ಗಮನ ಸೆಳೆದ ನೃತ್ಯ ಪ್ರದರ್ಶನ

7

ಗಮನ ಸೆಳೆದ ನೃತ್ಯ ಪ್ರದರ್ಶನ

Published:
Updated:
ಗಮನ ಸೆಳೆದ ನೃತ್ಯ ಪ್ರದರ್ಶನ

ಗುಲ್ಬರ್ಗ: ನಗರದ ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ 2012-13ರ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಜರುಗಿತು.ಜಯಂತ ಕಾಯ್ಕಿಣಿ ದಂಪತಿ ಹಾಗೂ ಪವನಕುಮಾರ ಮಾನ್ವಿ ದಂಪತಿಯನ್ನು ಸನ್ಮಾನಿಸಲಾಯಿತು. ಈ ವರ್ಷದಲ್ಲಿ ರ‌್ಯಾಂಕ್ ಪಡೆದ ನೂತನ ವಿದ್ಯಾಲಯ ಸಂಸ್ಥೆ ವಿದ್ಯಾರ್ಥಿಗಳಿಗೆ ಜಯಂತ ಕಾಯ್ಕಿಣಿ ಪ್ರಶಸ್ತಿಪತ್ರ ವಿತರಿಸಿದರು.ಇಂದು ನಡೆಯುತ್ತಿರುವ ಕ್ರೌರ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ಭ್ರಷ್ಟಾಚಾರ ಮೊಟಕು ಹಾಕುವಂತಹ, ಅನೈತಿಕ ಬದುಕು ಒಂದಲ್ಲ  ಒಂದು ದಿನ ಕೊನೆಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ದ.ರಾ.ಬೇಂದ್ರೆಯವರ `ಕುರುಡು ಕಾಂಚಾಣ.. ಕುಣಿಯುತಲಿತ್ತ.. ಕಾಲಿಗೆ ಬಿದ್ದವರ  ತುಳಿಯುತಲಿತ್ತ' ಎನ್ನುವ ಹಾಡಿಗೆ ಸ್ವಪ್ನ ನಾರಾಯಣ ಸಿದ್ದಾಪುರ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.ನೂತನ ವಿದ್ಯಾಲಯದ ವಿದ್ಯಾರ್ಥಿಗಳು ಕೋಲು ಕೋಲೆನ್ನ ಕೋಲೆ..ಹಾಡಿಗೆ ನೃತ್ಯ ಮಾಡಿದರು. ಪರಶುರಾಮ, ನರಸಿಂಹ, ರಾಮಾವತಾರ, ಶ್ರೀಕೃಷ್ಣ, ಬುದ್ಧ, ವಿಷ್ಣು, ದಶಾವತಾರ ತಾಳಿದ ವೇಷ ಧರಿಸಿ ಪ್ರದರ್ಶನ ನೀಡಿದ ಪುಟ್ಟ ಮಕ್ಕಳು ಎಲ್ಲರ ಗಮನ ಸೆಳೆದರು.`ದುಡ್ಡು ಕೊಟ್ಟರೆ, ಬೇಕಾದ್ದು ಸಿಗುತೈತಿ ಈ ಜಗದಲಿ ಕಾಣೋ.. ಹಡೆದ ತಾಯಿಯನ್ನು ಕಳಕೊಂಡ ಮೇಲೆ ಮತ್ತೆ ಸಿಗುವಳೇನೋ' ಎನ್ನುವ ನೃತ್ಯದ ರೂಪಕ ಪ್ರದರ್ಶನ ಅಲ್ಲಿ ನೆರೆದಿರುವ ಜನರ ಮನ ಕಲಕುವಂತಿತ್ತು.ಸಾಂಸ್ಕೃತಿಕ ಉತ್ಸವ ನಿಮಿತ್ತ 43 ಪ್ರದರ್ಶನಗಳು ಜರುಗಿದವು. ಇದರಲ್ಲಿ 529 ವಿದ್ಯಾರ್ಥಿಗಳು ಭಾಗವಹಿಸಿದ್ದರು.  

ಜಯಂತ ಕಾಯ್ಕಿಣಿ ರಚಿಸಿರುವ ಕೆಲವು ಹಾಡುಗಳನ್ನು ವಿದ್ಯಾರ್ಥಿನಿ ಶ್ರೀನಿಧಿ ಹಾಡಿ ಗಮನ ಸೆಳೆದಳು. ನೂತನ ವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಜ್ವಲಾ ಸಿದ್ದಾಪುರಕರ್ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry