`ಗೌರವಿಸುವ ಗುಣದ ಕನ್ನಡಿಗರು'

7

`ಗೌರವಿಸುವ ಗುಣದ ಕನ್ನಡಿಗರು'

Published:
Updated:
`ಗೌರವಿಸುವ ಗುಣದ ಕನ್ನಡಿಗರು'

ಗುಲ್ಬರ್ಗ: `ಗೌರವಿಸು ಚೇತನವ, ಗೌರವಿಸು ಜೀವನವಾ' ಎನ್ನುವುದನ್ನು ಮೈಗೂಡಿಸಿಕೊಂಡಿರುವ ಕನ್ನಡಿಗರಲ್ಲಿ ಗೌರವಿಸುವ ಗುಣ ರಕ್ತಗತವಾಗಿ ಬಂದಿದೆ ಎಂದು ನಾಲವಾರ ಶ್ರೀ ಕೋರಿಸಿದ್ಧೇಶ್ವರ ಸಿದ್ಧ ಸಂಸ್ಥಾನ ಮಠದ ತೋಟೇಂದ್ರ ಶಿವಾಚಾರ್ಯರು ಹೇಳಿದರು.ಕನ್ನಡ ಸೇನೆ (ಈಶಾನ್ಯ ಕರ್ನಾಟಕ ವಲಯ) ವತಿಯಿಂದ ಕನ್ನಡ ಜಾಗೃತಿ ಸಮಾವೇಶ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ 371(ಜೆ) ತಿದ್ದುಪಡಿ ರೂವಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಆದಿಕವಿ ಪಂಪ ಆಂಧ್ರಪ್ರದೇಶಕ್ಕೆ ಹೋದಾಗ ಅವರಿಗೆ ಇಲ್ಲಿನ ಬನವಾಸಿ ನೆನಪಾಗುತ್ತದೆ. ಅಂದರೆ ಇದು ಕರ್ನಾಟಕದ ಪ್ರಾಮುಖ್ಯತೆ ಎತ್ತಿ ಹಿಡಿಯುತ್ತದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದಾಗ, ಅದೇ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯ ಆರಂಭವಾಯಿತು.

ಈ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಿಕ್ಕ ಪ್ರಾಮುಖ್ಯತೆ ಅಲ್ಲಿನ ಮಹಿಳೆಯರಿಗೆ ದೊರೆಯಲಿಲ್ಲ. ಇದು ನಮ್ಮ ನಾಡಿನಲ್ಲಿರುವ ಮಹಿಳೆಯರ ಸ್ಥಾನಮಾನದ ಬಗ್ಗೆ ಬಿಂಬಿಸುತ್ತದೆ ಎಂದರು.ಸಂವಿಧಾನದ 371(ಜೆ)ನೇ ತಿದ್ದುಪಡಿ ರೂವಾರಿಗಳಾದ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮಾಜಿ ಸಚಿವ ವೈಜನಾಥ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿ ಮಾಲೆ, ಕನ್ನಡ ಸೇನೆ ರಾಜ್ಯಾಧ್ಯಕ್ಷ ಆರ್.ಕುಮಾರ, ಹೈ.ಕ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಹೈ.ಕ ಹೋರಾಟಗಳ ಸಮನ್ವಯ ಸಮಿತಿ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರನ್ನು ಸನ್ಮಾನಿಸಲಾಯಿತು.ಡಾ.ಶರಣಬಸವಪ್ಪ ಅಪ್ಪ, ತೋಟೇಂದ್ರ ಶಿವಾಚಾರ್ಯ, ಡಾ.ಎಸ್.ಎಸ್ ಗುಬ್ಬಿ ಇವರಿಗೆ ಕರ್ನಾಟಕ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಚಂದ್ರಕಾಂತ ಹುಣಸಗಿ, ರಾಜಶ್ರೀ ದೇಶಮುಖ, ಡಾ.ಪ್ರವೀಣ ಹೊನಗುಂಟಿಕರ್ ಇವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಲಾಯಿತು.371(ಜೆ)ನೇ ಕಲಂ ತಿದ್ದುಪಡಿಗಾಗಿ ಹೋರಾಟ ಮಾಡಿದ ವಿವಿಧ ಸಂಘಟನೆಗಳ ಮುಖಂಡರಾದ ಶರಣು ಗದ್ದುಗೆ, ಅರುಣಕುಮಾರ ಪಾಟೀಲ, ವೀರಣ್ಣ ಕೊರಳ್ಳಿ, ಕಲ್ಯಾಣರಾವ ಪಾಟೀಲ, ಹಣಮಂತ ಯಳಸಂಗಿ, ಸುರೇಶ ಬಡಿಗೇರ, ಅಮೃತ ಪಾಟೀಲ, ಜಗನ್ನಾಥ ಸೂರ್ಯವಂಶಿ, ರಾಜೇಶ ಗುತ್ತೇದಾರ, ಲಿಂಗರಾಜ ಸಿರಗಾಪುರ, ಯಶವಂತ ಹತ್ತರಕಿ, ನಂದಕುಮಾರ ನಾಗಭುಜಂಗೆ, ಆದಿನಾಥ ಹೀರಾ, ವಿ.ಎಚ್.ವಾಲಿಕಾರ, ಮಹ್ಮದ್ ಮಿರಾಜುದ್ದೀನ್, ಎಂ.ಎಸ್.ಪಾಟೀಲ ನರಿಬೋಳ, ಹಾಜಿ ಸಾಬ ಬಾಗವಾನ, ದೇವಿಂದ್ರ ದೇಸಾಯಿ ಕಲ್ಲೂರ, ಧರ್ಮಸಿಂಗ್ ತಿವಾರಿ, ವಿಶಾಲದೇವ ಇವರುಗಳನ್ನು ಸನ್ಮಾನಿಸಲಾಯಿತು.ಶರಣಕುಮಾರ ಮೋದಿ, ಮಲ್ಲಿಕಾರ್ಜುನ ಭೂಸನೂರ, ಪ್ರಭುಲಿಂಗ ಬಾಳಿ ಇವರಿಗೂ ವಿಶೇಷ ಸನ್ಮಾನ ಮಾಡಲಾಯಿತು. ಮಾಜಿ ಸಚಿವ ಎಸ್.ಕೆ.ಕಾಂತಾ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶಶೀಲ್ ಜಿ.ನಮೋಶಿ, ಕಾಂಗ್ರೆಸ್ ಮುಖಂಡ ಎಂ.ಡಿ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕನ್ನಡ ಸೇನೆ (ಈಶಾನ್ಯ ಕರ್ನಾಟಕ ವಲಯ) ಅಧ್ಯಕ್ಷ ಶಿವಶರಣಪ್ಪ ಖಣದಾಳ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry