ಬುಧವಾರ, ಏಪ್ರಿಲ್ 21, 2021
31 °C

ಅರ್ಥವಿಲ್ಲದ ಶರೀರ ಇದ್ದರೇನು ಸತ್ತರೇನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಅಕ್ಕಮಾಹದೇವಿ ಹೇಳಿದಂತೆ ತುತು ಬಿಟ್ಟ ಗಡಿಗೆ ತೆಗೆದುಕೊಂಡರೆ ಏನು ಪ್ರಯೋಜನ, ಹಾಗೆ ಪ್ರತಿಯೋಬ್ಬರ ಶರೀರದಲ್ಲಿ ಮನಸ್ಸು ಇದೆ. ಆದರೆ  ಅದನ್ನು ಅರ್ಥಮಾಡಿಕೊಂಡು ಬದುಕದಿದ್ದರೆ ಏನು ಪ್ರಯೋಜನ ಇಂಥ ಶರಿರ ಇದ್ದರೇನು ಸತ್ತರೇನು ಎಂದು ಹೊನ್ನಕೀರಣಗಿ ಕರಿಬಸವೇಸ್ವರ ಉತ್ತರಾಧಿಕಾರಿ ಚಂದ್ರಗುಂಡ ಶ್ರೀ ಹೇಳಿದರು.ಹೊನ್ನಕೀರಣಗಿ ಶ್ರೀ ಕರಿಬಸವೇಶ್ವರವರ 99ನೇ ವರ್ಧಂತಿ ಮಹೋತ್ಸವ ಅಂಗವಾಗಿ ಇಂಗಳಗಿ ಗ್ರಾಮದಲ್ಲಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿರುವ ಶರಣ ಬಸವೇಸ್ವರ ಪುರಾಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

 

ಕಿರಿಯರು ಹಿರಿಯರು ಸೇರಿದಂತೆ ಯಾವುದೇ ಬೇದ ಭಾವವಿಲ್ಲದೆ ಅಭಿಮಾನದಿಂದ ಪೂಜ್ಯರ ಸೇವೆ ಮಾಡುತ್ತಿದ್ದಿರಿ ನಮಗೂ ನಿಮಗೂ ಏತ್ತಣ ಸಂಬಂಧವೇನಯ್ಯ ಎಂಬಅಲ್ಲಮಪ್ರಭುರರ ವಚನಗಳ ಮೂಲಕ ಬದುಕಿನ ಅರ್ಥ ತಿಳಿಸಿದರು.ಇಂದಿನ ಸಮಾಜ ಆದುನಿಕತೆಗೆ ದಾಸರಾಗಿ ಹಿಂದಿನ ಸನಾತನ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ಕೃಷಿ ಪದ್ದತಿ ಮರೆತು ಬಿಡುತ್ತಿದ್ದಾರೆ. ಅವುಗಳನ್ನು ಪುನ: ಕಾರ್ಯರೂಪಕ್ಕೆ ತಂದು ಶರಣರ ಸಂದೇಶ, ಪುರಾತನ ಗೋಮೂತ್ರ ಚಿಕಿತ್ಸೆ ಪದ್ದತಿ,  ಗೋವುಗಳ ಸಗಣಿಯಿಂದ ಕಲ್ಪಬಸ್ಮ(ಹಿಬೂತಿ) ತಯಾರಿಸುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಮಾನವೀಯ ಸಮಾಜ ನಿರ್ಮಾಣವೇ ನಮ್ಮ ಗುರಿಯಾಗಿದೆ ಎಂದು ಪ್ರಜಾವಾಣಿಗೆ ತಮ್ಮ ಮೂಲ ಉದ್ದೇಶ ತಿಳಿಸಿದರು.

 

ಜನಜಾಗೃತಿ ಪಾದಯಾತ್ರೆ: ಮಾಲಗತ್ತಿ, ಬಳೋಡಗಿ, ಕಡಬೂರ್, ಲಾಡ್ಲಾಪುರ, ವಾಡಿ, ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಗೆ ಧರ್ಮ ಭೋದನೆ ಮಾಡಲಾಗಿದೆ. ಏಪ್ರಿಲ್ 4ರಂದು  ಕರಿಬಸವೇಸ್ವರ ಶ್ರೀಗಳ ತುಲಾಭಾರ ನಡೆಯುವುದು. ಕಾರ್ಯಕ್ರಮದಲ್ಲಿ ಭಕ್ತರು ಕೃಷಿಗೆ ಸಂಬಂಧಪಟ್ಟ ಎತ್ತು, ಗಾಡಿ, ಇನ್ನಿತರ ಸಲಕರಣೆಗಳು ನೀಡಿದ್ದಾರೆ. ಅವುಗಳನ್ನು ಹರಾಜು ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.

 

ಬಸವರಾಜ ಸ್ಥಾವರ್ ಮಠ, ಈರಣ್ಣಾ ಸಾಹು, ನಾಗಣ್ಣಾ ಸಾಹು, ನಾಗಭೂಷಣ, ವೀರಂತಯ್ಯಾ ಸ್ವಾಮಿ, ಅಣ್ಣರಾವ ಪಾಟೀಲ್, ಸಂಗಣ್ಣಾಗೌಡ ಪಾಟೀಲ್, ರುದ್ರು ಸಾಹು, ಶಿವು ಬಾಗೋಡಿ, ಅಶೋಕ ಹಳಿಮನಿ ಇದ್ದರು. ಪುರಾಣ-ಪ್ರವಚನ ಮಡಿವಾಳಯ್ಯ ಶಾಸ್ತ್ರಿಗಳಿಂದ ನಡೆಯುತ್ತಿದೆ. ಶರಣರ ಜೋಳದ ರಾಶಿ ಮಾಡಲಾಯಿತು. ದಿನಬೆಳಿಗ್ಗೆ ಇಷ್ಟಲಿಂಗ ಪೂಜಾ, ಗೋಪೂಜೆ, ಗೋಮೂತ್ರ ಹಿಡಿಯಲಾಗುತ್ತಿದೆ  ಎಂದು ಬಸವರಾಜ ಸ್ಥಾವರ್ ಮಠ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.