ರಾಜಕಾರಣಿಗಳ ಮೇಲ್ಪಂಕ್ತಿಯಲ್ಲಿ ವಲ್ಯ್‌ಪುರ

7
ಸಾಮೂಹಿಕ ವಿವಾಹ ಬಿಎಸ್‌ವೈ ಶ್ಲಾಘನೆ

ರಾಜಕಾರಣಿಗಳ ಮೇಲ್ಪಂಕ್ತಿಯಲ್ಲಿ ವಲ್ಯ್‌ಪುರ

Published:
Updated:
ರಾಜಕಾರಣಿಗಳ ಮೇಲ್ಪಂಕ್ತಿಯಲ್ಲಿ ವಲ್ಯ್‌ಪುರ

ಚಿಂಚೋಳಿ: `ಬಡವರಿಗೆ ಮದುವೆ ಒಂದು ಕಠಿಣ ಸವಾಲು. ಮದುವೆ ಮಾಡಿ ಅನೇಕ ಕುಟುಂಬಗಳು ಬೀದಿಗೆ ಬಿದ್ದ ನಿದರ್ಶನಗಳಿವೆ. ಬಡವರಿಗೆ ನೆರವಾಗುವ ಉದ್ದೇಶದಿಂದ ಆದರ್ಶ ಸಾಮೂಹಿಕ ವಿವಾಹ ಏರ್ಪಡಿಸಿ ಮಾಜಿ ಸಚಿವ ಸುನೀಲ ವಲ್ಯ್‌ಪುರ ಇತರ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿ ಸಿದರು.ಮಂಗಳವಾರ ಚಿಂಚೋಳಿಯಲ್ಲಿ ವೀರೇಂದ್ರ ಪಾಟೀಲ ಮಂಟಪದಲ್ಲಿ ಸುನೀಲ ವಲ್ಯ್‌ಪುರ ಅಭಿಮಾನಿ ಬಳಗ ಹಮ್ಮಿಕೊಂಡ ಸುನೀಲ ವಲ್ಯ್‌ಪುರ ಅವರ 47ನೇ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ 3ನೇ ಆದರ್ಶ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೇರೆ ವಿಷಯ ಮಾತನಾಡುವುದಿಲ್ಲ' ಎಂದ ಅವರು, ಆದರ್ಶ ಸಾಮೂಹಿಕ ವಿವಾಹದ ಮೂಲಕ ನವ ಜೀವನಕ್ಕೆ ಕಾಲಿಟ್ಟ 83 ಜೋಡಿಗಳಿಗೆ  `ನಿಮ್ಮ ದಾಂಪತ್ಯ ಜೀವನವೂ ಆದರ್ಶವಾಗಲಿ' ಶುಭ ಹಾರೈಸಿದರು.`371 ಕಲಂ ತಿದ್ದುಪಡಿಗಾಗಿ ಅವಿರತ ಹೋರಾಡಿದ ಹೈಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲರನ್ನು ಬೆಂಗಳೂರಿನಲ್ಲಿ ಸನ್ಮಾನಿಸಲಾಗುವುದು' ಎಂದು ಅವರು ಹೇಳಿದರು.ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, `ಬಿಎಸ್‌ವೈ ಪರ ಗಟ್ಟಿಯಾಗಿ ನಿಂತು ಮಂತ್ರಿಗಿರಿ ತ್ಯಾಗ ಮಾಡಿದ ಸುನೀಲ ವಲ್ಯ್‌ಪುರ ಅವರನ್ನು ಮತ್ತೆ ಮಂತ್ರಿ ಮಾಡಬೇಕು. ವಧು ವರರನ್ನು ಹರಸಿದಂತೆ ಸುನೀಲ ವಲ್ಯ್‌ಪುರ ಅವರಿಗೆ ಆಶೀರ್ವದಿಸಿ ಉನ್ನತ ಸ್ಥಾನ ದೊರೆಯುವಂತೆ ಮಾಡಬೇಕು' ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವೈಜನಾಥ ಪಾಟೀಲ ಮಾತನಾಡಿ, `371ಕಲಂ ತಿದ್ದುಪಡಿಗಾಗಿ ಬಿಎಸ್‌ವೈ ಅವರು ಕೇಂದ್ರಕ್ಕೆ 2ನೇ ಬಾರಿ ನಿಯೋಗ ಕರೆದೊಯ್ದಿದ್ದರು. ವಿಧಾನ ಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಅಂಗಿಕರಿಸಿದ್ದರು' ಎಂದು ನೆನಪಿಸಿದರು.

 ಡಾ. ವಿಜಯಲಕ್ಷ್ಮೀ ವಲ್ಯ್‌ಪುರ ಸೇರಿದಂತೆ ಅನೇಕ ಪೂಜ್ಯರು, ಧರ್ಮಗುರುಗಳು ಇದ್ದರು. ಕರಿಸಿದ್ದಪ್ಪ ಪಾಟೀಲ ಸ್ವಾಗತಿಸಿದರು. ಮಧುಸೂಧನ ಕಾಟಾಪುರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry