ಸಚಿವರಿಗೆ ದೂರು-ಕಾಮಗಾರಿ ಶುರು

7

ಸಚಿವರಿಗೆ ದೂರು-ಕಾಮಗಾರಿ ಶುರು

Published:
Updated:
ಸಚಿವರಿಗೆ ದೂರು-ಕಾಮಗಾರಿ ಶುರು

ಚಿತ್ತಾಪುರ: ತಾಲ್ಲೂಕಿನ ಸಾತನೂರ ಕ್ರಾಸ್‌ದಿಂದ ಭಂಕಲಗಾ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆದಿದೆ. ಕಾಮಗಾರಿ ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರ ತನ್ನ ಮನಸ್ಸಿಗೆ ಬಂದಾಗೊಮ್ಮೆ ಅಲ್ಪಸ್ವಲ್ಪ ಕಾಮಗಾರಿ ಮಾಡಿಸಿ ನಿಧಾನ ಗತಿ ಅನುಸರಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರಿಗೆ ದೂರು ಸಲ್ಲಿಸಿದ ನಂತರ ಮತ್ತೇ ರಸ್ತೆ ನಿರ್ಮಾಣ ಕಾಮಗಾರಿ ಶುರುವಾಗಿದೆ.

 

ಕಾಮಗಾರಿ ನಿಧಾನವಾಗಿ ನಡೆಯುತ್ತಿರುವ ಕಾರಣ ಈ ಮೊದಲು ಮಾಡಿರುವ ಮೆಟಲ್ ರಸ್ತೆ ಕಿತ್ತಿ ಜೆಲ್ಲಿ ಕಲ್ಲು ತೇಲಿ ರಸ್ತೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದರಿಂದ ಸಾರಿಗೆ ಸಂಚಾರಕ್ಕೆ ವಾಹನ ಓಡಾಟಕ್ಕೆ ತೀವ್ರ ಕಷ್ಟವಾಗುತ್ತಿದೆ. ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಭಂಕಲಗಾ ಗ್ರಾಮದ ಬಿಜೆಪಿ ಮುಖಂಡರೊಬ್ಬರೂ ಸಚಿವರಿಗೆ ಈಚೆಗೆ ದೂರು ನೀಡಿದ್ದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಹಾಜರಿದ್ದರು. ಸಚಿವರಿಗೆ ನೀಡಿರುವ ದೂರಿನ ಪರಿಣಾಮವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

 

ರಸ್ತೆ ನಿರ್ಮಾಣ ಸಮಯದಲ್ಲಿ ಡಾಂಬರ್ ರಸ್ತೆಗೆಂದು ಹಾಕಿರುವ ಜೆಲ್ಲಿ ಕಲ್ಲಿನ ಎರಡು ಪಕ್ಕದಲ್ಲಿ ತಲಾ ಒಂದು ಮೀಟರ್ ಮುರುಮ್ ಹಾಕದೆ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಮತ್ತೇ ರಸ್ತೆ ಬೇಗನೆ ಹಾಳಾಗುತ್ತದೆ ಎನ್ನುವ ಆರೋಪ ಕೇಳಿ ಬಂದಿದೆ.

 

ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಸಬೇಕು. ರಸ್ತೆಯ ಪಕ್ಕದಲ್ಲಿ ಮುರುಮ್ ಹಾಕಬೇಕು. ರಸ್ತೆ ಬೇಗನೆ ಹಾಳಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇದರ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರರು ಗಮನ ಹರಿಸಬೇಕು ಎಂದು ಭಂಕಲಗಾ, ಹೊಸೂರ ಗ್ರಾಮದ ಜನರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry