`ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ'

7

`ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ'

Published:
Updated:

ಗುಲ್ಬರ್ಗ: ರೈತರು ಕಡಿಮೆ ಪ್ರದೇಶ, ಕಡಿಮೆ ನೀರು, ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬೇಕಾದರೆ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಅರುಣಾ ಸಿ. ಪಾಟೀಲ ತಿಳಿಸಿದರು.ತಾಲ್ಲೂಕು ಕೃಷಿ ಸಮಾಜ ಹಾಗೂ ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿ ರೈತ ದಿನಾಚರಣೆ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಬೆನ್ನೆಲುಬಾದ ರೈತ ಸಂತೋಷದಿಂದ ಇದ್ದರೆ ಸಮಾಜ ಸಂತೋಷದಿಂದಿರಲು ಸಾಧ್ಯ. ಸರ್ಕಾರದ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ಕೃಷಿಯನ್ನು ಲಾಭದಾಯಕವಾಗಿಸಿ ಜೀವನ ಸುಧಾರಿಸಿಕೊಳ್ಳ ಬೇಕು ಎಂದರು.ರಾಜ್ಯ ಕೃಷಿ ಜಂಟಿ ನಿರ್ದೇಶಕ ಡಾ. ಸಿದ್ದರಾಜ ಮಾತನಾಡಿ, ರಾಜಸ್ಥಾನ ಹೊರತು ಪಡಿಸಿದರೆ ಹೆಚ್ಚು ಮಳೆ ಅವಲಂಬಿತ ಖುಷ್ಕಿ ಪ್ರದೇಶ ಹೊಂದಿರುವ ರಾಜ್ಯ ಕರ್ನಾಟಕ. ಮಳೆ ಏರುಪೇರಿನಿಂದ ನಿರೀಕ್ಷಿತ ಬೆಳೆ ಬೇಳೆಯಲು ಸಾಧ್ಯವಾಗುತ್ತಿಲ್ಲ. ಸಕಾಲದಲ್ಲಿ ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಸಿಕೊಂಡರೆ ಈ ಸಮಸ್ಯೆ ಎದುರಾಗುವುದಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಪೂರಕವಾದ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ರೈತರು ಅವುಗಳ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮಾಲಿ ಪಾಟೀಲ ಮಾತನಾಡಿ, ಈ ಕಾರ್ಯಕ್ರಮದಲ್ಲಿ ರೈತರಿಗೆ ಗುರುತಿಸಿ ಸನ್ಮಾನಮಾಡಿರುವುದು ಸಂತೋಷದ ಸಂಗತಿ ಎಂದರು. ಸರ್ಕಾರದ ಸವಲತ್ತುಗಳನ್ನು ಕೆಲವರು ಮಾತ್ರ ಪಡೆಯುತ್ತಿದ್ದಾರೆ. ಎಲ್ಲ ರೈತರಿಗೂ ಸವಲತ್ತುಗಳು ಮುಟ್ಟಬೇಕಾದರೆ ಕೃಷಿ ಇಲಾಖೆ ಶ್ರಮಿಸಬೇಕು. ಈಗಾಗಲೆ ಪ್ರತಿಯೊಂದು ಹಳಿಗಳಲ್ಲಿ ಅನುಗಾರರು ಒಳ್ಳೆ ಕೆಲಸಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಿಲ್ಲಾಮಟ್ಟದ ತೊಗರಿ ಬೆಳೆ ಸ್ಪರ್ಧೆಯಲ್ಲಿ ವಿಜೇತ ತಾಲ್ಲೂಕಿನ ಜೀವಣಗಿ ಗ್ರಾಮದ ಶಿವಕುಮಾರ ಕುಪೇಂದ್ರಯ್ಯ, ನಂದೂರ (ಬಿ) ಗ್ರಾಮದ ಮಲ್ಲಿಕಾಜಪ್ಪ ಸಿದ್ದಪ್ಪ, ಸೇಡಂ ತಾಲ್ಲೂಕಿನ ಆನಂದ ಗುಂಡೇರಾವ, ತಾಲ್ಲೂಕು ಮಟ್ಟದ ಹಿಂಗಾರು ಜೋಳದ ಬೆಳೆ ಸ್ಪರ್ಧೆಯಲ್ಲಿ ವಿಜೇತ ಯಲ್ಲಪ್ಪ ಬಾಬು, ಶಿವಲಿಂಗಪ್ಪ ಬಸವಂತರಾಯ, ಮಲ್ಲಿಕಾರ್ಜುನ ಸುಭಾಶ್ಚಂದ್ರ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಲ್ಲಿನಾಥ ಶರಣಪ್ಪ ಕೊಳ್ಳೂರ ಅವರನ್ನು ಸನ್ಮಾನಿಸಲಾಯಿತು.  ಶಂಕರಯ್ಯ ಶಾಂತಯ್ಯ ಹಿರೇಮಠ, ಭಾರತಭೂಷಣ ಗುರುಶಾಂತಪ್ಪ, ಅಪ್ಪಾರಾವ ಶರಣಪ್ಪ, ಗುಂಡಮ್ಮ ಅರ್ಜುನ ಬೆಳಕೋಟಾ ಸೇರಿದಂತೆ ಹಲವರಿಗೆ  ಪ್ರಗತಿಪರ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚೆನ್ನವೀರ ಸಲಗರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ  ಸಮದ್ ಪಟೇಲ, ಪಿಎಲ್‌ಡಿ ಬಾಂಕ್ ಅಧ್ಯಕ್ಷ ಶಾಂತವೀರ ಪಾಟೀಲ, ಉತ್ತಮ ಪಾಟೀಲ ಬೆಳಕೋಟಾ, ಪಿ.ಎಸ್. ಚಿತ್ರಶೇಖರ, ಚಂದ್ರಕಾಂತ ಜೀವಣಗಿ, ಬಸವರಾಜ ಪಾಟೀಲ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry