯಚೂರು ಡಾ.ಎಂ.ಎಸ್.ಎಂ.ಎನ್. ಕಾಲೇಜು (ಪ್ರ), ಅಬ್ದುಲ್ ಅಜೀಂ, ಸೇಡಂ ನೃಪತುಂಗ ಕಾಲೇಜು (ದ್ವಿ), ರಾಮ್‌ಸಿಂಗ್ ಮಾರುತಿ, ಔರಾದ ಅಮರೇಶ್ವರ ಕಾಲೇಜು (ತೃ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry