ಬುಧವಾರ, ನವೆಂಬರ್ 13, 2019
21 °C

`ಸಾಮಾಜಿಕ ಸ್ವಾಸ್ಥ್ಯಕ್ಕೆ ಬರವಣಿಗೆ'

Published:
Updated:

ಗುಲ್ಬರ್ಗ: ಕ್ರಿಯಾಶೀಲತೆ, ಸ್ವಸ್ಥ ಮನಸ್ಸು ಹಾಗೂ ಕನಸುಗಾರಿಕೆ ಸೃಜನಶೀಲತೆಗೆ ಇಂಬು ನೀಡುತ್ತದೆ. ಬರವಣಿಗೆ ಆತ್ಮತೃಪ್ತಿ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ನೀಡುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ  ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕಿ  ಡಾ. ಶಶಿಕಲಾ ಮೋಳ್ದಿ ಅಭಿಪ್ರಾಯಪಟ್ಟರು.ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನ ಕನ್ನಡ ಸಾಹಿತ್ಯ ಸಂಘ, ಕನ್ನಡ ಸಾಹಿತ್ಯ ವಿಭಾಗಗಳ ಆಶ್ರಯದಲ್ಲಿ ಈಚೆಗೆ ನಡೆದ  `ಸೃಜನಶೀಲ ಬರವಣಿಗೆ: ಸರ್ಟಿಫಿಕೆಟ್ ಕೋರ್ಸ್'ನ ಸಮಾರೋಪದಲ್ಲಿ  ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಎಸ್. ವಿ. ಧೂಳಗುಂಡಿ,  `ಟಿ.ವಿ., ಕಂಪ್ಯೂಟರ್‌ಗಳ  ಬಳಕೆಯಿಂದಾಗಿ ಬರವಣಿಗೆಯ ಅಭ್ಯಾಸ ನಿಂತುಹೋಗಿದೆ. ಈ  ಹಿನ್ನೆಲೆಯಲ್ಲಿ  ಬರೆಯಲು ಪ್ರೋತ್ಸಾಹಿಸುವ ಕೋರ್ಸ್ ನಡೆಸಿ' ಯಶಸ್ವಿಯಾಗಿ ಪೂರೈಸಿದ ಕನ್ನಡ ವಿಭಾಗದ ಪ್ರಾಧ್ಯಾಪಕರನ್ನು ಅಭಿನಂದಿಸಿದರು.  ಕೋರ್ಸ್‌ನ ಫಲಾನುಭವಿ ವಿದ್ಯಾರ್ಥಿನಿಯರಾದ  ಸಂಧ್ಯಾರಾಣಿ, ಅಶ್ವಿನಿ, ಮಹಾದೇವಿ  ಮಾತನಾಡಿದರು. ವಿದ್ಯಾರ್ಥಿನಿಯರು ಸ್ವರಚಿತ ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಬಿ.ಎ. ಕನ್ನಡ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು  ಬೀಳ್ಕೊಡಲಾಯಿತು.ವಿದ್ಯಾರ್ಥಿನಿಯರಾದ  ಯಮುನಮ್ಮ, ಗಂಗಮ್ಮ  ಮಾತನಾಡಿದರು.ಕನ್ನಡ ವಿಭಾಗ ಪ್ರಾಧ್ಯಾಪಕ  ಡಾ. ಈಶ್ವರಯ್ಯ ಮಠ ಸ್ವಾಗತಿಸಿದರು, ಮುಖ್ಯಸ್ಥರಾದ ಡಾ. ಶಾಂತಾ ಅತಿಥಿ ಪರಿಚಯ ಮಾಡಿದರು. ಕೋರ್ಸ್‌ನ ಸಂಚಾಲಕ ಡಾ. ನಾಗೇಂದ್ರ ಮಸೂತಿ ಪ್ರಾಸ್ತಾವಿಕ ಮಾತನಾಡಿದರು.  ಪವಿತ್ರಾ ಪರಶುರಾಮ ವಂದಿಸಿದರು.  ದೀಪಿಕಾ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)