ಸೋಮವಾರ, ನವೆಂಬರ್ 18, 2019
21 °C
ನದಿಯಲ್ಲಿ ಕಾಲು ಜಾರಿ ಯುವಕನ ಸಾವು

ಸಿಟ್ಟಿಗೆದ್ದ ಗ್ರಾಮಸ್ಥರಿಂದ 3 ಹಿಟಾಚಿ ಭಸ್ಮ

Published:
Updated:

ಸೇಡಂ: ಯುವಕನೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದಲ್ಲಿ ಜರುಗಿದೆ.

ಅಲ್ಲಿಸಾಬ್ ಶುಕರಮಿಯ್ಯ (24) ಮೃತಪಟ್ಟ ದುರ್ದೈವಿ. ಕಾಗಿಣಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದ ನಿರ್ಮಾಣವಾಗಿದ್ದ ಹೊಂಡಕ್ಕೆ ಬಿದ್ದ ಯುವಕ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದರಿಂದ ಕುಪಿತಗೊಂಡ ಗ್ರಾಮಸ್ಥರು ಅಲ್ಲೇ ನಿಂತಿದ್ದ 3 ಹಿಟಾಚಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಮರಳು ಮಾಫಿಯಾದಲ್ಲಿ ಸ್ಥಳೀಯ ಪೊಲೀಸರ ಕೈವಾಡವೂ ಇದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಉದ್ರಿಕ್ತಗೊಂಡ ಗ್ರಾಮಸ್ಥರು ಮಳಖೇಡ ಪಿಎಸ್‌ಐ ಪ್ರಭು ದುದಗಿ ಅವರನ್ನು ತರಾಟೆಗೆ ತೆಗೆದುಕೊಂಡರು.ಯುವಕನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಕುಟುಂಬದ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ (ಜಿಕೆ), ತಾಲ್ಲೂಕು ಅಧ್ಯಕ್ಷ ನಾಗೇಂದ್ರಪ್ಪ ದುಗನೂರ, ದಲಿತ ಪ್ಯಾಂಥರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ತೊಟ್ನಳ್ಳಿ, ಬಸವರಾಜ ರೇವಗೊಂಡ ಭೇಟಿ ನೀಡಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದರು. ಹೆಚ್ಚುವರಿ ಎಸ್‌ಪಿ ಕಾಶಿನಾಥ ತಳಕೇರಿ, ಡಿವೈಎಸ್‌ಪಿ, ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ ಬನ್ನಟ್ಟಿ, ತಹಸಿಲ್ದಾರ ಪ್ರಕಾಶ ಕುದರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಕ್ರಿಯಿಸಿ (+)