ಶುಕ್ರವಾರ, ನವೆಂಬರ್ 15, 2019
22 °C
ಹಲವರಿಗೆ ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ

11ರಂದು`ಚೈತ್ರೋತ್ಸವ-2013'ಕಾರ್ಯಕ್ರಮ

Published:
Updated:
11ರಂದು`ಚೈತ್ರೋತ್ಸವ-2013'ಕಾರ್ಯಕ್ರಮ

ಗುಲ್ಬರ್ಗ: ಡಾ. ಪಿ.ಎಸ್.ಶಂಕರ ಪ್ರತಿಷ್ಠಾನವು ಯುಗಾದಿ ಪ್ರತಿಪದ ದಿನದಂದು (ಏಪ್ರಿಲ್ 11) ಬೆಳಿಗ್ಗೆ 10.30ಕ್ಕೆ ಸಂಗೀತ-ನೃತ್ಯ-ಯೋಗ ಹಾಗೂ ಕರಾಟೆ ಪ್ರದರ್ಶನದ `ಚೈತ್ರೋತ್ಸವ- 2013' ಕಾರ್ಯಕ್ರಮವನ್ನು ನಗರದ ರೋಟರಿ ಕ್ಲಬ್‌ನ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಿದೆ.ಚಿತ್ತಾರಿ ಫೌಂಡೇಶನ್ ಅಧ್ಯಕ್ಷ ವಿ.ಎನ್ .ಚಿತ್ತಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ ಅಧ್ಯಕ್ಷೆ  ಅಂಬಿಕಾ ಶಂಕರ ವಹಿಸುವರು.ಭರತನಾಟ್ಯ ಕಲಾವಿದೆ ಚಿನ್ಮಯಿ ವೀಣಾ ಚಂದ್ರಕಾಂತ, ಕೊಳಲುವಾದಕ ಮಣಿಕಂಠ ವಿ. ಕುಲಕರ್ಣಿ, ಬಹು ಪ್ರತಿಭಾ ಸಂಪನ್ನ ಗುರುರಾಜ ಎಸ್.ಪಾಟೀಲ, ಕರಾಟೆಪಟು ಸಾಯಿನಾಥ ರೆಡ್ಡಿ ಎಸ್.ಪಾಟೀಲ ಹಾಗೂ ಯೋಗ ಪಟು ಅನೂಷಾ ವಿ. ಭಟ್ ಅವರಿಗೆ 2013ನೇ ಸಾಲಿನ ಡಾ. ಪಿ.ಎಸ್.ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಈ ಪ್ರಶಸ್ತಿಯು ತಲಾ 1,101 ರೂಪಾಯಿ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಫಲ-ಪುಷ್ಪ ತಾಂಬೂಲ ಒಳಗೊಂಡಿರುತ್ತದೆ.ಕಳೆದ ಹದಿಮೂರು ವರ್ಷಗಳಲ್ಲಿ ಈವರೆಗೆ, 16 ವರ್ಷದೊಳಗಿನ ಐವತ್ತೈದಕ್ಕೂ ಹೆಚ್ಚು ಬಾಲ ಕಲಾವಿದರಿಗೆ ಡಾ. ಪಿ.ಎಸ್.ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.ಇದೇ ಸಂದರ್ಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪುನರಾಯ್ಕೆಗೊಂಡ ಬಾಬುರಾವ್ ಯಡ್ರಾಮಿ ಹಾಗು ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ 2012ನೇ ಸಾಲಿಗೆ ಅತ್ಯುತ್ತಮ ಪ್ರಕಾಶಕರ ಪ್ರಶಸ್ತಿಗೆ ಭಾಜನರಾದ ಬಸವರಾಜ ಕೊನೇಕ್ ಅವರನ್ನು ಸನ್ಮಾನಿಸಲಾಗುವುದು.ಡಾ. ಪಿ.ಎಸ್.ಶಂಕರ ಪ್ರತಿಷ್ಠಾನ ಹಾಗೂ ಶ್ರಿಗುರು ಪುಟ್ಟರಾಜ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ಅಯೋಜಿಸಿರುವ `ಚೈತ್ರೋತ್ಸವ' ಕಾರ್ಯಕ್ರಮಕ್ಕೆ ಕಲಾಸಕ್ತರು ಆಗಮಿಸುವಂತೆ ಪ್ರತಿಷ್ಠಾನದ ಸಹ ಕಾರ್ಯದರ್ಶಿ ಎಂ.ಸದಾನಂದ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)