ಭಾರತೀಯರಿದ್ದ ಎರಡು ಹಡಗುಗಳಿಗೆ ಬೆಂಕಿ: 14 ಮಂದಿ ಸಾವು

7

ಭಾರತೀಯರಿದ್ದ ಎರಡು ಹಡಗುಗಳಿಗೆ ಬೆಂಕಿ: 14 ಮಂದಿ ಸಾವು

Published:
Updated:

ಮಾಸ್ಕೊ: ಭಾರತದ ಸಿಬ್ಬಂದಿ ಇದ್ದ ಎರಡು ಹಡಗುಗಳಿಗೆ ರಷ್ಯಾ ಕರಾವಳಿಯಲ್ಲಿ ಬೆಂಕಿ ಹತ್ತಿಕೊಂಡು ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ.

ತಾಂಜಾನಿಯಾ ಧ್ವಜ ಹೊಂದಿದ್ದ ಈ ಹಡಗುಗಳಲ್ಲಿ ಭಾರತ, ಟರ್ಕಿ ಮತ್ತು ಲಿಬಿಯಾದ ಸಿಬ್ಬಂದಿ ಇದ್ದರು. ಈ ಪೈಕಿ ಒಂದು ಹಡಗು ನೈಸಗಿರ್ಕ ಅನಿಲ ತುಂಬಿತ್ತು. ಮತ್ತೊಂದು ಟ್ಯಾಂಕರ್ ಒಳಗೊಂಡಿತ್ತು. ‌‌‌

ಒಂದು ಹಡಗಿನಿಂದ ಮತ್ತೊಂದು ಹಡಗಿಗೆ ಇಂಧನ ವರ್ಗಾಯಿಸುತ್ತಿದ್ದ ವೇಳೆ ಬೆಂಕಿ ತಗುಲಿತ್ತು. ರಷ್ಯಾ ಮತ್ತು ಕ್ರಿಮಿಯಾ ಗಡಿ ಪ್ರದೇಶವಾದ ಕೆರ್ಚ್‌ ಜಲಸಂಧಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.

ಕ್ಯಾಂಡಿ ಹೆಸರಿನ ಹಡಗಿನಲ್ಲಿ 17 ಸಿಬ್ಬಂದಿ ಇದ್ದು, ಈ ಪೈಕಿ 8 ಮಂದಿ ಭಾರತೀಯರು ಮತ್ತು 9 ಟರ್ಕಿ ಪ್ರಜೆಗಳಾಗಿದ್ದಾರೆ.

ಮೆಸ್ಟ್ರೊ ಹೆಸರಿನ ಮತ್ತೊಂದು ಹಡಗಿನಲ್ಲಿದ್ದ ಭಾರತ ಮತ್ತು ಟರ್ಕಿಯ ತಲಾ 7 ಹಾಗೂ ಲಿಬಿಯಾದ ಒಬ್ಬ ಸಿಬ್ಬಂದಿ ಸೇರಿ 15 ಸಿಬ್ಬಂದಿ ಇದ್ದರು.

‘ಹೊತ್ತಿ ಉರಿಯುತ್ತಿರುವ ಹಡಗಿನಿಂದ ಕೆಲವು ಸಿಬ್ಬಂದಿ ಸಮುದ್ರಕ್ಕೆ ಜಿಗಿದು ಪಾರಾಗಿದ್ದಾರೆ. 12 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ರಷ್ಯಾದ ಸಾಗರ ವ್ಯವಹಾರಗಳ ವಕ್ತಾರರು ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !