29ಕ್ಕೆ ಅಶ್ವಿನಿ ವೈದ್ಯಕೀಯ ಕಾಲೇಜು ಉದ್ಘಾಟನೆ

7

29ಕ್ಕೆ ಅಶ್ವಿನಿ ವೈದ್ಯಕೀಯ ಕಾಲೇಜು ಉದ್ಘಾಟನೆ

Published:
Updated:

ಸೊಲ್ಲಾಪುರ: ಸಮೀಪದ ಕುಂಬಾರಿ ಗ್ರಾಮದಲ್ಲಿ ನಿರ್ಮಿಸಿರುವ `ಅಶ್ವಿನಿ ಗ್ರಾಮೀಣ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ'ವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ 29ರಂದು ಮಧ್ಯಾಹ್ನ 12ಕ್ಕೆ             ಉದ್ಘಾಟಿಸಲಿದ್ದಾರೆ.ರಾಜ್ಯಪಾಲ ಕೆ. ಶಂಕರನಾರಾಯಣನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ, ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂಧೆ, ಕೇಂದ್ರ ಆರೋಗ್ಯ ಸಚಿವ ಗುಲಾಬ್ ನಬಿ ಆಜಾದ್ ಮತ್ತಿತರ ಮಹೋದಯರು ಆಗಮಿಸಲಿದ್ದಾರೆ ಎಂದು ಎಂ.ಎಂ. ಪಟೇಲ್ ಟ್ರಸ್ಟ್ ಅಧ್ಯಕ್ಷ ಬಿಪಿನ ಭಾಯಿ ಪಟೇಲ್ ಸುದ್ದಿಗೋಷ್ಠಿಯಲ್ಲಿ           ವಿವರಿಸಿದರು.ಒಟ್ಟು ರೂ. 212 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆಸ್ಪತ್ರೆಯು ಒಟ್ಟು 300 ಎಕರೆ ಜಾಗದಲ್ಲಿ ವಿಸ್ತರಿಸಿಕೊಂಡಿದ್ದು, 325 ಹಾಸಿಗೆ ಸೌಲಭ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಎಲ್ಲ ಮೂಲ ಸೌಕರ್ಯಗಳಿದ್ದು, ಸಿಬ್ಬಂದಿಗೆ ಅಗತ್ಯ ಸೌಲಭ್ಯವನ್ನು ಕ್ಯಾಂಪಸ್‌ನಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.ವೈದ್ಯಕೀಯ ಮಂಡಳಿ (ಮೆಡಿಕಲ್ ಕೌನ್ಸಿಲ್) ರೂಪಿಸಿದ ಎಲ್ಲ ನಿಯಮ ಅನುಸರಿಸಿ ಅನುಷ್ಠಾನಗೊಳಿಸಲಾಗಿದೆ. ಜುಲೈನಿಂದ ಒಟ್ಟು 100 ವಿದ್ಯಾರ್ಥಿಗಳ ಮೊದಲ ತಂಡ ಅಧ್ಯಯನ ಆರಂಭಿಸಲಿದೆ. ವೈದ್ಯಕೀಯ ಸೇವೆಗಾಗಿ ನೆರೆಹೊರೆಯ ರಾಜ್ಯಗಳಿಂದಲೂ ಸೊಲ್ಲಾಪುರಕ್ಕೆ ಧಾವಿಸುತ್ತಾರೆ. ಆದರೆ ಇಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಬಹಳಷ್ಟಿದೆ. ಈ ಕೊರತೆಯನ್ನು ಮನಗಂಡು ನೂತನ ಆಸ್ಪತ್ರೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.ಲಷ್ಕರ್ ಭಾಗದಲ್ಲಿರುವ ಆಶ್ವಿನಿ ಆಸ್ಪತ್ರೆ ಹಾಗೂ ನೂತನವಾಗಿ ನಿರ್ಮಾಣವಾದ ಆಶ್ವಿನಿ ವೈದ್ಯಕೀಯ ಕಾಲೇಜಿಗೆ ಸ್ವತಂತ್ರವಾದ ಆಡಳಿತ ಮಂಡಳಿ ಇದೆ.ಮುಂದಿನ ದಿನಗಳಲ್ಲಿ ಆಶ್ವಿನಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರವು ಒಟ್ಟು 800 ಹಾಸಿಗೆ ಸವಲತ್ತು ಹೊಂದಲಿದೆ. ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನೊಂದಿಗೆ ನರ್ಸಿಂಗ್ ಕಾಲೇಜು, ಫಿಜಿಯೋಥೆರಫಿ, ಯೋಗ ಆ್ಯಂಡ ನ್ಯಾಚುರೋಪಥಿ ಮತ್ತಿತರರ ವಿಭಾಗಗಳನ್ನು ಆರಂಭಿಸಲಾಗುವುದು. ಸೊಲ್ಲಾಪುರದಲ್ಲಿ 50 ವರ್ಷಗಳ ನಂತರ ಎರಡನೇ ವೈದ್ಯಕೀಯ ಕಾಲೇಜು ಆರಂಭವಾಗುತ್ತಿದ್ದು, ಮೊದಲ ಖಾಸಗಿ ಆಸ್ಪತ್ರೆ ಇದಾಗಿದೆ ಎಂದರು.ಕಿರೀಟ ಪಟೇಲ್, ಹರೇರ ಪಟೇಲ್, ಮಾಧವಿ ರಾಯತೆ, ಡಾ. ಸತ್ಯೇಶ್ವರ ಪಾಟೀಲ, ಡಾ. ರಾಜೇಂದ್ರ ಘೂಳಿ, ವಿಶ್ವನಾಥ ಮೇರಕರ್, ಸಂದೀಪ ಜವ್ಹೇರಿ, ಅಶೋಕ ಲಾಂಬಿತುರೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry