ಬುಧವಾರ, ನವೆಂಬರ್ 20, 2019
27 °C

ರಸ್ತೆ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

Published:
Updated:

ಗುಲ್ಬರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಬಿದ್ದಾಪುರ ಕಾಲೊನಿ ಬಳಿಯ ರೈಲ್ವೇ ಲೆವೆಲ್ ಕ್ರಾಸ್‌ಗೆ ಮೇಲು ಸೇತುವೆ ನಿರ್ಮಿಸಬೇಕು, ನಗರದ ಸರಾಫ್ ಬಜಾರ, ಬಾಂಡಿ ಬಜಾರ, ಫೋರ್ಟ್ ರಸ್ತೆ, ಚಪ್ಪಲ ಬಜಾರ ರಸ್ತೆ ವಿಸ್ತರಣೆ, ಅಪೂರ್ಣ ರಸ್ತೆ ಶೀಘ್ರವೇ ಪೂರ್ಣಗೊಳಿಸಬೇಕು, ವಿಧವಾ ವೇತನ ಸಂಧ್ಯಾಸುರಕ್ಷೆ ವೇತನ, ಅಂಗವಿಕಲರ ವೇತನ ಮುಂತಾದ ಸೌಲರ್ಭಯ ಶೀಘ್ರ ವಿತರಣೆ  ಮಾಡಬೇಕು ಮುಂತಾದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.ಸಂಘಟನೆಯ ಮುಖಂಡರಾದ ಅಮೃತ ಪಾಟೀಲ ಸಿರನೂರ, ರವಿ ಒಂಟಿ, ದತ್ತು ಭಾಸಗಿ, ಸಂತೋಷ ತಳವಾರ, ಶಿವಾಜಿ ಚವ್ಹಾಣ, ಅಮಿತ ಪಾಟೀಲ, ಸುನೀಲ ಚವ್ಹಾಣ ಮತ್ತಿತರರು ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)