ಸೋಮವಾರ, ನವೆಂಬರ್ 18, 2019
29 °C
ಪ್ರಜಾವಾಣಿ ವಾರ್ತೆ/ ಮಂಜುನಾಥ ಸ್ವಾಮಿ

ಸೌಲಭ್ಯ ನಿರೀಕ್ಷೆಯ ಚನ್ನವೀರ ನಗರ

Published:
Updated:

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಯ ವಾರ್ಡ್ 7ರಲ್ಲಿ ಬರುವ ಚನ್ನವೀರ ನಗರ ಎಲ್ಲ ಮೂಲ ಸೌಲಭ್ಯಗಳ ವಂಚಿತ ನಗರ. ಈ ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ಚರಂಡಿ ಇರದೆ ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ.ಇಲ್ಲಿ ಸರಿಯಾದ ರಸ್ತೆ, ಚರಂಡಿ, ನೀರು, ಶೌಚಾಲಯಗಳು, ಇಲ್ಲದೆ ಇಂದಿಗೂ ಜನರ ಕೆಲವು ಮೂಲ ಸೌಲಭ್ಯಗಳ ಸಮಸ್ಯೆಗಳಿಂದ  ಇಂದಿಗೂ ಈ ನಗರ ಸುಧಾರಣೆ ಕಾಣದೆ ಹಾಗೆ ಉಳಿದಿರುವುದು ಕಂಡು ಬರುತ್ತದೆ. ಈ ಕಾಲೊನಿಯ ಕೆಲವೊಂದು ಕಡೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು ಚರಂಡಿ ವ್ಯವಸ್ಥೆ ಇರದ ಕಾರಣ ಜನರು ಮಾತ್ರ ರಸ್ತೆ ಮೇಲೆ ಕೊಚ್ಚೆ ಹರಿಸುತಿದ್ದಾರೆ. ಕಸದ ತೊಟ್ಟಿ ಇರದ ಕಾರಣ ಕಸವನ್ನು ರಸ್ತೆಯ ಮೇಲೆ ಹಾಕುತ್ತಿದಾರೆ. ಒಂದೆಡೆ ಕೊಳಚೆ , ಇನ್ನೊಂದಡೆ ಚರಂಡಿ ನೀರು ಎಲ್ಲವೂ ರಸ್ತೆ ಮೇಲೆ ನಿಲ್ಲುತ್ತದೆ.ವಿದ್ಯುತ್ ಸಮಸ್ಯೆ: ಪದೇ ಪದೇ ವಿದ್ಯುತ್ ಕಡಿತ ಜನರಿಗೆ ತೊಂದರೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಆಗುತ್ತಿಲ್ಲ . ಇನ್ನೂ ಬಿಸಿಲಿನ ದೆಗೆ ತಾಳದೆ ಮನೆಯಲ್ಲಿ ಬಂದು ಕೂತು ವಿಶ್ರಾಂತಿ ತೆಗೆದುಕೊಳ್ಳುವ ಆಗುತ್ತಿದೆ.ನೀರಿನ ಸಮಸ್ಯೆ: ಇಲ್ಲಿ ಮೂರು ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತದೆ. ಅದು ಬಂದರೆ ಸರಿಯಾದ ಸಮಯಕ್ಕೆ ಬರುವದು ಇಲ್ಲ. ಜನರು ಕೂಲಿ ಕಾರ್ಮಿಕರಿದ್ದು, ಬೆಳಿಗ್ಗೆ 9ರೊಳಗೆ ಮನೆ ಕೆಲಸ ಮುಗಿಸಿಕೊಂಡು ಕೂಲಿಗೆ ಹೋಗ ಬೇಕಾಗುತ್ತದೆ. ಸಮಯಕ್ಕೆ ನೀರು ತುಂಬಿಸಿಕೊಳ್ಳುಲು ಆಗದೆ ಮತ್ತೆ ಕೊಳವೆ ಬಾವಿ ಗತಿ.`ಬೆಳಿಗ್ಗೆ ಮೆನಯಲ್ಲಿ ಅಡುಗೆ ಮಾಡುವುದನ್ನು ಬಿಟ್ಟು ನೀರು ತರಲು ಹೋಗುವ ಪಾಳಿ ಬಂದಿದೆ' ಎನ್ನುತಾರೆ ಗೃಹಣಿ ಶಾಂತಾಬಾಯಿ.

ಇನ್ನೂ ನಾಲ್ಕು ಕೊಳವೆ ಬಾವಿ ಇದ್ದು, ಇದ್ದರಲ್ಲಿ ಒಂದು ಕೆಟ್ಟು ನಿಂತಿದ್ದು ಇನ್ನುಳಿದವು ಸರಿಯಾಗಿವೆ. ಆದರೆ ನೀರು ತುಂಬಲು ವಿದ್ಯುತ್ ಇರದ ಕಾರಣ ಅದೂ ಸರಿಯಾದ ರೀತಿಯಲ್ಲಿ ಬಳಕೆ ಮಾಡಲಾಗುತ್ತಿಲ್ಲ.`ನೀರಿನ ಸಮಸ್ಯೆಯನ್ನು ಬೇಗ ಬಗೆ ಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬರು ಅಧಿಕಾರಿಗಳು ಇಲ್ಲಿನ ಸಮಸ್ಯೆಗಳ ಬಗ್ಗೆ ಕಿವಿಗೊಡುತ್ತಿಲ್ಲ. ಕೆಲವೊಂದು ಕಡೆ ಕೊಳಚೆ ನೀರು ಬರುತ್ತಿವೆ.' ಎನ್ನುತಾರೆ ಸುರೇಶ ಹೊನಗುಂಡಿ.ಶೌಚಾಲಯ ವ್ಯವಸ್ಥೆ: ಕೆಲವು ಮನೆಗಳಲ್ಲಿ ಶೌಚಾಲಯವಿದೆ. ಆದರೆ ಬಹುತೇಕರು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಇದೆ. ಹೆಂಗಸರಂತೂ ಬಹಿರ್ದೆಸೆಗೆ ಹೋಗಬೇಕಾದರೆ ಬೆಳಗ್ಗೆ ಬೇಗೆನೆ ಎದ್ದು ಅಥವಾ ರಾತ್ರಿಯಾದ ನಂತರ ಹೋಗುವಂತಾಗಿದೆ. ಆದರಿಂದ ಪಾಲಿಕೆ ವತಿಯಿಂದ ಚನ್ನವಿರ ನಗರದಲ್ಲಿ ಒಂದೆರಡು ಶೌಚಾಲಯ ನಿರ್ಮಾಣ ಮಾಡಬೇಕು; ವಾರ್ಡ್‌ನ ನೂತನ ಪಾಲಿಕೆಯ ಸದಸ್ಯ ವಿಠ್ಠಲ ಜಾಧವ ಅವರಿಂದ ಇಲ್ಲಿನ ಜನರು ಸುಧಾರಣೆ ಆಗಬಹುದು ನೀರಿಕ್ಷೆ ಇಟ್ಟಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)