`ಸ್ಥಳೀಯ ಪ್ರವಾಸೋದ್ಯಮ ಪ್ರೋತ್ಸಾಹಿಸಿ'

7

`ಸ್ಥಳೀಯ ಪ್ರವಾಸೋದ್ಯಮ ಪ್ರೋತ್ಸಾಹಿಸಿ'

Published:
Updated:
`ಸ್ಥಳೀಯ ಪ್ರವಾಸೋದ್ಯಮ ಪ್ರೋತ್ಸಾಹಿಸಿ'

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸ್ಥಳೀಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದರು.ಭಾನುವಾರ ನಗರದ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ವಿಕಾಸ ಅಕಾಡೆಮಿ ಸಹಯೋಗದಲ್ಲಿ ನೃಪತುಂಗ ಟೂರ್ಸ್‌ ಮತ್ತು ಟ್ರಾವೆಲ್ಸ್ ಆಯೋಜಿಸಿದ `ಗುಲ್ಬರ್ಗ ನಗರ ವೈಭವ ದರ್ಶನ' ಒಂದು ದಿನದ ಪ್ರವಾಸ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಎಲ್ಲೆಲ್ಲೋ ಪ್ರವಾಸಕ್ಕಾಗಿ ಹೋಗುವ ನಮಗೆ ನಮ್ಮ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಪರಿಚಯವೇ ಇರುವುದಿಲ್ಲ. ಸಾರ್ವಜನಿಕರಿಗೆ ಇವುಗಳ ಪರಿಚಯ ಮಾಡಿಕೊಡುವ ಕೆಲಸ `ವಿಕಾಸ ಅಕಾಡೆಮಿ'ಯ ನೃಪತುಂಗ ಟೂರ್ಸ್‌ ಮತ್ತು ಟ್ರಾವೆಲ್ಸ್ ಮಾಡುತ್ತಿದೆ ಎಂದರು.ಬೀದರ್, ಬಸವಕಲ್ಯಾಣ ಅಭಿವೃದ್ಧಿ ಪಡಿಸಿರುವುದರಿಂದ ಈಗ ಅವು ಒಳ್ಳೆಯ ಪ್ರೇಕ್ಷಣೀಯ ಸ್ಥಳಗಳಾಗಿವೆ. ಗುಲ್ಬರ್ಗದಲ್ಲೂ ಶರಣಬಸವೇಶ್ವರ ದೇವಾಲಯ, ಬುದ್ಧವಿಹಾರ, ಖಾಜಾ ಬಂದಾ ನವಾಜ್ ದರ್ಗಾದಂತಹ ಸ್ಥಳಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ ಎಂದು ಹೇಳಿದರು.ವಿಕಾಸದ ಹಾದಿಯಲ್ಲಿ ಸಾವಿರ ಮುಖಗಳಿವೆ. ಈ ನಿಟ್ಟಿನಲ್ಲಿ ವಿಕಾಸ ಅಕಾಡೆಮಿ ಹಾಗೂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ವಿವಿಧ ತರಬೇತಿ, ಸಾವಯವ ಕೃಷಿ, ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ ಗೆದ್ದಿವೆ. ಇದರಲ್ಲಿ ಸೇಡಂನಲ್ಲಿ ಆಯೋಜಿಸಿದ ಜಾಗೃತಿ ಜಾತ್ರೆ ಹಾಗೂ ಗುಲ್ಬರ್ಗದ ಕಲ್ಬುರ್ಗಿ ಕಂಪು ಕಾರ್ಯಕ್ರಮಗಳು ಐತಿಹಾಸಿಕ ಕಾರ್ಯಕ್ರಮಗಳಾಗಿವೆ ಎಂದರು.ಸುಭಾಷ ಬಿರಾದಾರ, ಅಮರನಾಥ ತಡಕಲ್, ಅಶೋಕ ದೇಸಾಯಿ, ವಾಸುದೇವ ಅಗ್ನಿಹೋತ್ರಿ ಮತ್ತಿತರರು ಇದ್ದರು. ಸಂಜುಕುಮಾರ ಸಿರನೂರಕರ್ ಪ್ರಾರ್ಥಿಸಿದರು. ಮಾರ್ಥಂಡ ಶಾಸ್ತ್ರಿ ಸ್ವಾಗತಿಸಿದರು. ಉಮೇಶ ಶೆಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry