ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

7
ಕುರಕುಂಟಾ ಗ್ರಾಮದಲ್ಲಿ ಇತಿಹಾಸ ದಾಖಲಿಸಿದ

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

Published:
Updated:
ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

ಸೇಡಂ: ಸೇಡಂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕಿನ ಕುರಕುಂಟಾ ಗ್ರಾಮದ ಶ್ರೀ ಸಂಗಮೇಶ್ವರ ದೇವಾಲಯದ ಪ್ರಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷ ಪ್ರಭಾಕರ ಜೋಶಿ ಅವರ ಮೆರವಣಿಗೆ ಅದ್ದೂರಿಯಿಂದ ಜರುಗಿತು.ಮೆರವಣಿಗೆಯಲ್ಲಿ ವಿಶೇಷವಾಗಿ ಶೃಂಗಾರಗೊಂಡ ತೆರದ ಜೀಪಿನಲ್ಲಿ ಕನ್ನಡಾಂಬೆ ಮಾತೆ ಭುವನೇಶ್ವರಿ ಭಾವ ಚಿತ್ರವಿತ್ತು. ಬೆಳಿಗ್ಗೆ ಗ್ರಾಮದ ರೈಲು ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆಯನ್ನು ಗ್ರಾಪಂ ಉಪಾಧ್ಯಕ್ಷ ಸಂತೋಷ ಗೌಡ ಉದ್ಘಾಟಿಸಿದರು. ನಂತರ ಗ್ರಾಮದ ಮುಖ್ಯರಸ್ತೆ ಮೂಲಕ ಸಾಗಿದ ಮೆರವಣಿಗೆ ತತ್ವ ಪ ಶ್ರೀ ಮುರುಘೇಂದ್ರ ಸ್ವಾಮಿಗಳ ಮಹಾದ್ವಾರ ಮೂಲಕ ಶ್ರೀ ಮಡಿವಾಳಯ್ಯ ಸ್ವಾಮಿಗಳ ಮಹಾ ಮಂಟಪಕ್ಕೆ ತಲುಪಿತು.ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿದ್ದವು. ಮಾಜಿ ಅಧ್ಯಕ್ಷ  ಮತ್ತು ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ,  ಸಾಹಿತಿ ಡಾ. ಶ್ರೀಶೈಲ್ ಬಿರಾದಾರ, ನ್ಯಾಯವಾದಿ ವಿಶ್ವನಾಥರೆಡ್ಡಿ ಪಾಟೀಲ, ಈರಣ್ಣ ಮಂತಟ್ಟಿ, ತಾ.ಪಂ ಅಧ್ಯಕ್ಷ ರಾಮಯ್ಯ ಪುಜಾರಿ, ಮಲ್ಲಿಕಾರ್ಜುನ ಮುಗಳಿ, ವೆಂಕಟೇಶ ಸೊಂತ, ಶಂಕ್ರಣ್ಣ ಸಾಹುಕಾರ, ಅಣವೀರಪ್ಪ ದೇಸಾಯಿ, ಗ್ರಾ.ಪಂ ಸದಸ್ಯರು, ಮುಖಂಡರು, ಸಾಹಿತಿಗಳು, ಶಿಕ್ಷಕರು ಮತ್ತು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಕನ್ನಡಕ್ಕಾಗಿ ಕೈ ಎತ್ತು ಬರದು ನಿಮಗೆ ಆಪತ್ತು, ಅನ್ಯಭಾಷೆ ಪ್ರೀತಿಸು ಮಾತೃಭಾಷೆ ಬೆಂಬಲಿಸು ಹೀಗೆ ಹತ್ತು ಹಲವಾರು ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು. ರಾಷ್ಟ್ರದ ಧ್ವಜಾರೋಹಣವನ್ನು ಗ್ರಾ.ಪಂ ಉಪಾಧ್ಯಕ್ಷ ಸಂತೋಷಗೌಡ ಮಾಡಿದರೆ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಬೊಮ್ಮನಳ್ಳಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry