ಗುರುವಾರ , ನವೆಂಬರ್ 21, 2019
21 °C

ಸ್ವದೇಶಕ್ಕೆ ಮರಳಲು ನೆರವಾದ ಭಾರತದ ಉದ್ಯಮಿ

Published:
Updated:

ದುಬೈ: ಭಾರತ ಮೂಲದ ದುಬೈ ಉದ್ಯಮಿ ಜೋಗಿಂದರ್‌ ಸಿಂಗ್‌ ಸಲಾರಿಯಾ ಎಂಬುವರು ಜೈಲು ಶಿಕ್ಷೆಗೆ ಒಳಗಾಗಿದ್ದ 13 ಮಂದಿ ವಿದೇಶಿ ನಾಗರಿಕರ ಬಿಡುಗಡೆಗೆ ನೆರವಾಗಿದ್ದಾರೆ. ‌‌

ಜೈಲು ಪಾಲಾಗಿದ್ದವರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಉಗಾಂಡ, ನೈಜೀರಿಯಾ, ಇಥಿಯೋಪಿಯಾ ಮತ್ತು ಅಫ್ಗಾನಿಸ್ತಾನದ ಪ್ರಜೆಗಳು ಇದ್ದರು. ಇವರನ್ನು ಬಿಡುಗಡೆಗೊಳಿಸಿದ್ದಲ್ಲದೆ, ಇವರ ಸ್ವದೇಶ ಪ್ರಯಾಣದ ಟಿಕೆಟ್‌ ವೆಚ್ಚವನ್ನು ಸಲಾರಿಯಾ ಭರಿಸಿದ್ದಾರೆ ಎಂದು ’ಖಲೀಜ್‌ ಟೈಮ್ಸ್‌’ ಮಂಗಳವಾರ ವರದಿ ಮಾಡಿದೆ. 

‘ಪೆಹಲ್‌ ಇಂಟರ್‌ನ್ಯಾಷನಲ್‌ ಟ್ರಾನ್ಸ್‌ಪೋರ್ಟ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಲಾರಿಯಾ, ತಮ್ಮ ‘ಪೆಹಲ್‌ ಚಾರಿಟಬಲ್‌ ಟ್ರಸ್ಟ್‌’ ಮೂಲಕ ದುಬೈ ಪೊಲೀಸರ ಸಹಕಾರದೊಂದಿಗೆ ವಿದೇಶಿಯರಿಗೆ ನೆರವಾಗಿದ್ದಾರೆ. ಈ ವಿದೇಶಿಯರು ಸಣ್ಣ ಅಪರಾಧಗಳಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.

ಪ್ರತಿಕ್ರಿಯಿಸಿ (+)