ದ್ವಿಪಥ ರಸ್ತೆ ನಿರ್ಮಾಣ ಆರಂಭ

7

ದ್ವಿಪಥ ರಸ್ತೆ ನಿರ್ಮಾಣ ಆರಂಭ

Published:
Updated:
ದ್ವಿಪಥ ರಸ್ತೆ ನಿರ್ಮಾಣ ಆರಂಭ

ಚಿತ್ತಾಪುರ: ಪಟ್ಟಣದ ಹೊರವಲಯದ ಚಿತ್ತಾಪುರ ಗುಲ್ಬರ್ಗ ಮುಖ್ಯ ರಸ್ತೆಯ ಮಾರ್ಗದ ಕೈಗಾರಿಕೆ ಪ್ರದೇಶದಿಂದ ಭುವನೇಶ್ವರಿ ಚೌಕ್‌ವರೆಗಿನ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರಿಂದ ಸಾರ್ವಜನಿಕರಿಗೆ, ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಹರ್ಷ ಮೂಡಿಸಿದೆ.ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನ ಪ್ಯಾಕೇಜ್‌ನಲ್ಲಿ ದ್ವಿಪಥ ರಸ್ತೆ ನಿರ್ಮಾಣ, ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ, ರಸ್ತೆಯ ಮಧ್ಯದಲ್ಲಿ ಸ್ಟ್ರೀಟ್ ಲೈಟ್ ಅಳವಡಿಸಲು ಹೀಗೆ ಒಟ್ಟು 1.70 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿ ಶುರು ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಪಾಶಾಮಿಯ್ಯಾ ಖುರೇಷಿ, ಮುಖ್ಯಾಧಿಕಾರಿ ಹಣಮಂತಗೌಡ ಶನಿವಾರ ಪ್ರಜಾವಾಣಿಗೆ ತಿಳಿಸಿದರು.

 

ಈ ರಸ್ತೆಯು ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸಾರ್ವಜನಿಕ ಪ್ರಯಾಣಿಕರು ದಿನಾಲೂ ನರಕ ಯಾತನೆಯ ಪ್ರಯಾಣ ಮಾಡುವಂತ್ತಾಗಿತ್ತು. ಮಳೆಗಾಲದಲ್ಲಿ ಈ ರಸ್ತೆ ಅಕ್ಷರಶಃ ಕೆಸರು ರಾಡಿಯಿಂದ ಕೂಡಿ ಜನರು ಮಾನಸಿಕ ಕಿರಿಕಿರಿ ಅನುಭವಿಸಬೇಕಾಗಿತ್ತು. ಬೇಸಿಗೆಯಲ್ಲಿ ಧೂಳಿನ ಕಾಟದಿಂದ ಕಂಗಾಲಾಗುವಂತೆ ಮಾಡಿತ್ತು. ಈಗ ರಸ್ತೆ ಕಾಮಗಾರಿ ಶುರುವಾಗಿದ್ದರಿಂದ ಜನರಿಗೆ ತುಂಬಾ ಸಂತೋಷ ಉಂಟು ಮಾಡಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿವೆ.ಪಟ್ಟಣಕ್ಕೆ ದ್ವಿಪಥ ರಸ್ತೆ ನಿರ್ಮಾಣ ಆಗುತ್ತದೆ ಎನ್ನುವ ಇಲ್ಲಿನ ಸಾರ್ವಜನಿಕರ ದಶಕಗಳ ಕನಸು ಈಗ ನನಸಾಗುತ್ತಿದೆ. ಉತ್ತಮ ಗುಣಮಟ್ಟದ ರಸ್ತೆ, ಚರಂಡಿ, ಲೈಟ್ ವ್ಯವಸ್ಥೆ ಮಾಡುವಲ್ಲಿ ಪುರಸಭೆ ಆಡಳಿತ ಕಾಮಗಾರಿ ಮಾಡಿಸುತ್ತಿರುವ ಗುತ್ತಿಗೆದಾರರ ಮೇಲೆ ಹಿಡಿತವಿಟ್ಟುಕೊಂಡು ಸರಿಯಾದ ಕಾಮಗಾರಿ ಮಾಡಿಸಬೇಕು. ಮಳೆಗಾಲ ಆರಂಭವಾಗುವ ಮುನ್ನವೇ ಆದಷ್ಟು ಬೇಗ ಕಾಮಗಾರಿ ಮುಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ನಗರ ವಾಸಿಗಳು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry