ಶುಕ್ರವಾರ, ನವೆಂಬರ್ 22, 2019
25 °C

ರಷ್ಯಾ: ಅಣೆಕಟ್ಟು ಕುಸಿದು 15 ಮಂದಿ ಸಾವು

Published:
Updated:

ಮಾಸ್ಕೊ: ಸೈಬೀರಿಯಾದ ಚಿನ್ನದ ಗಣಿ ಸಮೀಪದಲ್ಲಿರುವ ಅಣೆಕಟ್ಟು ಕುಸಿದಿದ್ದರಿಂದ ಕಾರ್ಮಿಕರಿದ್ದ ವಸತಿಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾದ ತುರ್ತು ಸ್ಥಿತಿ ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾದ ತುರ್ತು ನೆರವು ಸಚಿವಾಲಯ ಇದನ್ನು ದೃಢಪಡಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚಿನ್ನದ ಗಣಿ ಪ್ರದೇಶದ ಸುತ್ತಮುತ್ತಲಿನಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆ ಆಗಿದ್ದರಿಂದ ಅಣೆಕಟ್ಟು ಕುಸಿದಿದೆ. ಕೆಲಸದ ಸ್ಥಳದಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ರಾಷ್ಟ್ರದ ತನಿಖಾ ಸಮಿತಿ, ಕ್ರಿಮಿನಲ್‌ ತನಿಖೆ ಆರಂಭಿಸಿದೆ. 

 

ಪ್ರತಿಕ್ರಿಯಿಸಿ (+)