ಮಂಗಳವಾರ, ನವೆಂಬರ್ 19, 2019
23 °C

ವಿದ್ಯುತ್ ಉಳಿಸಿ- ಬಿಲ್ ಕಡಿಮೆಗೊಳಿಸಿ: ಜೆಸ್ಕಾಂ

Published:
Updated:

ಗುಲ್ಬರ್ಗ: ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಜೆಸ್ಕಾಂ) ಗುಲ್ಬರ್ಗ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಗುಲ್ಬರ್ಗ, ಆಳಂದ, ಅಫಜಲಪುರ ತಾಲ್ಲೂಕಿನ ವಿದ್ಯುತ್ ಗ್ರಾಹಕರು ಹಾಗೂ ಎಲ್ಲ ವಿದ್ಯುತ್ ಬಳಕೆದಾರರು ತೀವ್ರ ವಿದ್ಯುತ್ ಅಭಾವವಿರುವ ಪ್ರಯುಕ್ತ ಉಪಯುಕ್ತ ಅಂಶಗಳನ್ನು ಪಾಲಿಸಿ ವಿದ್ಯುತ್ ಉಳಿತಾಯ ಮಾಡಬೇಕು. ಆ ಮೂಲಕ ತಮ್ಮ ವಿದ್ಯುತ್ ಬಿಲ್ ವೆಚ್ಚವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.1.ವಿದ್ಯುತ್‌ದೀಪ, ಬಿಸಿನೀರು ಮತ್ತಿತರ ಉಪಯೋಗಕ್ಕೆ ಅತಿ ಹೆಚ್ಚು ಸೌರಶಕ್ತಿ ಉಪಕರಣ ಬಳಸಿ. 2.ಅವಶ್ಯಕತೆ ಇಲ್ಲದಿದ್ದರೆ ವಿದ್ಯುದ್ದೀಪ ಹಾಗೂ ಇತರೆ ಉಪಕರಣಗಳನ್ನು ಆಫ್ ಮಾಡಿ.  3.ಸೂರ್ಯನ ಬೆಳಕನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿ 4.ಹಗಲಿನಲ್ಲಿ ವಿದ್ಯುತ್ ಬಳಕೆಯನ್ನು ತಪ್ಪಿಸಿ. 5. ಸಿ.ಎಫ್.ಎಲ್. ಬಲ್ಬುಗಳನ್ನು ಹಾಗೂ ಟ್ಯೂಬ್‌ಲೈಟ್‌ಗಳನ್ನು ಬಳಸಿ. 6.ಅನಾವಶ್ಯಕ ರೆಫ್ರಿಜರೇಟರಿನ ಬಾಗಿಲನ್ನು ತೆರೆಯಬೇಡಿ. 7.ಅಲಂಕಾರಿಕ ಹಾಗೂ ಕನ್‌ಸೀಲ್ಡ್ ದೀಪ ವ್ಯವಸ್ಥೆಯನ್ನು ತಪ್ಪಿಸಿ. 8.ಶೈತ್ಯೀಕರಣ ಹಾಗೂ ಹವಾನಿಯಂತ್ರಣ ಉಪಕರಣಗಳನ್ನು ಮಿತವಾಗಿ ಬಳಸಿ. 9. ಜನ ಇಲ್ಲದಾಗ ರಕ್ಷಣಾ ದೀಪ ಹೊರತು ಉಳಿದವುಗಳನ್ನು ಆರಿಸಿ. 10.ಮೋಟಾರುಗಳು ಜಖಂಗೊಳ್ಳುವುದನ್ನು ತಪ್ಪಿಸಲು, ಕೆ.ವಿ.ಎ. ಶುಲ್ಕಗಳನ್ನು ಕಡಿಮೆಗೊಳಿಸಲು ಮೋಟಾರುಗಳಿಗೆ ಕೆಪಾಸಿಟರುಗಳನ್ನು ಬಳಸಿ.11.ಅವಶ್ಯಕತೆಗೆ ತಕ್ಕಂತೆ ಮೋಟಾರುಗಳನ್ನು ಆಯ್ಕೆ ಮಾಡಿಕೊಳ್ಳಿ ಹೆಚ್ಚು ಸಾಮರ್ಥ್ಯದ ಮೋಟಾರ್ ಬದಲು ಹೆಚ್ಚು ದಕ್ಷತೆಯುಳ್ಳ ಮೋಟಾರುಗಳನ್ನು ಬಳಸಿ.12.ಕಡಿಮೆ ತಡೆಯುಳ್ಳ ಫುಟ್ ವಾಲ್ವುಗಳು ಶೇ. 10ರವರೆಗೂ ವಿದ್ಯುತ್‌ನ್ನು ಹಾಗೂ ಗಟ್ಟಿಯಾದ ಪಿ.ವಿ.ಸಿ.ಯ ನೀರೆಳೆಯುವ ಪೈಪುಗಳು ಶೇಕಡಾ 10ರವರೆಗೂ ವಿದ್ಯುತ್‌ನ್ನು ಉಳಿಸುತ್ತವೆ. 13.ನೀರಿನ ಏರು ಮತ್ತು ವಿಸರ್ಜನೆಯ ಎತ್ತರಕ್ಕೆ ತಕ್ಕ ಸಾಮರ್ಥ್ಯದ ಪಂಪ್‌ಸೆಟ್‌ಗಳನ್ನು ಹಾಗೂ ವಿದ್ಯುತ್ ಬಿಲ್ ಮೊತ್ತವನ್ನು ಕಡಿಮೆಗೊಳಿಸಲು ಸೌರಶಕ್ತಿ ವಿದ್ಯುತ್‌ನ್ನು ಬಳಸಿ.

ಪ್ರತಿಕ್ರಿಯಿಸಿ (+)